Breaking News

ಅಂಬೇಡ್ಕರ್ ಕೇವಲ ಭಾರತಕ್ಕೆ ಸೀಮಿತರಲ್ಲ ಅವರು ಜಗತ್ಪುರುಷ ಮನುಕುಲದ ಘನತೆ – ಹೆಬ್ಬಾರ್.


ಪ್ರತಿಧ್ವನಿ ಯಲ್ಲಾಪುರ – ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಯುಗ ಒಂದು ಸಾಲದು ಅವರೊಂದು ವಿಶ್ವಕೋಶ. ಅವರು ಕೇವಲ ಭಾರತಕ್ಕೆ ಸೀಮಿತರಲ್ಲ ಅವರು ಜಗತ್ಪುರುಷ. ಬೃಹತ್ ಪ್ರಜಾಪ್ರಭುತ್ವ ಭಾರತಕ್ಕೆ ಅವರು ಕೊಟ್ಟ ಅಮೂಲ್ಯವಾದ ಸಂವಿಧಾನ ಇಂದಿಗು ಶ್ರೇಷ್ಟತೆಯ ಉತ್ತುಂಗದಲ್ಲಿದೆ ಮತ್ತು ಸದೃಡ ಭಾರತದ ಬುನಾದಿಯಾಗಿದೆ. ಅಂತಹ ಮಹನೀಯರ ಜಯಂತೋತ್ಸವ ಆಚರಣೆ ಅರ್ಥಪೂರ್ಣ ಹಾಗು ಅವರ ಆಶಯಗಳನ್ನು ಮಾದರಿಯಾಗಿಸಿಕೊಂಡು ರಚನೆಯಾಗಿರುವ ಮೆಮೋರಿಯಲ್ ಟ್ರಸ್ಟ್ ಸುಗಮವಾಗಿ ಸಾಗಲಿ ಎಂದು ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.


ಅವರು ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಡಾ,ಬಿ.ಆರ್‌.ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್ ಉದ್ಘಾಟನೆ ಮತ್ತು 135 ನೆ ಜಯಂತೋತ್ಸವ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಇದಕ್ಕು ಮೊದಲು ಕಾರ್ಯಕ್ರಮ ಪ್ರಾರಂಭಕ್ಕು ಮುನ್ನ ಭೇಟಿ ನೀಡಿ ಶುಭ ಕೋರಿದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಡಾ,ಬಿ.ಆರ್.ಅಂಬೇಡ್ಕರ್ ಅವರು ಸಾರ್ಥಕ ಪುರುಷರ ಸಾಲಿಗೆ ಸೇರುತ್ತಾರೆ ಅವರ ಆಶಯಗಳನ್ನು ಈಡೇರಿಸಲು ಕಟ್ಟಿದ ಟ್ರಸ್ಟ್ ಸಾರ್ಥಕ ಕಾರ್ಯಗಳ ಮೂಲಕ ಹೆಸರಾಗಲಿ ಸದಾ ನನ್ನ ಬೆಂಬಲವಿದೆ ಎಂದು ಸಂಘಟನೆ ಕಾರ್ಯವನ್ನು ಶ್ಲಾಘಿಸಿದರು.


ಯುವ ನಾಯಕ ವಿವೇಕ್ ಹೆಬ್ಬಾರ್ ಸಹಿತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಡಾ,ಬಿ‌ಆರ್.ಅಂಬೇಡ್ಕರ್ ಅವರ ಕೊಡುಗೆ ಭವ್ಯ ಭಾರತದ ಭದ್ರ ಬುನಾದಿಯಾಗಿದೆ ಅಲ್ಲದೆ ಪ್ರಪಂಚ ರಾಷ್ಟ್ರಗಳ ಎದುರು ಭಾರತ ಘನತೆಯಿಂದ ತಲೆ ಎತ್ತುವಂತೆ ಮಾಡಿದೆ ಅದಕ್ಕೆ ಅಂಬೇಡ್ಕರ್ ಅವರು ನೀಡಿದ ಸದೃಡ ಸಂವಿಧಾನ ಸಾಕ್ಷಿಯಾಗಿದೆ. ಅಂತಹ ಮಹನೀಯರ ಹೆಸರಿನಲ್ಲಿ ಆರಂಭಗೊಂಡ ಟ್ರಸ್ಟ್ ಉತ್ತಮ ಕೆಲಸಗಳಿಂದ ಹೆಸರಾಗಲಿ ಎಂದು ಶುಭ ಹಾರೈಸಿದರು.


ವೇದಿಕೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಹಾಗು ಕ್ರೀಡಾ ವಲಯದ ಹಿರಿಯ ಸಾಧಕರ ಸನ್ಮಾನ ಜರುಗಿತು.


ಕಾರ್ಯಕ್ರಮಕ್ಕೆ ಆಗಮಿಸಿದ ವಿಧಾನ ಪರಿಷತ್ ಶಾಂತಾರಾಮ್ ಸಿದ್ದಿ ಅವರು ಮಾತನಾಡಿ ನಮ್ಮಂತಹ ಅದೇಷ್ಟೊ ಮಂದಿ ಇಂದು ಈ ಸ್ಥಾನದಲ್ಲಿ ನಿಂತು ಮಾತನಾಡಲು ಮಹನೀಯ ಡಾ,ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಅರ್ಪಿಸಿದ ಸಂವಿಧಾನ ಕಾರಣವಾಗಿದೆ. ಇಲ್ಲ ವಾದಲ್ಲಿ ಭಾರತ ಇಂದಿಗು ಸ್ಪರ್ಷ-ಅಸ್ಪರ್ಶ  ಜಿಜ್ಞಾಸೆಯಲ್ಲೆ ಕುಳಿಯುತ್ತಿತ್ತು. ಭಗವದ್ಗೀತೆಯಷ್ಟೆ ಶ್ರೇಷ್ಠವಾದದು ಈ ದೇಶದ ಸಂವಿಧಾನ ಆಗಿದೆ. ಕೆಲವರು ಸಂವಿಧಾನ ನೀಡಿದ ಮೀಸಲಾತಿ ಸವಲತ್ತನ್ನು ಅನುಭವಿಸುತ್ತಲೆ ತಮ್ಮ ಜಾತಿಯನ್ನು ತೋರ್ಪಡಸದೆ ಮರೆಮಾಚುವ ಕೆಲಸ ಮಾಡುತ್ತಾರೆ ಇದು ಅಕಷಮ್ಯವಾಗಿದೆ. ಸಂಘಟನೆ ಉತ್ತಮ ಕಾರ್ಯಕ್ಕಾಗಿ ಟ್ರಸ್ಟ್ ಸ್ಥಾಪಿಸಿದ್ದು ಸಾರ್ಥಕ ಕೆಲಸಗಳು ಇನ್ನಷ್ಟು ಹೆಚ್ಚಾಗಲಿ ಎಂದರು.


ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಈರಣ್ಣ ಬಿ ವಡ್ಡರ್ ಸೇರಿದಂತೆ ಎಸ್.ಪಕೀರಪ್ಪ, ಏಲಿಶ್ ಯಲಕಪಾಟಿ, ಚಿದಾನಂದ ಹರಿಜನ್, ಹನುಮಂತ ಅರೆಗೊಪ್ಪ, ಯಲ್ಲಪ್ಪಾ ಹೊಸ್ಮನಿ, ದ್ಯಾಮಣ್ಣ ಬೊವಿವಡ್ಡರ್, ವಿಲ್ಸನ್ ಫರ್ನಾಂಡೀಸ್, ರಾಮು ನಾಯ್ಕ್ ಇತರೆ ಗಣ್ಯರು ಮಾತನಾಡಿದರು.
ಗಣೇಶ್ ಹೆಗಡೆ ಪಣ್ತಗೇರಿ,ನಾಗೇಶ್ ಬೊವಿ ವಡ್ಡರ್, ಕಲ್ಲಪ್ಪ ಹೊಳಿ, ತೊಳರಾಮಜಿ ಅತ್ತರವಾಲ, ಅರ್ಜುನ ಬೆಂಗೇರಿ, ಶಮಾಗ್ಯಾಸ್ ಮಾಲಿಕ ಶೇಖ್, ಜಗನ್ನಾಥ ರೇವಣಕರ, ಫಕೀರಪ್ಪ ಬೊವಿ ವಡ್ಡರ್, ಅಶೋಕ ಎಸ್ ಕೊರವರ, ಶೇಖರ್ ಸಿದ್ದಿ, ಗಾಯತ್ರಿ ಸಿದ್ದಿ,ನರಸಿಂಹ ನಾಯ್ಕ್, ಎಂ.ಡಿ.ಮುಲ್ಲಾ, ವಿ.ಎಸ್.ಭಟ್,ಪ್ರಸಾದ್ ಹೆಗಡೆ, ಸುಬ್ರಾಯ ಬಿದ್ರೇಮನೆ, ದುರ್ಗಪ್ಪ ಕಾಂಬಳೆ, ಬೀಮಶಿ ವಾಲ್ಮೀಕಿ,ಸಂತೋಷ್ ಪಾಟಣಕರ್ ಉಪಸ್ಥಿತರಿದ್ದು ಗೌರವ ಸ್ವೀಕರಿಸಿದರು

ಡಾ,ಬಿ.ಆರ್.ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಗಿರೀಶ್ ಎನ್.ಎಸ್ ರವರ ನೇತೃತ್ವದಲ್ಲಿ ಮತ್ತು ಸಂಸ್ಥಾಪಕ ರಾಜ್ಯ ಕಾರ್ಯದರ್ಶಿ ಸುಮನ್ ಜಿ ಹರಿಜನ್ , ನಾಗರಾಜ್ ಚಂದೂಕರ ದಾಂಡೇಲಿ,  ಸುಭ್ರಹ್ಮಣ್ಯ ಎಮ್ ಗಣೇಶ ಗುಡಿ ಜೋಯಿಡಾ,  ಹನುಮಂತ ಬೊವಿ ವಡ್ಡರ್ ಯಲ್ಲಾಪುರ, ಮಾಣಿಕರಾಜು ಘಟ ಕಾಂಬಳೆ ಹಳಿಯಾಳ, ನಾರಾಯಣ ಮುಖ್ರಿ ಹೊನ್ನಾವರ, ಎಸ್.ಕೆ.ನಾಗು ಕುಮಟಾ, ಹನುಮಂತ ವಡ್ಡರ ಮುಂಡಗೋಡ ಇನ್ನಿತರ ಪ್ರಮುಖರ   ಸಹಕಾರದಲ್ಲಿ ಸಂಪೂರ್ಣ ಕಾರ್ಯಕ್ರಮ ಉಸ್ತುವಾರಿಯನ್ನು ಸಂಘಟನೆಯ ತಾಲ್ಲೂಕು ಪ್ರಮುಖ ಹಾಗು ಜಿಲ್ಲಾ ಸಂಚಾಲಕ ಮಾರುತಿ ಎಂ ಬೊವಿ ವಡ್ಡರ್ ನಿರ್ವವಹಿಸಿದ್ದರು.ಪತ್ರಕರ್ತ ಕೇಬಲ್ ನಾಗೇಶ್ ಸ್ವಾಗತಿಸಿ, ನಿರೂಪಿಸಿ,ವಂದಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಸಣ್ಣ ಪಾನಿಗುಂಡಿ ಜನರ ದಣಿವಾರಿಸಿ ಪ್ರತಿ ಮನೆಗು ಭಗೀರಥನಾದ ಕೊಡುಗೈ ದಾನಿ ಬಾಲು ನಾಯಕ್.

ಪ್ರತಿಧ್ವನಿ ಯಲ್ಲಾಪುರ : ಬಹು ದಶಕಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಇತ್ತೀಚೆಗೆ ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಹಾಗು ಕೆಲವು ಮಾಧ್ಯಮಗಳಲ್ಲಿ …

Leave a Reply

Your email address will not be published. Required fields are marked *