ಪ್ರತಿಧ್ವನಿ ಯಲ್ಲಾಪುರ – ಟಿ.ಎಂ.ಎಸ್ ಉಳಿಸಿ ಎಂಬ ಪ್ರಹಸನ ಕೆಲವೆ ಮಂದಿಗೆ ಸೀಮಿತವಾಗಿದೆ. ಸಹಕಾರಿ ರಂಗದ ಕಿಂಚಿತ್ತು ಅರಿವಿರದ ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ ಮಾತು ಬಾಲಿಷವಾಗಿದೆ.ರಾಜ್ಯ ಮಟ್ಟದಲ್ಲಿ ಶ್ರೇಷ್ಠ ಸಹಕಾರಿಗಳಲ್ಲಿ ಓರ್ವರಾದ ಶಾಸಕ ಶಿವರಾಮ ಹೆಬ್ಬಾರ್ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆ ಪ್ರಸಾದ್ ಹೆಗಡೆಗೆ ಇರುವುದಿಲ್ಲ.ಟಿ.ಎಂ.ಎಸ್ ಸಂಸ್ಥೆಯ ಇತಿಹಾಸ ಗೊತ್ತಿರದ ನೀವಿನ್ನು ಹಸುಳೆ ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್ ಭಟ್ ಗುರುವಾರ ಯಲ್ಲಾಪುರದ ಅಂಬೇಡ್ಕರ್ …
Read More »Monthly Archives: March 2026
ನಾಯಕನಕೆರೆಯ ಶ್ರೀ ಶಾರದಾಂಬಾ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಮಾ.15 ರಂದು ವಾರ್ಷಿಕ ಧಾರ್ಮಿಕ ಕಾರ್ಯಕ್ರಮ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಮಾ.15 ರಂದು ವಾರ್ಷಿಕ ಧಾರ್ಮಿಕ ಕಾರ್ಯಕ್ರಮ ಪ್ರಾತಃಕಾಲದಲ್ಲಿ ನವಗ್ರಹಹೋಮ, ಗಣಹೋಮ, ಸರಸ್ವತೀ ಹೋಮ ಮುಂತಾದ ಧಾಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮುಖ್ಯಾಧ್ಯಾಪಕ ಡಾ.ಶಿವರಾಮ ಭಾಗ್ವತ ತಿಳಿಸಿದ್ದಾರೆ. ಮಧ್ಯಾಹ್ನ 2-30 ಕ್ಕೆ ನಡೆಯುವ ಸಾಹಿತ್ಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯು ಸಂಸ್ಥೆಯ ಅಧ್ಯಕ್ಷ ಉಮೇಶ ಭಾಗ್ವತ ಅಧ್ಯಕ್ಷತೆಯಲ್ಲಿ ನಡೆಯುವುದು. ಉಪನ್ಯಾಸಕರಾಗಿ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಅಭ್ಯಾಗತರಾಗಿ …
Read More »ಕಿರವತ್ತಿ ದೊಡ್ಲ ಡೈರಿಯಲ್ಲಿ ” ಸುರಕ್ಷತೆಗೆ ಸಂಬಂಧಿಸಿದ ಜಾಗೃತಿ ಮತ್ತು ಸ್ಪರ್ಧೆಗಳು..
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪದ ದೊಡ್ಲಾ ಹಾಲಿನ ಡೈರಿ ಘಟಕದಲ್ಲಿ ಸುರಕ್ಷತೆಗೆ ಸಂಬಂದಿಸಿದಂತೆ ವಿವಿಧ ಸ್ಪರ್ಧೆಗಳು ಹಾಗು ಜಾಗೃತಿ ಕಾರ್ಯಕ್ರಮ ಜರುಗಿತು. 55ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ 2026 ಅಂಗವಾಗಿ ಡೋಡ್ಲಾ ಡೈರಿ ಲಿಮಿಟೆಡ್, ಕಿರವಟ್ಟಿ ಘಟಕ ವತಿಯಿಂದ ಎಲ್ಲಾ ಉದ್ಯೋಗಿಗಳು ಹಾಗೂ ಗುತ್ತಿಗೆ ಆಧಾರದ ಕಾರ್ಮಿಕರಿಗಾಗಿ ವಿವಿಧ ಸುರಕ್ಷತಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸ್ಪರ್ಧೆಗಳಲ್ಲಿ ಸುರಕ್ಷತಾ ಕ್ವಿಜ್, ಚಿತ್ರಕಲೆ, ಘೋಷವಾಕ್ಯ ಬರವಣಿಗೆ ಹಾಗೂ ರೋಲ್ ಪ್ಲೇ ಸ್ಕಿಟ್ …
Read More »ಯಲ್ಲಾಪುರ ಮಾರುಕಟ್ಟೆಗೆ ಬಾಯಲ್ಲಿ ನೀರೂರಿಸುವ “ಅಪ್ಪೆಮಿಡಿ ಮಾವಿನ ಆಗಮನ”
ಪ್ರತಿಧ್ವನಿ ಯಲ್ಲಾಪುರ : ಉತ್ತರಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಾದ ಯಲ್ಲಾಪುರ, ಶಿರಸಿ, ಸಿದ್ದಾಪುರ ಹಾಗೂ ದಾಂಡೇಲಿಯ ಕೆಲ ಭಾಗಗಳಲ್ಲಿ ಹೇರಳವಾಗಿ ದೊರೆಯುತ್ತಿದ್ದ ಅಪ್ಪೆಮಿಡಿ ಹಾಗೂ ಜೀರಿಗೆ ಮಾವು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿರುವುದು ಮಿಡಿ ಉಪ್ಪಿನಕಾಯಿ ಸವಿಯುವವರಿಗೆ ಬೇಸರ ತಂದಿದೆ. ಸದ್ಯ ಈ ಬಾರಿ ಮಾರುಕಟ್ಟೆಗೆ ಅಪ್ಪೆ ಮಿಡಿಮಾವು ಲಗ್ಗೆ ಇಟ್ಟಿದ್ದು ನಿಧಾನವಾಗಿ ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿದೆ. ನೂರು ಮಿಡಿಗಳಿಗೆ ಗರಿಷ್ಠ 200 ರುಪಾಯಿಯಂತೆ ಮಾರಾಟವಾಗುತ್ತಿದ್ದು ಲಭ್ಯತೆಯನ್ನಾಧರಿಸಿ ದರ ನಿಗದಿಯಾಗುತ್ತ …
Read More »ಯಲ್ಲಾಪುರ ತಾಲೂಕು ಕಾಂಗ್ರೆಸ್ ಪಕ್ಷ ಸಂಘಟನೆಗೆ ನೂತನ ಸಮಿತಿ ಪಟ್ಟಿ ಬಿಡುಗಡೆ.
ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ಅತಿ ಶೀಘ್ರದಲ್ಲಿ ವಿವಿಧ ಹಂತದ ಚುನಾವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.ಯಲ್ಲಾಪುರ ತಾಲೂಕಿನಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಪ್ರಬಲವಾದ ಕಾರ್ಯಕರ್ತರ ಪಡೆ ಹೊಂದಿದ್ದು ಮತ್ತಷ್ಟು ಪಕ್ಷ ಸಂಘಟನೆಗೆ ಒತ್ತು ನೀಡಿ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ ನೂತನ ಪಟ್ಟಿ ಬಿಡುಗಡೆ ಮಾಡಿ ಸಮಿತಿ ಸದಸ್ಯರು ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ …
Read More »ಬೀದಿಗೆ ಬಂದ ಯಲ್ಲಾಪುರ ಟಿ.ಎಂ.ಎಸ್ ಆಡಳಿತಾಧಿಕಾರಿ ವಿರುದ್ದದ ಜಟಾಪಟಿ – ರಸ್ತೆ ತಡೆ ನಡೆಸಿದ ರೈತರು.
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಲ್ಲಿ ಒಂದಾದ ಟಿ.ಎಂ.ಎಸ್ ಆಡಳಿತಾಧಿಕಾರಿ ನಡೆಯ ವಿರುದ್ದ ರೈತರು ಸಿಡಿದಿದ್ದು ಗುರುವಾರ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು. ಹಿರಿಯ ಸಹಕಾರಿ ಸಂಸ್ಥೆಯ ಮಾಜಿ ಅಧ್ಯಕ್ಷ ನಾರಾಯಣ ಭಟ್ ಅಗ್ಗಾಶಿಕುಂಬ್ರಿ ಸ್ಥಳೀಯ ಶಾಸಕರ ವಿರುದ್ದ ನೇರ ವಾಗ್ದಾಳಿ ನಡೆಸಿ ಅತ್ಯಂತ ಸುಭದ್ರ ಹಾಗು ರೈತ ಸ್ನೇಹಿ ಟಿ.ಎಂ.ಎಸ್ ಸಂಸ್ಥೆಯ ಅಸ್ತಿತ್ವಕ್ಕೆ ಧಕ್ಕೆ ತರುವ ಹುನ್ನಾರ ನಡೆಸುತ್ತಿದ್ದು ಅದರ ಭಾಗವಾಗಿ …
Read More »ಕಾರ್ಕೊಂಡಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಝನ್ ಒನ್ ಉದ್ಘಾಟಿಸಿದ ವಿಜಯ್ ಮಿರಾಶಿ.
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಕೊಂಡಿ ಗ್ರಾಮದಲ್ಲಿ ಪ್ರಥಮ ಬಾರಿಗೆ ” ಕಾರ್ಕೊಂಡಿ ಕ್ರಿಕೆಟ್ ಪ್ರೀಮಿಯರ್ ಲೀಗ್” ಚುಟುಕು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು ಆ ಭಾಗದ ನಾಯಕ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಾವಳಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರೆಹಮತ್ ಅಬ್ಬಿಗೆರೆ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದು ತಂಡಗಳಿಗೆ ಶುಭ ಕೋರಿದರು. …
Read More »ಕಾಳಮ್ಮ ನಗರ ಕ್ರೀಡಾಂಗಣದಲ್ಲಿ ಮನೋಜ್ ಎಂಟಟ್ರೈನರ್ ಸಂಗೀತ ಕಲರವ – ಉದ್ಘಾಟಿಸಿದ ವಿವೇಕ್ ಹೆಬ್ಬಾರ್.
ಯಲ್ಲಾಪುರ, ಮಾರ್ಚ್ 11: ಪಟ್ಟಣದ ಕಾಳಮ್ಮನಗರದ ತಾಲೂಕಾ ಕ್ರೀಡಾಂಗಣದಲ್ಲಿ ಕಾಳಮ್ಮನಗರ ಯೂತ್ ಕ್ಲಬ್ ಮತ್ತು ದೇವಸ್ಥಾನದ ವತಿಯಿಂದ ಮಂಗಳವಾರ ಆಯೋಜಿಸಲಾದ ರಸಮಂಜರಿ ಕಾರ್ಯಕ್ರಮವನ್ನು ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು. ಸಮಾಜದಲ್ಲಿ ಯುವಜನರ ಸಕ್ರಿಯ ಭಾಗವಹಿಸುವಿಕೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಮಾಜದ ಒಗ್ಗಟ್ಟಿಗೆ ಮತ್ತು ಅಭಿವೃದ್ಧಿಗೆ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಈ …
Read More »TMS ಆಡಳಿತಾಧಿಕಾರಿ ಸರ್ವಾಧಿಕಾರಿ ಯಂತೆ ವರ್ತಿಸುತ್ತಿರುವುದು ವಿಷಾದನಿಯ – ಎನ್.ಕೆ ಭಟ್ ಅಗ್ಗಾಶಿಕುಂಬ್ರಿ.
ಪ್ರತಿಧ್ವನಿಯಲ್ಲಾಪುರ : ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ಆಡಳಿತ ಅಧಿಕಾರಿ ತನ್ನ ಅಧಿಕಾರ ವ್ಯಾಪ್ತಿ ಮೀರಿ ಕಾರ್ಯ ನಿರ್ವಹಿಸುತ್ತಿರುವುದು ವಿಷಾದನಿಯ. ಎರಡು ಸಾವಿರ ಸದಸ್ಯರ ಹಕ್ಕನ್ನು ಮೊಟಕು ಮಾಡಿ, ಹಣವಂತರಿಗೆ ಅನುಕೂಲ ಕಲ್ಪಿಸುವ ಕಾರ್ಯ ಮಾಡುತ್ತಿರುವುದು ರೈತರ ದುರಂತವಾಗಿದೆ.. ಇವರನ್ನು ತಕ್ಷಣದಿಂದ ತೆಗೆದುಹಾಕಬೇಕು ಎಂದು ಟಿ.ಎಂ.ಎಸ್.ನ ಮಾಜಿ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಆಗ್ರಹಿಸಿದ್ದಾರೆ. ಅವರು, ಮಂಗಳವಾರ ಪಟ್ಟಣದ ಶ್ರೀ ಶಕ್ತಿಗಣಪತಿ ದೇವಸ್ಥಾನದ ಆವಾರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ಕುರಿತು ಬುಧವಾರ ಸಹಕಾರಿ …
Read More »ಯಲ್ಲಾಪುರದ ಕಾಳಮ್ಮ ನಗರದಲ್ಲಿ ಇಂದು ರಾತ್ರಿ ಮನೋಜ್ ಎಂಟಟ್ರೈನರ್ ಮ್ಯಾನ್ಯುಯಲ್ ಆರ್ಕೆಸ್ಟ್ರಾ..🎤🎶🎻💃
ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರದ ಜೂನಿಯರ್ ಎಸ್ಪಿಬಿ ಎಂದೇ ಖ್ಯಾತಿ ಪಡೆದ ಯಾರೆನೀನು ರೋಜಾ ಹೂವೆ ಖ್ಯಾತಿಯ“ಮನೋಜ್ ಪಾಟೀಲ್” ತಂಡದಿಂದ ಇಂದು ಕಾಳಮ್ಮ ನಗರದ ತಾಲೂಕು ಕ್ರೀಡಾಂಗಣದಲ್ಲಿ ಕಾಳಮ್ಮ ದೇವಿ ದೇವಸ್ಥಾನದ ವರ್ಧಂತಿ ಉತ್ಸವದ ನಿಮಿತ್ತ ದೇವಸ್ಥಾನ ಮತ್ತು ತ್ರಶೂಲ್ ಬಳಗದ ಆಯೋಜನೆಯಲ್ಲಿ ಸುಮಧುರ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮವು ಸಂಜೆ 7 ರಿಂದ ಪ್ರಾರಂಭವಾಗಲಿದ್ದು ಸಂಗೀತ ಪ್ರೇಮಿಗಳಿಗೊಂದು ಗಂಧರ್ವ ಗಾನಗಳ ರಸದೌತಣ ಸಿಗಲಿದೆ.ಹಲವು ಕಲಾವಿದರನ್ನೊಳಗೊಂಡ ತಂಡದಲ್ಲಿ ಟಿ.ವಿ ರಿಯಾಲಿಟಿ …
Read More »
Prathidvani Yellapura