Breaking News

ಕೈಗಾ ಪರಿಸರದಲ್ಲಿ ಕಲ್ಲು ಕ್ವಾರಿಗೆ ಅನುಮತಿ!! ಪಶ್ಚಿಮ ಘಟ್ಟಗಳ ಸರ್ವನಾಶಕ್ಕೆ ನಡೆದಿದೆಯ ಸಿದ್ದತೆ.?

ಪ್ರತಿಧ್ವನಿ ಯಲ್ಲಾಪುರ : ಪಶ್ಚಿಮ ಘಟ್ಟದ ತಪ್ಪಲಿನಲ್ಲಿ, ಕೈಗಾದಿಂದ ಕೇವಲ 25 ಕಿ.ಮೀ. ದೂರದಲ್ಲಿರುವ ತಳಕೇಬೈಲ ಗಣಿಗಾರಿಕೆಯನ್ನು ಪರಿಸರ ನಾಶದ ಕಾರಣದಿಂದಲೇ ಮುಚ್ಚಲಾಗಿದೆ. ಅದೇ ರೀತಿ, 55 ಕಿ.ಮೀ. ದೂರದಲ್ಲಿರುವ ಬಿಸಗೋಡ ಗಣಿಗಾರಿಕೆಯನ್ನೂ ಪರಿಸರದ ಮೇಲಿನ ದುಷ್ಪರಿಣಾಮಗಳಿಂದ ಸ್ಥಗಿತಗೊಳಿಸಲಾಗಿದೆ. 40 ಕಿ.ಮೀ. ದೂರದಲ್ಲಿರುವ ಕಳಚೆ ಗ್ರಾಮದಲ್ಲಿ ನಿರಂತರ ಭೂಕುಸಿತ ಉಂಟಾಗುತ್ತಿದ್ದು, ಬಂಡೆಗಲ್ಲುಗಳು ರಸ್ತೆಗೆ ಜಾರುತ್ತಿರುವ ಘಟನೆಗಳು ನಡೆಯುತ್ತಿವೆ.

ಇಂತಹ ಪರಿಸ್ಥಿತಿಯಲ್ಲಿಯೇ ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳನ್ನು ಆರಂಭಿಸಲು ಸರ್ಕಾರ ಯೋಜಿಸಿದೆ. ಈ ಯೋಜನೆಗೆ ಅಗತ್ಯವಿರುವ ಬೃಹತ್ ಪ್ರಮಾಣದ ಕಲ್ಲುಗಳನ್ನು ಸಂಗ್ರಹಿಸಲು, ಯೋಜನಾ ವ್ಯಾಪ್ತಿಯಲ್ಲೇ ಸುಮಾರು 500 ಎಕರೆ ದಟ್ಟ ಅರಣ್ಯ ಪ್ರದೇಶದಲ್ಲಿ ಕಲ್ಲು ಕ್ವಾರಿ ನಡೆಸಲು ಖಾಸಗಿ ಗುತ್ತಿಗೆ ಸಂಸ್ಥೆಗೆ ಅನುಮತಿ ನೀಡುವ ಹಂತದಲ್ಲಿದೆ ಎನ್ನುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಸಾಂದಾರ್ಭಿಕ ಚಿತ್ರ

