Breaking News

Monthly Archives: March 2026

ಯಲ್ಲಾಪುರ ನ್ಯಾಯಾಲಯದಲ್ಲಿ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಲೋಕ್ ಅಧಾಲತ್

ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರ ನ್ಯಾಯಾಲಯದ ಆವರಣದಲ್ಲಿ ಮಾ,14 ರಂದು ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಲೋಕ್ ಅದಾಲತ್‌ನಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಕುಮಾರ್ ಎಸ್ ಮತ್ತು ಹಿರಿಯ ಸಿವಿಲ್ ನ್ಯಾಯಾಲಯದ ಅಡಿಯಲ್ಲಿ ದಾಖಲಾದ ಒಟ್ಟು 64 ಪ್ರಕರಣಗಳಲಿ ಒಟ್ಟು 53 ಪ್ರಕರಣಗಳು ಇತ್ಯರ್ಥವಾದವು.  ಇದರಿಂದ ಸರ್ಕಾರಕ್ಕೆ 1,67,81,627 -00 ರೂ ಭರಣ ಮಾಡಲಾಯಿತು. ಗೌರವಾನ್ವಿತ ಸಿವಿಲ್ ನ್ಯಾಯಾಧೀಶರಾದ ಅನಿತಾ ಕುಮಾರಿ . ಎಸ್ ಅವರು ಸಿವಿಲ್ ನ್ಯಾಯಾಲಯದಲ್ಲಿ …

Read More »

ಹುಟಕಮನೆ ಗುಡ್ಡ ನೆಲಸಮ – ಮರಗಳ ಮಾರಣ ಹೋಮ ಪ್ರಕರಣಕ್ಕೆ ಮರು ಜೀವ – ಕಾನೂನು ಹೋರಾಟಕ್ಕೆ  ಮಂಜುನಾಥ ಹೆಗಡೆ ತಯಾರಿ.

ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಇಡಗುಂದಿ ಅರಣ್ಯ ವಲಯ ವ್ಯಾಪ್ತಿಗೆ ಬರುವ ಹುಟಕಮನೆ ಎಂಬಲ್ಲಿನ ಅರಣ್ಯ ನಾಶ,ಮರಗಳ ಮಾರಣಹೋಮ, ಪ್ರಕೃತಿದತ್ತ ಬೆಟ್ಟ ನೆಲಸಮ ಪ್ರಕರಣ ವರ್ಷದ ಹಿಂದೆ ಭಾರಿ ಸದ್ದು ಮಾಡಿ ಮತ್ತೆ ತಣ್ಣಗಾಗಿತ್ತು. ಇದೀಗ ಮತ್ತೆ ಅದೇ ಪ್ರಕರಣಕ್ಕೆ ಮರು ಜೀವ ಬಂದಿದ್ದು ಸಾಮಾಜಿಕ ಹೋರಾಟಗಾರ ಆರ್.ಟಿ.ಐ ಕಾರ್ಯಕರ್ತ ಮಂಜುನಾಥ ಹೆಗಡೆ ರಾಜ್ಯದ ಸರ್ವೋಚ್ಚ ನ್ಯಾಯಾಲಯದ ಮೂಲಕ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಕ್ರೂಡಿಕರಣದಲ್ಲಿ ತೊಡಗಿಕೊಂಡಿರುವುದಾಗಿ …

Read More »

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 10,000 ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಶಿಕ್ಷಣ ಒದಗಿಸಲು ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮ.

ಬೆಂಗಳೂರು, ಮಾರ್ಚ್ 13, 2026 :ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಹಾಗೂ ಸಮುದಾಯ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಅಗತ್ಯವನ್ನು ಗುರುತಿಸಿ, ತಂತ್ರಜ್ಞಾನ ಸಂಸ್ಥೆ ಟೆಕಿಯಾನ್ ಮತ್ತು ಸರ್ಕಾರೇತರ ಸಂಸ್ಥೆಯಾದ ‘ಮೈಂಡ್ ಅಂಡ್ ಮ್ಯಾಟರ್ ಜೊತೆಗೆ ಸಹಭಾಗಿತ್ವ ಮಾಡಿಕೊಂಡಿದ್ದು, ಈ ವರ್ಷ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಉದ್ದೇಶ ಹೊಂದಿದೆ. “ತನ್ನದೇ ಆದ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮ ‘ಟೆಕಿಯಾನ್ ಫಾರ್ …

