Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ವಿಶು ಸಂಭ್ರಮಕ್ಕೆ ಯಲ್ಲಾಪುರದಲ್ಲಿ ಅಯ್ಯಪ್ಪ ಸ್ವಾಮಿ ವಿಶೇಷ ಪೂಜೆ ಅನ್ನ ಪ್ರಸಾದ ವಿತರಣೆ

ಪ್ರತಿಧ್ವನಿ,ಯಲ್ಲಾಪುರ: ಕಲಿಯುಗ ವರದ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವರ್ಷದಲ್ಲಿ ಮಕರ ಸಂಕ್ರಾತಿ ಎಷ್ಟು ಶ್ರೇಷ್ಟವೊ ಅಷ್ಟೆ ಶ್ರೇಷ್ಠ ವಿಶು ಪೂಜಾ ಕಾರ್ಯವಾಗಿದೆ. ಇದು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಬರಲಿದ್ದು ಯಲ್ಲಾಪುರದಲ್ಲಿ ಜೋಡುಕೆರೆ ಮಣಿಕಂಠ ಸನ್ನಿದಾನದಲ್ಲಿ ವಿಶು ಸಂದರ್ಭದ ಅಯ್ಯಪ್ಪ ದರ್ಶನಕ್ಕಾಗಿ ಕೆಲವು ಭಕ್ತರು ಮಾಲಾಧಾರಣೆ ಮಾಡಿದ್ದು ವೃತ ಪೂಜೆಯನ್ನು ಅತ್ಯಂತ ಶ್ರದ್ದಾಭಕ್ತಿಯಿಂದ ನೆರವೇರಿಸಿದರು. ಸನ್ನಿದಾನದಲ್ಲಿ ನಡೆದ ವಿಶೇಷ ಪಡಿ ಪೂಜಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆಯನ್ನು …

Read More »

ಯಲ್ಲಾಪುರ ಪೊಲೀಸರ ಮಿಂಚಿನ ಕಾರ್ಯಾಚರಣೆ ಇನ್ನೋವಾ ಕಾರು ಕಳ್ಳತನ ಮಾಡಿದ ಮೂವರು ಆರೋಪಿಗಳ ಬಂಧನ

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಶಾರದಾಗಲ್ಲಿಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಅಂದಾಜು 4,50,000 ಮೌಲ್ಯದ ಇನ್ನೋವಾ ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಮೂವರು ಆರೋಪಿಗಳನ್ನು ಮಂಗಳೂರಿನ ಕಂಕನಾಡಿಯಲ್ಲಿ ಯಲ್ಲಾಪುರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.ಪಟ್ಟಣದ ಶಾರದಾ ಗಲ್ಲಿಯ ನಿವಾಸಿ ಮಹ್ಮದ್ ಶೇಖ್ ಎಂಬುವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಕಳ್ಳತನವಾಗಿರುವ ಕುರಿತು ಯಲ್ಲಾಪುರ ಠಾಣೆಯಲ್ಲಿ ಏ.4 ರಂದು ದೂರು ಸಲ್ಲಿಸಿದ್ದರು.ಪ್ರಕರಣದ ಬೆನ್ನತ್ತಿದ ಪೊಲೀಸರು ಖಚಿತ ಮಾಹಿತಿಯನ್ನಾಧರಿಸಿ ಏ. 8 ರಂದು …

Read More »

ಕೈತೋಟ ಅಂದು ಇಂದು
( ಹಸಿರೇ ಉಸಿರು)

ಪ್ರತಿಧ್ವನಿ ಅತಿಥಿ ಬರಹದಲ್ಲಿ ಶ್ರೀ ಮಧುಕೇಶವ ಭಾಗ್ವತ ಯಲ್ಲಾಪುರ ಮನೆಯಲ್ಲಿ ಸಂತೋಷ, ನೆಮ್ಮದಿ, ಆರೋಗ್ಯ ಸದಾ ನೆಲೆಸಿರಬೇಕೆಂದರೆ ಆ ಮನೆಯ ಮುಂದೊಂದು ಸಮೃದ್ಧಿ ಹೊಂದಿದ ಕೈತೋಟ ಇರಲೇಬೇಕು. ಅದು ಹೂವಿನ ಗಿಡಕ್ಕೆ ಮಾತ್ರ ಸೀಮಿತವಾಗದೇ ವಿವಿಧ ರೀತಿಯ ಸೊಪ್ಪು ತರಕಾರಿ ಬೆಳೆಯುವಂತಿದ್ದರೆ ಅಂತಹ ಮನೆಯಲ್ಲಿ ಆರೋಗ್ಯ, ಆನಂದ ಸದಾ ನೆಲೆಸಿರುತ್ತದೆ. ಹಿಂದೆಲ್ಲ ಪ್ರತೀ ಮನೆಗೊಂದು ಕೈತೋಟ ಇದ್ದೇ ಇರುತ್ತಿತ್ತು. ಹಾಗೂ ಬಹುತೇಕ ಎಲ್ಲರ ಮನೆಯಲ್ಲ ಗೋಸಾಕಣೆ ಇರುವುದರಿಂದ ಗೊಬ್ಬರ ಸಿಗುವುದರಿಂದ …