ಇದು ಸತ್ಯವಾದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತರ ಕನ್ನಡ ಜಿಲ್ಲೆಯ ಜನರ ಬದುಕು ಹಾಗೂ ಪರಿಸರದೊಂದಿಗೆ ಇನ್ನೆಷ್ಟು ಪ್ರಯೋಗ ನಡೆಸಲಿವೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಕೈಗಾ ಅಣು ಸ್ಥಾವರದ ಸಮೀಪದಲ್ಲೇ 500 ಎಕರೆ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಗಣಿಗಾರಿಕೆ ನಡೆಸಿದರೆ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಣು ಸ್ಥಾವರಗಳ ಸುರಕ್ಷತೆಗೆ ಯಾವುದೇ ಅಪಾಯವಿಲ್ಲವೇ? ಒಂದು ವೇಳೆ ಅನಾಹುತ ಸಂಭವಿಸಿದರೆ ಅದರ ಪರಿಣಾಮ ಇಡೀ ಜಿಲ್ಲೆಯ ಜನರ ಮೇಲೆ ಬೀಳುವ ಸಾಧ್ಯತೆ ಇದೆ. ಅನಾಹುತ ಸಂಭವಿಸದಿದ್ದರೂ, ಆ 500 ಎಕರೆ ದಟ್ಟ ಅರಣ್ಯದ ಸಾವಿರಾರು ಮರಗಳು, ವನ್ಯಜೀವಿಗಳು ಹಾಗೂ ಜೀವವೈವಿಧ್ಯದ ಭವಿಷ್ಯ ಏನಾಗುತ್ತದೆ?

ಸುಮಾರು ₹21,000 ಕೋಟಿ ವೆಚ್ಚದ 5 ಮತ್ತು 6ನೇ ಘಟಕಗಳ ಯೋಜನೆಗೆ ಅಗತ್ಯವಿರುವ ಕ್ರಷರ್ ಕಲ್ಲುಗಳನ್ನು ಪಶ್ಚಿಮ ಘಟ್ಟದ ಹೊರಗಿನ ಪ್ರದೇಶಗಳಿಂದ ತರಲು ಸಾಧ್ಯವಿಲ್ಲವೇ? ಸಾಮಾನ್ಯ ಜನರು ಮನೆ ಕಟ್ಟಬೇಕಾದರೆ ‘ಧಾರಣ ಶಕ್ತಿ’ (Carrying Capacity) ಎಂಬ ನಿಯಮ ಅನ್ವಯವಾಗುತ್ತದೆ. ಹಾಗಿದ್ದರೆ, ಇಂತಹ ಬೃಹತ್ ಯೋಜನೆಗಳಿಗೆ ಧಾರಣ ಶಕ್ತಿ ಅಧ್ಯಯನದ ಅಗತ್ಯವಿಲ್ಲವೇ?

ಜನ ಎಚ್ಚರಗೊಳ್ಳುವ ಮೊದಲೇ ಸರ್ಕಾರಗಳು ಎಚ್ಚರಗೊಳ್ಳಬೇಕು. ಈ ಯೋಜನೆ ಕುರಿತು ಸಂಪೂರ್ಣ ಮತ್ತು ಪಾರದರ್ಶಕ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕು. ಪರಿಸರ, ಜನರ ಸುರಕ್ಷತೆ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ನಿರ್ಧಾರ ಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಯಲ್ಲಾಪುರ ನಾಗರಿಕ ವೇದಿಕೆ ಅದ್ಯಕ್ಷ ರಾಮುನಾಯ್ಕ್ ಆತಂಕದಿಂದ ಮಾದ್ಯಮ ಪ್ರಕಟಣೆಯಲ್ಲಿ ಸರ್ಕಾರ ಮತ್ತು ಜನರನ್ನು ಜಾಗೃತಗೊಳಿಸುವ ಕಾರ್ಯ ಮಾಡಿದ್ದಾರೆ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ತಾಲೂಕು “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗುರುಮೂರ್ತಿ ಗಾಂವ್ಕರ್,ಕಾರ್ಯದರ್ಶಿಯಾಗಿ ಗಣೇಶ್ ಪತ್ತಾರ್ ಆಯ್ಕೆ

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನೂತನವಾಗಿ “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ ಬಂದಿರುವುದು ಸ್ಥಳೀಯ ಛಾಯಾಗ್ರಾಹಕರಿಗೆ ಒಗ್ಗಟ್ಟಿನ ವೇದಿಕೆ ನಿರ್ಮಾಣದ …

Leave a Reply

Your email address will not be published. Required fields are marked *