Read More »

ಶಾಸಕ ಶಿವರಾಮ ಹೆಬ್ಬಾರ್ – ಮಾಜಿ ರಾಜ್ಯಾಪಾಲರಾದ ಮಾರ್ಗರೇಟ್ ಆಳ್ವ ಭೇಟಿ-ಮಾತುಕತೆ

ಯಲ್ಲಾಪುರ, ಮಾರ್ಚ್ 14 : ಮಾಜಿ ಸಂಸದರು ಹಾಗೂ ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ ಅವರು ನಿನ್ನೆ ಅನ್ಯ ಕಾರ್ಯಕ್ರಮದ ನಿಮಿತ್ತ ಯಲ್ಲಾಪುರ ಪಟ್ಟಣಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಪಟ್ಟಣದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಅವರನ್ನು ಭೇಟಿಯಾಗಿ ಆತ್ಮೀಯವಾಗಿ ಸ್ವಾಗತಿಸಿದರು. ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಮಾರ್ಗರೇಟ್ ಆಳ್ವಾ ಅವರಿಗೆ ಶಾಲು ಹೊದಿಸಿ ಗೌರವಪೂರ್ವಕವಾಗಿ ಸನ್ಮಾನಿಸಿ, ಅವರ ಆರೋಗ್ಯ ಹಾಗೂ ಕ್ಷೇಮವನ್ನು …

Read More »

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಶಿವಶಂಕರ ನಿಲಯದಲ್ಲಿ ಇಂದು ” ಪುಸ್ತಕ ಅವಲೋಕನ ” ಕವಿಗೋಷ್ಟಿ

ಪ್ರತಿಧ್ವನಿ ಯಲ್ಲಾಪುರ : ಜಿಲ್ಲೆಯಲ್ಲಿ ಕ್ರಿಯಾಶೀಲ ಕನ್ನಡ ಸಾಹಿತ್ಯ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿರುವ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಜಿಲ್ಲಾಧ್ಯಕ್ಷೆ ಶಿಕ್ಷಕಿ ಲೇಖಕಿ ಶಿವಲೀಲಾ ಹುಣಸಗಿ ಅವರ ಶಿವಶಂಕರ ನಿವಾಸದಲ್ಲಿ ” ನನ್ನ ಪುಸ್ತಕದ ಅವಲೋಕನ ಕಾರ್ಯಕ್ರಮ ಮತ್ತು ಕವಿಗೋಷ್ಟಿ/ಉಪನ್ಯಾಸ ” ಕಾರ್ಯಕ್ರಮ ಮದ್ಯಾಹ್ನ 3 ಗಂಟೆಗೆ ಜರುಗಲಿದೆ. ಖ್ಯಾತ ಇತಿಹಾಸ ತಜ್ಞ ಡಾ.ಲಕ್ಷ್ಮೀಷ ಸೋಂದ,ಹಿರಿಯ ಸಾಹಿತಿ ಬೀರಣ್ಣ ನಾಯಕ ಮೊಗಟ, ಲೇಖಕ ಡಾ,ನವೀನ್ ಕುಮಾರ್ ಉಪನ್ಯಾಸ ನೀಡಲಿದ್ದು …

Read More »

ಟಿ.ಎಂ.ಎಸ್ ಉಳಿಸಿ ಹೋರಾಟದ ಉಪವಾಸ ಸತ್ಯಾಗ್ರಹದಲ್ಲಿ ಹಿರಿಯ ಸಹಕಾರಿ ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ ಅಸ್ವಸ್ಥ – ಸ್ಥಳದಲ್ಲೆ ಚಿಕಿತ್ಸೆ

ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿ.ಎಂ.ಎಸ್ ಆಡಳಿತಾಧಿಕಾರಿ ವಜಾಗೊಳಿಸುವಂತೆ ಶುಕ್ರವಾರ ಮುಂದುವರೆದ ಭಾಗವಾಗಿ ಟಿ.ಎಂ.ಎಸ್ ಮುಂಭಾಗ ಹಿರಿಯ ಸಹಕಾರಿ ಎನ್.ಕೆ.ಭಟ್ ಅಗ್ಗಾಶಿ ಕುಂಬ್ರಿ ನೇತೃತ್ವದಲ್ಲಿ ಹೋರಾಟ ಸಮಿತಿಯ ಪ್ರಮುಖರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು‌ ಸಂಜೆ ವೇಳೆಗೆ ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ ಆರೋಗ್ಯದಲ್ಲಿ ಏರುಪೇರಾಗಿದ್ದು ಪೊಲೀಸರ ಸಹಕಾರದಲ್ಲಿ ಆಂಬುಲೆನ್ಸ ಕರೆಸಿ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಉಪವಾಸ ಸತ್ಯಾಗ್ರಹ ಮುಂದುವರೆದಿದ್ದು ಸತ್ಯಾಗ್ರಹ ಯಾವುದೆ ಕಾರಣಕ್ಕು ನಿಲ್ಲಿಸುವುದಿಲ್ಲ ತಕ್ಷಣವೆ ಆಡಳಿತಾಧಿಕಾರಿ ವಜಾಗೊಳಿಸುವಂತೆ …

Read More »

ತಾಲೂಕು ಆಡಳಿತ ಸೌಧದಲ್ಲಿ  ಇನ್ನೂ ಅಳವಡಿಸದ ಲಿಫ್ಟ್ – ವಯೋವೃದ್ದರಿಗೆ ಮೆಟ್ಟಿಲು ಹತ್ತುವ ದೌರ್ಭಾಗ್ಯ.

ಕೇಬಲ್ ನಾಗೇಶ್ ಲೇಖನಿಯಲ್ಲಿ🖋 ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಆಡಳಿತಸೌಧ ಲೋಕಾರ್ಪಣೆಗೊಂಡು 3 ವರ್ಷಗಳೆ ಕಳೆಯುತ್ತಾ ಬಂದರು ಇನ್ನೂ ಲಿಫ್ಟ್ ಅಳವಡಿಸದಿರುವುದು ಶೋಚನೀಯ. ಶಾಸಕ ಶಿವರಾಮ ಹೆಬ್ಬಾರ್ ವಿಶೇಷ ಪ್ರಯತ್ನದ ಫಲವಾಗಿ ಪಟ್ಟಣದಲ್ಲಿ ಬಹುತೇಕ ಸರ್ಕಾರಿ ಕಚೇರಿಗಳ ಕಟ್ಟಡಗಳು ಸ್ವಂತ ಜಾಗ ಹೊಂದಿ ಹೈಟೆಕ್ ಸ್ಪರ್ಶ ದಲ್ಲಿ ನಳನಳಿಸುತ್ತಿವೆ ಅವುಗಳಲ್ಲಿ ಬಹು ಪ್ರಮುಖವಾಗಿ ಕೆ.ಬಿ ರಸ್ತೆಯಲ್ಲಿ ನಿರ್ಮಾಣಗೊಂಡ ಮಿನಿ ವಿಧಾನಸೌಧ ಯಲ್ಲಾಪುರದ ಆಡಳಿತ ಸೌಧ ಕೂಡ ಒಂದಾಗಿದೆ. ಕೋಟಿಗಟ್ಟಲೆ ಹಣ …

Read More »

ಟಿ.ಎಂ.ಎಸ್ ಉಳಿಸಿ ಹೋರಾಟದ ಮುಂದಿನ ಹಂತವಾಗಿ ಉಪವಾಸ ಸತ್ಯಾಗ್ರಹ.

ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿ.ಎಂ.ಎಸ್ ಬಾರಿ ಸುದ್ದಿಯಲಿದ್ದು ಆಡಳಿತಾಧಿಕಾರಿ ವಜಾಗೊಳಿಸುವಂತೆ ಗುರುವಾರ ರಸ್ತೆ ತಡೆ ನಡೆಸಲಾಗಿತ್ತು. ಶುಕ್ರವಾರ ಮುಂದುವರೆದ ಭಾಗವಾಗಿ ಟಿ.ಎಂ.ಎಸ್ ಮುಂಭಾಗ ಹಿರಿಯ ಸಹಕಾರಿ ಎನ್.ಕೆ.ಭಟ್ ಅಗ್ಗಾಶಿ ಕುಂಬ್ರಿ ನೇತೃತ್ವದಲ್ಲಿ ಹೋರಾಟ ಸಮಿತಿಯ ಪ್ರಮುಖರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ರೈತರ ಜೀವನಾಡಿಯಂತಿರುವ ಟಿ.ಎಂ.ಎಸ್ ಸಂಸ್ಥೆಯ ಕತ್ತು ಹಿಚುಕುವ ಕಾರ್ಯ ಹಿಬಂದಿಯ ಬಾಗಿಲಿನಿಂದ ಆಡಳಿತಾಧಿಕಾರಿ ಮೂಲಕ ಮಾಡುತ್ತಿದ್ದು ಇಂತಹ ಹೇಯ ಕೃತ್ಯ ಎಸಗದಂತೆ ತಡೆಯುವ …