Read More »

ರಜಾ ದಿನಗಳು ವ್ಯರ್ಥವಾಗದಂತೆ ಕ್ರಿಕೆಟ್ ಕೋಚಿಂಗ್ ಗೆ ಸಿದ್ದರಾದ ಯಲ್ಲಾಪುರದ ಮಕ್ಕಳು…!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ….. ಪ್ರತಿಧ್ವನಿ,ಯಲ್ಲಾಪುರ : ಮಕ್ಕಳಿಗೆ ರಜೆ ಬಂದರೆ ನೆಂಟರಮನೆ, ಪ್ರವಾಸ, ಮೋಜು ಮಸ್ತಿಯ ಆಟ, ಹಳ್ಳಕೆರೆ ತೊರೆಗಳಿಗೆ ಭೇಟಿ ಹೀಗೆ ಹಲವು ವಿಧದಲ್ಲಿ ರಜೆಯ ಮಜವನ್ನು ಸವಿಯಲು ಅಣಿಯಾಗುತ್ತಿದ್ದರು. ಆದರೆ ಇತ್ತೀಚಿಗೆ  ಕೇವಲ “ಮೊಬೈಲ್” ಒಂದನ್ನೇ ಪ್ರಪಂಚ ಎಂದುಕೊಂಡು ಮಕ್ಕಳು ಕುಬ್ಜರಾಗುತ್ತಿರುವುದು ದುರಂತವಾಗಿದೆ. ಇದಕ್ಕೆ ಪರಿಹಾರವೆಂಬಂತೆ ಮೈಂಡ್ ಟ್ರೈನರ್ ಯೋಗೇಶ್ ಶಾನಭಾಗ ನೇತೃತ್ವದಲ್ಲಿ ಮಕ್ಕಳಿಗೆ ಕ್ರಿಕೆಟ್ ಕೋಚಿಂಗ್ ಕ್ಲಾಸ್ ಪ್ರಾರಂಭಿಸಿದ್ದು 35 ಕ್ಕೂ …

Read More »

ವಿಧನಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಲ್ಲಾಪುರದಲ್ಲಿ ಸಿ.ಆರ್.ಪಿ.ಎಫ್ ಯೋಧರು ಮತ್ತು ಪೊಲೀಸರ ಪಥಸಂಚಲನ….

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು ಶಾಂತಿ ಸುವ್ಯವಸ್ಥೆಯ ಭರವಸೆಗಾಗಿ ಸಿ.ಆರ್.ಪಿ.ಎಫ್. ಯೋಧರು ಮತ್ತು ಪೊಲೀಸ್ ಸಿಬ್ಬಂದಿಗಳು ಪಟ್ಟಣದ ಪ್ರಮುಖ ರಸ್ತೆಗಳೂ ಹಾಗೂ ತಾಲೂಕಿನ ಕಿರವತ್ತಿಯಲ್ಲಿ ಪಥ ಸಂಚಲನ ನಡೆಸಿ ಭದ್ರತೆಯ ಭರವಸೆ ತುಂಬಿದರು. ಪಥ ಸಂಚಲನದಲ್ಲಿ ಯಲ್ಲಾಪುರ ಪಿಐ ರಂಗನಾಥ ನೀಲಮ್ಮನವರ್ ಭಾಗವಹಿಸಿ ಮುನ್ನೆಡೆಸಿದರು. ಪಿ.ಎಸ್.ಐಗಳಾದ ರವಿ ಗುಡ್ಡಿ, ಸುನಿಲ್, ಮಂಜುನಾಥ ಪಾಟೀಲ ಹಾಗೂ ಲತಾ ಕೆ ಪಥಸಂಚಲನದಲ್ಲಿ …

Read More »

ಕಾಂಗ್ರೆಸ್ ನಗರ ಘಟಕದ ಆರೋಪದ ಏಟಿಗೆ.                                                 ಪಟ್ಟಣ ಪಂಚಾಯತ್ ಸದಸ್ಯರ ಪ್ರತ್ಯುತ್ತರದ ಎದಿರೇಟು.

