

ಪ್ರತಿಧ್ವನಿ ಯಲ್ಲಾಪುರ : ಪಟ್ಟಣ ಪಂಚಾಯತದಲ್ಲಿ ಸಿಬ್ಬಂದಿಗಳ ಕೊರತೆಯಿಂದ ಸಾರ್ವಜನಿಕ ಸೇವೆಗಳ ನಿರ್ವಹಣೆಗೆ ತೊಂದರೆಯಾಗುತ್ತಿರುವುದು ಈಗಾಗಲೆ ತಿಳಿದ ಸತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಅವಕಾಶ ಪಟ್ಟಣ ಪಂಚಾಯತ್ ಗೆ ಸಿಕ್ಕರೆ ಈ ವೇಳೆ ಹಲವು ವರ್ಷಗಳಿಂದ ತಮ್ಮ ಇಲಾಖೆ ಅಡಿಯಲ್ಲೆ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಮಕ್ಕಳಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಮತ್ತು ಅಖಿಲ ಕರ್ನಾಟಕ ಅಹಿಂದ ವೇದಿಕೆ ಆಗ್ರಹವಾಗಿದೆ ಎಂದು ವೇದಿಕೆ ಸ್ಥಾಪಕ ಅಧ್ಯಕ್ಷ ದ್ಯಾಮಣ್ಣ ಬೋವಿ ವಡ್ಡರ್ ಪ್ರತಿಧ್ವನಿಗೆ ಪ್ರತಿಕ್ರಿಯಿಸಿದ್ದಾರೆ.



ಇದರಿಂದ ಸಿಬ್ಬಂದಿಗಳ ಕೊರತೆಯನ್ನು ನಿವಾರಿಸುವುದರ ಜೊತೆಗೆ ತಮ್ಮಲ್ಲೆ ಹಲವು ವರ್ಷಗಳ ಕಾಲ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಕುಟುಂಬಗಳಿಗೂ ಆರ್ಥಿಕವಾಗಿ ನೆರವಾಗಲಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಪಟ್ಟಣದ ವ್ಯಾಪ್ತಿ ದೊಡ್ಡದಾಗಿದ್ದು ತ್ಯಾಜ್ಯ ನಿರ್ವಹಣೆ, ವಾಹನಗಳ ಚಾಲನೆ,ಕಸ ನಿರ್ವಹಣಾ ಘಟಕದ ವ್ಯವಸ್ಥೆ, ಹಾಗು ಕಚೇರಿಯ ಕೆಲಸಗಳಿಗೆ ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇದ್ದು ಈ ಎಲ್ಲಾ ಕೆಲಸಗಳಿಗೆ ಬಹಳಷ್ಟು ವರ್ಷಗಳಿಂದ ಊರಿನ ಸ್ಚಚ್ಚತೆಗಾಗಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಕೆಲಸ ನಿರ್ವಹಿಸುತ್ತಾ ಬಂದಿರುವ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕ ಕುಟುಂಬದ ಮಕ್ಕಳಿಗೆ ಅರ್ಹತೆ ಇದ್ದಲ್ಲಿ ಮೊದಲ ಆದ್ಯತೆ ಆದಾರದಲ್ಲಿ ಕೆಲಸ ನೀಡುವುದು ಪ್ರತಿಯೊಬ್ಬ ಸಾರ್ವಜನಿಕರ ಕರ್ತವ್ಯ ಆಗಿದೆ.

ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಸ್ಥಳೀಯ ಆಡಳಿತ ನಿರ್ಧಾರ ಕೈಗೊಂಡು ಹೊರಗುತ್ತಿಗೆ ಆದಾರದಲ್ಲಿ ಕೆಲಸಕ್ಕೆ ಜನರನ್ನು ನೇಮಿಸಿಕೊಳ್ಳಲು ಮುಂದಾದರೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕ ಮಕ್ಕಳಿಗೆ ಅರ್ಹತೆ ಆದಾರದಲ್ಲಿ ಉದ್ಯೋಗ ನೀಡಬೇಕಿದೆ, ಈ ಸಂಬಂದ ಸ್ಥಳೀಯ ಶಾಸಕರಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಸಂಘಟನೆ ಅಡಿಯಲ್ಲಿ ಮನವಿ ಮಾಡಲಾಗುವುದು. ದ್ಯಾಮಣ್ಣ ಬೋವಿ ವಡ್ಡರ್, ಅಖಿಲ ಕರ್ನಾಟಕ ಅಹಿಂದ ಸಂಘಟನೆ ಸ್ಥಾಪಕಾಧ್ಯಕ್ಷ,ಯಲ್ಲಾಪುರ














Prathidvani Yellapura