Read More »

“ಪ್ರತಿಧ್ವನಿ ಯಲ್ಲಾಪುರ ನ್ಯೂಸ್” ಸುದ್ದಿಗೆ ಸ್ಪಂದನೆ-ಅಂಬೇಡ್ಕರ್ ಕಟ್ಟೆ ಶುಚಿಗೊಳಿಸಿದ ಪಟ್ಟಣ ಪಂಚಾಯತ. ಪೌರಕಾರ್ಮಿಕರಿಗೆ ಪ್ರತಿಧ್ವನಿ ವಂದನೆ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಕಟ್ಟೆಗೆ ಕವಳ ತಿಂದು ಉಗಿದು ಅಪಮಾನ ಮಾಡಿರುವ ಘಟನೆಯ ಕುರಿತು ತೊಗಲು ಹರಳಯ್ಯ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ರೇವಣ್ಕರ್ ಖಂಡಿಸಿ ಹೋರಾಟದ ಎಚ್ಚರಿಕೆ ನೀಡಿದ ಸುದ್ದಿಯನ್ನು ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ತಕ್ಷಣದಲ್ಲೇ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಪಟ್ಟಣ ಪಂಚಾಯತ ತಕ್ಷಣಕ್ಕೆ ಅಂಬೇಡ್ಕರ್ ಕಟ್ಟೆ ತೊಳೆದು ಶುಚಿಗೊಳಿಸಿದ್ದಾರೆ.ತೊಗಲು ಹರಳಯ್ಯ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ರೇವಣ್ಕರ್ ಮುಂದೆ ನಿಂತು ಪಟ್ಟಣ ಪಂಚಾಯತ ಆರೋಗ್ಯ …

Read More »

ಪ್ರತಿಭಟನೆ ಹೆಸರಲ್ಲಿ ಅಂಬೇಡ್ಕರ್ ವೃತ್ತಕ್ಕೆ ಅಪಮಾನ – ಕ್ರಮ ಜರುಗಿಸದಿದ್ದರೆ ಹೋರಾಟದ ಎಚ್ಚರಿಕೆ – ಜಗನ್ನಾಥ ರೇವಣ್ಕರ್.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪ್ರತಿಷ್ಠಿತ ಎಂದೇ ಪರಿಗಣಿಸುವ ಅಂಬೇಡ್ಕರ್ ವೃತ್ತದ ಅಂಬೇಡ್ಕರ್ ಕಟ್ಟೆಗೆ ಕವಳ ಉಗಿದು ಅವಮಾನಿಸಿರುವುದನ್ನು ದಲಿತ ಪ್ರಮುಖ ತೊಗಲು ಹರಳಯ್ಯ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ರೇವಣ್ಕರ್ ಉಗ್ರವಾಗಿ ಖಂಡಿಸಿರುವುದಲ್ಲದೆ ಸಂಬಂಧಿಸಿದ ಇಲಾಖೆಗಳು ಕ್ರಮಜರುಗಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಟಿ.ಎಂ.ಎಸ್ ಉಳಿಸಿ ಹೋರಾಟದ ವೇದಿಕೆ ಅಡಿಯಲ್ಲಿ ರಸ್ತೆ ತಡೆ ನಡೆಸಿ ಹೋರಾಟ ನಡೆಸಿದ್ದರು. ಈ ಸಂದರ್ಭದಲ್ಲಿ ವೃತ್ತದ ಮದ್ಯದಲ್ಲಿರುವ ಅಂಬೇಡ್ಕರ್ ಕಟ್ಟೆಗೆ …

Read More »