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಒಟ್ಟು 58  ಕೊಳವೆಬಾವಿಗಳು ಕಾರ್ಯ ನಿರ್ವಹಿಸುತ್ತಿದ್ದು ಪಟ್ಟಣದ ಎಲ್ಲಾ ವಾರ್ಡುಗಳ ಬಹುತೇಕ ನೀರಿನ ಸಮಸ್ಯೆಗಳಿಗೆ ಪೂರ್ಣವಿರಾಮ ಹಾಕಲಾಗಿದೆ. ಮುಂಜಾಗ್ರತೆಗಾಗಿ ಮೂರು ನೂತನ ಕೊಳವೆಬಾವಿಗಳನ್ನು ನಿರ್ಮಿಸಲಿದ್ದೇವೆ . ಈವರೆಗೆ ಯಾವುದೇ ವಾರ್ಡ್  ನಾಗರೀಕರಾಗಲೀ ಅಥವಾ ಕಾಂಗ್ರೆಸ್ ಸುದ್ದಿಗೋಷ್ಠಿಯಲ್ಲಿದ್ದ ಪ.ಪಂ ಸದಸ್ಯರಾಗಲೀ ನೀರಿನ ಕೊರತೆಯಾದ ಕುರಿತಾಗಿ ನನಗಾಗಲೀ, ಪ.ಪಂ ಅಧಿಕಾರಿಗಳಿಗಾಗಲೀ ದೂರು ನೀಡಿರುವುದಿಲ್ಲ ಎಂದು ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.       ಯಲ್ಲಾಪುರ ಕಾಂಗ್ರೆಸ್ ನಗರ …

Read More »

ಸಿಡಿಲ ಅಬ್ಬರಕ್ಕೆ ತೆಂಗಿನ ಮರದಲ್ಲಿ ಬೆಂಕಿ ಯಲ್ಲಾಪುರದ ವಸಂತ ಭವನ ಚಾಳಿನಲ್ಲಿ ನಡೆದ ಘಟನೆ.

ಯಲ್ಲಾಪುರದಲ್ಲಿ ಸಿಡಿಲು ಬಡಿದು ತೆಂಗಿನಮರಕ್ಜೆ ಬೆಂಕಿ ತಕ್ಷಣ ನಂದಿಸಿದ ಅಗ್ನಿಶಾಮಕ ದಳ     ಪಟ್ಟಣದಲ್ಲಿ ಸಂಜೆ ಇದ್ದಕ್ಕಿದ್ದಂತೆ ಮೋಡ ಕವಿದು ಗುಡುಗು ಸಿಡಿಲು ಆರಂಭವಾಗಿ ತುಂತುರು ಮಳೆ ಹನಿ ಜಿನುಗಿದೆ ಗೋಪಾಲಕೃಷ್ಣ ಗಲ್ಲಿಯ ವಸಂತಭವನ ಚಾಳ್ ನಲ್ಲಿ ತೆಂಗಿನ ಮರ ಒಂದಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿದಿದೆ.     ತಕ್ಷಣ ಅಲ್ಲೆ ಇದ್ದ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಕರೆಮಾಡಿದ್ದು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಮುಂದಾಗಬಹುದಾದ ಅನಾಹುತ ತಪ್ಪಿದಂತಾಗಿದೆ.

Read More »

ಕಾವೇರುತ್ತಿದೆ ಚುನಾವಣ ಕಣ ಕಮಲಕ್ಕೆ ಹೆಬ್ಬಾರ್  ಕೈಗೆ ವಿ.ಎಸ್.. ಜೆಡಿಎಸ್…?

