Breaking News

ಸಂಪನ್ನಗೊಂಡ ಕೋಳಿಕೇರಿ ಕಾಳು ಘಾಡಿ-ಬಾಳು ಘಾಡಿ ಜಾತ್ರೋತ್ಸವ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಸುಮಾರು 300 ವರ್ಷಗಳ ಹಿಂದಿನಿಂದ ಶ್ರದ್ಧಾ ಭಕ್ತಿಯಿಂದ ಪೂಜಿಸಲ್ಪಡುತ್ತಾ ಜಾತ್ರೋತ್ಸವವಾಗಿ ಆಚರಿಸಲ್ಪಡುವ ತಾಲೂಕಿನ ಕೋಳಿಕೇರಿಯ ಕಾಳು ಘಾಡಿ-ಬಾಳು ಘಾಡಿ ಜಾತ್ರೆಯು ಅತ್ಯಂತ ಸಂಭ್ರಮ ಸಡಗರದಿಂದ ಶ್ರದ್ಧಾ ಭಕ್ತಿಯಿಂದ ಪೂಜಿಸಲ್ಪಡುವುದರೊಂದಿಗೆ ಸಂಪನ್ನಗೊಂಡಿತು.


ಮುಂಜಾನೆಯಿಂದಲೇ ಪೂಜಾ ವಿಧಿ ವಿಧಾನಗಳ ಸಿದ್ಧತೆ ಜರುಗಿ ಹಿರಿಯರ ಸಮ್ಮುಖದಲ್ಲಿ ಆಚಾರ , ಸಂಪ್ರದಾಯಗಳೊಂದಿಗೆ ಪೂಜಿಸಲ್ಪಟ್ಟು ಪ್ರಾರಂಭಗೊಂಡ ಜಾತ್ರೆಗೆ ಸಂಜೆಯವರೆಗೂ ಭಕ್ತರ ದಂಡೇ ಹರಿದು ಬಂದಿತ್ತು. ಪ್ರತಿ ವರ್ಷಕ್ಕಿಂತ ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿತತ್ತು. ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಭಕ್ತರು ಇಷ್ಟಾರ್ಥ ನೆರವೇರಿಸಕೊಳ್ಳಲು,ಹೊತ್ತ ಹರಿಕೆಯನ್ನು ತೀರಿಸಲು ಭಕ್ತರು ಸಾಲುಗಟ್ಟಿ ನಿಂತು ಪೂಜೆ ಸಲ್ಲಿಸಿದರು.


ವಿಜಯ್ ವಿ ಮಿರಾಶಿ, ವಿನೋದ್ ಎಚ್ ಮಿರಾಶಿ, ಪ್ರಕಾಶ್ ಆರ್ ಮಿರಾಶಿ, ಆನಂದ ಮಿರಾಶಿ ಹಾಗೂ ಮಿರಾಶಿ ಬಂಧುಗಳು ಆಪ್ತರ ನೇತೃತ್ವದಲ್ಲಿ ಜಾತ್ರೋತ್ಸವದ ಸಕಲ ಸಿದ್ಧತೆಗಳನ್ನೂ ಕೈಗೊಂಡು ಭಕ್ತರಿಗೆ ಪೂಜಾ ವ್ಯವಸ್ಥೆ ಮತ್ತು ಪ್ರಸಾದ ವಿನಿಯೋಗ ನೆರವೇರಿಸಿದರು.


ನಮ್ಮ ಪೂರ್ವಜರ ಕಾಲದಿಂದಲೂ ಕಾಳು ಘಾಡಿ – ಬಾಳು ಘಾಡಿ ಎಂಬ ಸತ್ಪುರುಷರ ಸಮಾಧಿಗಳಿಗೆ ಪೂಜೆ ಸಲ್ಲಿಸುತ್ತಾ ಬಂದಿರುತ್ತೇವೆ. ಪೂರ್ವಜರ ಹೇಳಿಕೆಯಂತೆ ಇಬ್ಬರೂ ಯೋಧರಾಗಿದ್ದು ಸಾತ್ವಿಕ ಕಾರ್ಯಕ್ಕಾಗಿ ಸೆಣಸಾಡಿ ವೀರ ಮರಣವನ್ನಪ್ಪಿದ್ದು ಅವರ ಪಾರ್ಥಿವ ಶರೀರಗಳನ್ನು ಕೋಳಿಕೇರಿಯಲ್ಲಿ ಸಂಸ್ಕಾರ ಮಾಡಿದ ನಂತರ ಅನೇಕ ಪವಾಡಗಳು ನಡೆಯಲಾರಂಭಿಸಿದ ಕಾರಣ ದೈವ ಸ್ವರೂಪಿಗಳಾಗಿ ಅವರನ್ನು ಕಂಡು ಪ್ರತಿ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಅವರ ಇಷ್ಟಾರ್ಥ ನೆರವೇರಿದರೆ ಹರಕೆ ತೀರಿಸುತ್ತಾರೆ. – ವಿಜಯ್ ಮಿರಾಶಿ, ಜಾತ್ರೋತ್ಸವ ಪ್ರಮುಖರು


ಮಳೆಯ ಸಿಂಚನದ ನಡುವೆಯೂ ಜಾತಿ,ಮತ ಬೇಧ ಮರೆತು ಸರತಿ ಸಾಲಿನಲ್ಲಿ ಗದ್ದೆ ಕಾನನ ದಾಟಿ ಸಹಸ್ರಾರು ಸಂಖ್ಯೆಯಲ್ಲಿ ಸತ್ಪುರುಷರ ಜಾತ್ರೋತ್ಸವದಲ್ಲಿ ಭಕ್ತಾದಿಗಳು ಪಾಲ್ಗೊಂಡರು. ಕೋಳೀಕೇರಿ ಪುಟ್ಟ ಊರಾದರೂ ಜಾತ್ರೋತ್ಸವದ ಸಂಭ್ರಮದಲ್ಲಿ ದೊಡ್ಡ ಪಟ್ಟಣದಂತೆ ಭಾಸವಾಯಿತು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *