Breaking News

ಬಡವರ ಬದುಕು ಹಸನಾಗಲು ರೈತರ ಭೂಮಿ ಹಸಿರಾಗಲು ಕಾರ್ಮಿಕರ ಜೀವನ ಬೆಳಕಾಗಲು ಶ್ರಮಿಸಿದ ಹಿರಿಮೆ ಹೆಬ್ಬಾರ್ ಅವರದ್ದು- ವಿವೇಕ್ ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನೇ ಲಕ್ಷದಲ್ಲಿಟ್ಟುಕೊಂಡು ಪ್ರತಿಯೊಬ್ಬ ಬಡ ಕುಟುಂಬವು ನೆಮ್ಮದಿಯಿಂದ ಬಾಳಬೇಕು ಮತ್ತು ಸರ್ಕಾರದ ಯೋಜನೆಯಡಿಯಲ್ಲಿ ಬಡವರಿಗೆ ಮನೆಕಟ್ಟಲು 2.75 ಲಕ್ಷ ರೂ. ಬರುವುದರಿಂದ ಉತ್ತಮ ಮನೆಯಾಗದು ಎಂಬ ಕಾರಣಕ್ಕೆ ಪಟ್ಟಣದ 6 ಪ್ರದೇಶಗಳನ್ನು ಸ್ಲಮ್ ಬೋರ್ಡಿಗೆ ಸೇರಿಸಿ ಪ್ರತಿ ಕುಟುಂಬಕ್ಕೆ ಮನೆಕಟ್ಟಲು 5 ಲಕ್ಷ ರೂ. ದೊರೆಯುವುದಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಡ ಮದ್ಯಮವರ್ಗದವರು ಸ್ವಾಭಿಮಾನಿ ಬದುಕು ನಡೆಸಲೆಂದು ಸಚಿವ ಶಿವರಾಮ ಹೆಬ್ಬಾರ ಈ ಕಾರ್ಯಗಳನ್ನು ಮಾಡಿದ್ದಾರೆ. ಕ್ಷೇತ್ರದ ಒಣ ಭೂಮಿಯಲ್ಲಿ ರೈತನ ಸಂಕಷ್ಟ ಕಂಡು ಮುಂಡಗೋಡು ಮತ್ತು ಬನವಾಸಿ ಹಾಗು ಯಲ್ಲಾಪುರದ ಕೆಲ ಪ್ರದೇಶಗಳಿಗೆ ನೀರು ಹಾಯಿಸಿ ಭೂಮಿ ಹಸಿರಾಗಲು ಪಣತೊಟ್ಟು ಜನಾನುರಾಗಿ ಕಾರ್ಯ ನೆರವೇರಿಸಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ವಿವೇಕ ಹೆಬ್ಬಾರ ಹೇಳಿದರು.

ಅವರು ಪಟ್ಟಣದ ಉದ್ಯಮನಗರ, ಗಣಪತಿಗಲ್ಲಿ, ತಳ್ಳಿಕೇರಿ ಸೇರಿದಂತೆ ವಿವಿದೆಡೆಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡುತ್ತಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪಟ್ಟಣ ಸಮೀಪದ ಅರಣ್ಯದಲ್ಲಿ ಶ್ರೀಗಂಧ ಚೋರರ ಕರಾಮತ್ತು ಗಂಧದ ಮರ ಕಡಿದ ಕಳ್ಳರು.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸಮೀಪದಲ್ಲಿರುವ ನಾರಾಯಣಪುರ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಕಳ್ಳರು ತಮ್ಮ ಕೈಚಳಕ ತೋರಿದ್ದು ಗುಣಮಟ್ಟದ ಮತ್ತು …

Leave a Reply

Your email address will not be published. Required fields are marked *