
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಇದೇ ಮೊದಲು AI ತಂತ್ರಜ್ಞಾನ ಬಳಸಿ ಒಂದು ಸುಂದರ ಕವನ ಸಂಕಲನ ರೂಪುಗೊಂಡಿದ್ದು “ಭಾವಗಳ ಬ್ರಹ್ಮಾಂಡ” ಎಂಬ ಶೀರ್ಷಿಕೆ ಯಲ್ಲಿ ಶ್ರೀಕಾಂತ ವೆಂಕಟೇಶ ನಾಯ್ಕ ಅವರ ಲೇಖನಿಯಲ್ಲಿ ಮೂಡಿ ಬಂದಿದೆ. ಮೇ 1ರಂದು ಯಲ್ಲಾಪುರದ ಅಡಿಕೆ ಭವನದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಹಿರಿಯ ಸಾಹಿತಿ, ನಿವೃತ್ತ ಶಿಕ್ಷಕಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಯಮುನ ಗಾಂವ್ಕರ್ ಹೇಳಿದರು.

ಅವರು ಪಟ್ಟಣದ ಮದ್ಗುಣಿ ಕಾಂಪ್ಲೆಕ್ಸ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಪ್ರಣವ ಪ್ರತಿಷ್ಟಾನ ಹಂಡ್ರಮನೆ, ಸಹ್ಯಾದ್ರಿ ಸಂಚಯ ಟ್ರಸ್ಟ್ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಲೇಖಕ ಶ್ರೀಕಾಂತ ವೆಂಕಟೇಶ ನಾಯ್ಕ ಅವರ ರಚನೆಯಲ್ಲಿ ಮೂಡಿಬಂದ ” ಭಾವಗಳ ಬ್ರಹ್ಮಾಂಡ ” ಕವನ ಸಂಕಲನ ಬಿಡುಗಡೆ ಸಮಾರಂಭದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಣವ ಪ್ರತಿಷ್ಟಾನದ ಮುಖ್ಯಸ್ಥ ಗೋಪಾಲಕೃಷ್ಣ ಸುಬ್ರಾಯ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಹ್ಯಾದ್ರಿ ಸಂಚಯ ಟ್ರಸ್ಟ್ ಸಂಚಾಲಕ ದಿನೇಶ್ ಹೊಳ್ಳಾ ಕೃತಿ ಬಿಡುಗಡೆ ಮಾಡಲಿದ್ದಾರೆ. ಪುಸ್ತಕ ಪರಿಚಯವನ್ನು ಸಂಕಲ್ಪ ಸಂಸ್ಥೆ ಪ್ರಮುಖ ಪ್ರಮೋದ್ ಹೆಗಡೆ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಾ ಭಾನು, ಪ್ರಥಮಧರ್ಜೆ ಕಾಲೇಜು ಪ್ರಾಂಶುಪಾಲರಾದಡಾ,ಆರ್.ಡಿ. ಜನಾರ್ಧನ್ , ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಪ್ರವಾಸೋದ್ಯಮ ಅಧ್ಯಯನ ಸಮಿತಿ ಸದಸ್ಯ ವೇಣುಗೋಪಾಲ ಮದ್ಗುಣಿ, ಕುಂದರಗಿ ಸೊಸೈಟಿ ಅಧ್ಯಕ್ಷ ಹೇರಂಭ ಪಿ ಹೆಗಡೆ, ಸಮಗ್ರ ನಾಮಧಾರಿ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ ಉಪಸ್ಥಿತಿತ ರಿರಲಿದ್ದಾರೆ ಹಾಗು ತಾಲ್ಲೂಕಿನ ಕವಿಗಳಿಂದ ಕವಿಗೋಷ್ಟಿ ನಡೆಯಲಿದೆ. ವಿಶೇಷವಾಗಿ ವಿನಾಯಕ ನಾಯ್ಕ ಅವರ ಯಕ್ಷಗಾನ ವಿದ್ಯಾರ್ಥಿಗಳಿಂದ ಯಕ್ಷ ನರ್ತನ ಮತ್ತು ಉಮ್ಮಚ್ಚಗಿಯ ನಾಟ್ಯ ನಿಕೇತನ ವಿದ್ಯಾರ್ಥಿಗಳಿಂದ ಭರತನಾಟ್ಯ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಲಿದೆ ಎಂದು ಸಾಹಿತ್ಯಾಭಿಮಾನಿ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ತಾಲ್ಲೂಕು ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಸಂಪೂರ್ಣ ಮಾಹಿತಿ ನೀಡಿದರು.

ಭಾವಗಳ ಬುತ್ತಿಯಲ್ಲಿ ಬತ್ತದೆ ಬರೆದಿಹುದೆ…” ಭಾವಗಳ ಬ್ರಹ್ಮಾಂಡ ” ಕೃತಿ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ಸಾಹಿತ್ಯ ಪ್ರೇಮಿಗಳು,ಹಿರಿಯರು,ಬರಹಗಳನ್ನು ಪ್ರೋತ್ಸಾಹಿಸುವವರು ಉಪಸ್ಥಿತರಿದ್ದು ಹರಸಬೇಕೆಂದು “ಭಾವಗಳ ಬ್ರಹ್ಮಾಂಡ” ಕೃತಿ ಕರ್ತೃ ಶ್ರೀಕಾಂತ ವೆಂಕಟೇಶ ನಾಯ್ಕ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದು ಮನವಿ ಮಾಡಿದರು.






Prathidvani Yellapura