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ    ‌‌  ‌‌ ‌‌ ‌‌‌                         ಶ್ಯಾಮಲ ನಾಗೇಶ್ ಲೇಖನಿಯಲ್ಲಿ ಯಲ್ಲಾಪುರ ಕ್ಷೇತ್ರದ ಗದ್ದುಗೆ ಯಾರ ಪಾಲು….? ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗುತ್ತಲೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ರಣಕಣದಲ್ಲಿ ಯಲ್ಲಾಪುರದ ಮಟ್ಟಿಗೆ ಚುನಾವಣ ಕಾವು ನಿಧಾನವಾಗಿ ಏರುತ್ತಿದೆ.  ಆದರೆ ತೆರೆಮರೆಯ ಚಟುವಟಿಕೆ ಮಾತ್ರ ಚುರುಕಾಗಿದೆ. ಕಮಲಕ್ಕೆ ಹೆಬ್ಬಾರ್ ಪಕ್ಕ. ಘೋಷಣೆಯಷ್ಟೆ ಬಾಕಿ         ತಾಲೂಕಿನಲ್ಲಿ ಹೆಬ್ಬಾರ್ ಮೆನಿಯ ಚಲಾವಣೆಯಲಿದ್ದು ಕಾಂಗ್ರೆಸ್ ಕೈ ಹಿಡಿದ ವಿ.ಎಸ್ …

Read More »

ಬಿಜೆಪಿ ಸಂಸ್ಥಾಪನ ದಿನ ಆಚರಿಸಿದ ಯಲ್ಲಾಪುರ ಬಿಜೆಪಿ ಮಂಡಲ

ಯಲ್ಲಾಪುರ : ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುತ್ತ ಬಂದಿರುವ ಮತ್ತು ರಾಷ್ಟç ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡ ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಕಟ್ಟಿಬೆಳೆಸಿದ ಪಕ್ಷವನ್ನು ನಾವು ಇನ್ನಷ್ಟು ಬಲಿಷ್ಟಗೊಳಿಸಬೇಕಿದೆ. ಇದಕ್ಕೆ ಕಾರ್ಯಕರ್ತರೆಲ್ಲರೂ ಒಮ್ಮನಸ್ಸಿನಿಂದ ಕೈ ಜೋಡಿಸಿದರೆ ಮಾತ್ರ ಸಾಧ್ಯ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಪುನಃ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಕಾರ್ಯವನ್ನು ನಾವೆಲ್ಲರೂ ಕೂಡಿ ಮಾಡಬೇಕಾಗಿದೆ ಅಭಿವೃದ್ಧಿ ಒಂದೇ ನನ್ನಚಲ ಈ ಕ್ಷೇತ್ರದ ಜನರೆ ನನ್ನ ಬಲ ಎಂದು ಕಾರ್ಮಿಕ ಸಚಿವ …

Read More »

ಸುಡು ಬಿಸಿಲ ಬೇಗೆ ತೀರಿಸುವುದಿನ್ನು ಬಲು ದೂರ ಗಗನಕ್ಕೇರಿದ ನಿಂಬೆಹಣ್ಣಿನ ದರ

ಪ್ರತಿಧ್ವನಿ,ಯಲ್ಲಾಪುರ : ಬೇಸಿಗೆಯ ಜಳ ಹೆಚ್ಚಾದಂತೆಲ್ಲಾ ಎಳನೀರು, ಕಲ್ಲಂಗಡಿ, ಕಬ್ಬಿನಹಾಲು, ಮಜ್ಜಿಗೆ, ಎಳ್ಳುನೀರು, ಶರಬತ್ತು ಹಾಗೂ ಇನ್ನಿತರೆ ದಾಹ ನೀಗುವ ಪಾನೀಯಗಳ ಬೇಡಿಕೆ ಹೆಚ್ಚಿದ್ದು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ವಿಶೇಷವಾಗಿ ಈ ಸಂದರ್ಭದಲ್ಲಿ ನಿಂಬೆ ಹಣ್ಣಿನ ದರ ದಿಡೀರನೆ ಹೆಚ್ಚಾಗಿದ್ದು ಒಂದು ನಿಂಬೆಹಣ್ಣಿಗೆ ೧೦ರೂ ವರೆಗೂ ಏರಿಕೆ ಕಂಡಿದೆ. ಬೇಸಿಗೆಯ ಸಮಯದಲ್ಲಿ ಪೆಪ್ಸಿ, ಕೋಕೋಕೋಲಾದಂತಹ ಪಾನೀಯಗಳಿಗೆ ಮೊರೆ ಹೋಗುವ ಮಂದಿ ಕಡಿಮೆಯಾಗುತ್ತಿದ್ದು ದೇಸೀ ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ. …

Read More »