Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಯಲ್ಲಾಪುರದಲ್ಲಿ ಯಶಸ್ವಿಯಾದ ವಿಜ್ಞಾನ ಶಿಕ್ಷಕರ ಮೂರು ದಿನದ ಕಾರ್ಯಗಾರ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಸರ್ಕಾರ ನವದೆಹಲಿ. ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತು ಹಾಗೂ ವಿಕಾಸನ ಕೇಂದ್ರ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯ ಶಿರಸಿ ಶೈಕ್ಷಣಿಕ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಯಲ್ಲಾಪುರ ಮುಂಡಗೋಡ ಹಳಿಯಾಳ ಜೋಯಿಡಾ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಹೋಲಿ ರೋಜರಿ …

Read More »

ಕ್ರಿಯಾಶೀಲ ವ್ಯಕ್ತಿತ್ವದ ಸುರೇಶ್ ಬೋರ್ಕರ್ ಗೆ ಜಿ.ನಿ.ನೌ.ಸಂ ದಿಂದ ಕಾರವಾರದಲ್ಲಿ ಸನ್ಮಾನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಕಾರವಾರದ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ನಿವೃತ್ತ ನೌಕರರ ಸಂಘದ ಕಟ್ಟಡದ ಉದ್ಘಾಟನೆ ನೆರವೇರಿತು.ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಂತರ ನಿರಾಳರಾಗದೆ ಸದಾ ಕ್ರಿಯಾಶೀಲರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಂಡು ಇತರರಿಗೆ ಮಾದರಿಯಾಗಿರುವ ಸುರೇಶ್ ಬೋರ್ಕರ್ ಅವರು ಯಲ್ಲಾಪುರ ತಾಲೂಕು ನಿ.ನೌ.ಸಂ ಕಾರ್ಯದರ್ಶಿಯಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ಜಿಲ್ಲಾ ಸಂಘಟನ …

Read More »

ಅದೇಕೆ ಬಿಜೆಪಿಗರು ಲೋಕಸಭೆ ಎಂದರೆ ಅನಂತ ಭಜನೆ ಮಾಡುತ್ತಾರೆ…???

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ದಿನಗಳು ಕಳೆದಂತೆ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಕ್ಷೇತ್ರಗಳಿಗೆ ಸಂಬAಧಿಸಿದAತೆ ಟಿಕೆಟ್ ಅವರಿಗೆ ಇವರಿಗೆ ಎಂಬ ಚರ್ಚೆ ಜೋರಾಗಿದೆ. ಕೆನರಾ ಲೋಕಸಭಾ ಕ್ಷೇತ್ರದ ವಿಷಯ ಬಂದಾಗ ಮಾತ್ರ ಬೇರೆಲ್ಲಾ ಪಕ್ಷಗಳ ಅಭ್ಯರ್ಥಿ ವಿಚಾರ ಅಷ್ಟಾಗಿ ಪ್ರಮುಖವಾಗುವುದಿಲ್ಲ. ಹಿಂದುತ್ವದ ಫೈರ್ ಬ್ರಾಂಡ್ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಬಗ್ಗೆ ಸುದ್ದಿ ಜೋರಾಗಿ ಬಿಡುತ್ತದೆ. ಈ ಬಾರಿ …

Read More »

ಗಣಿತ ಲೋಕದ ಅಪ್ರತಿಮ ಭಕ್ತ : ಶ್ರೀನಿವಾಸ ರಾಮಾನುಜನ್

ಡಿಸೆಂಬರ್ 22 ಅಂತರಾಷ್ಟ್ರೀಯ ಗಣಿತ ದಿನ ವಿಶೇಷ ಲೇಖನ. …. ಪ್ರತಿಧ್ವನಿ ಅತಿಥಿ ಬರಹ ರವಿಕುಮಾರ ಕೆ ಎನ್ಗಣಿತ ಶಿಕ್ಷಕರುಸರ್ಕಾರಿ ಪ್ರೌಢಶಾಲೆ ಬಿಸಗೋಡತಾಲೂಕು ಯಲ್ಲಾಪುರ. ಕೃಪೆ: ಅನಂತವನ್ನು ಅರಿತಾತ- ಲೇಖಕರು ಬಿ.ಕೆ ವಿಶ್ವನಾಥರಾವ್ ) ತಮಿಳುನಾಡು ರಾಜ್ಯದ ಕೊಯಂಬತ್ತೂರು ಜಿಲ್ಲೆ ಈ ರೋಡು ಪಟ್ಟಣದಲ್ಲಿ 22. 12. 2018 ರಂದು ರಾಮಾನುಜನ್ನರ ಜನನ. ತಂದೆ ಕೆ ಶ್ರೀನಿವಾಸ ಅಯ್ಯಂಗಾರ್ ಕುಂಭಕೋಣಂ ನ ಜವಳಿ ಅಂಗಡಿಯ ಗುಮಾಸ್ತರಾಗಿದ್ದರು ತಾಯಿ ಕೋಮಲತಮ್ಮಳ್ ಗೃಹಿಣಿ. …

Read More »

ಅನಂತ ಮೂರ್ತಿ ಟ್ರಸ್ಟ್ ವತಿಯಿಂದ ಯಲ್ಲಾಪುರದಲ್ಲಿ ಕೊನೆ ಗೌಡರಿಗೆ ಉಚಿತ ಜೀವೇವಿಮೆ ಕಾರ್ಯ ಪ್ರಾರಂಭ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ:- ತಾಲೂಕಿನ ಮಂಚಿಕೇರಿಯ ಹಾಸಣಗಿ ಸೇವಾ ಸಹಕಾರಿ ಸಂಘದಲ್ಲಿ ಶಿರಸಿಯ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಕೊನೆಗೌಡರಿಗೆ ಜೀವ ವಿಮೆ ಯೋಜನೆಗೆ ಯಲ್ಲಾಪುರ ತಾಲೂಕಾ ಮಟ್ಟದಲ್ಲಿ ಚಾಲನೆ ನೀಡಲಾಯಿತು. ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾದ ಟಿ.ವಿ. ಹೆಗಡೆ ಮಾತನಾಡಿ, ಇದೊಂದು ಮಹತ್ವದ ಅತೀ ಅವಶ್ಯ ಕಾರ್ಯಕ್ರಮ, ಯಾರೂ ಕೂಡ ಬೇಕಂತೆ ಮರದಿಂದ ಬೀಳುವುದಿಲ್ಲ, …

Read More »

ಕಂಪ್ಲಿ ಪಂಚಾಯತ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಂಪ್ಲಿ ಗ್ರಾಮ ಪಂಚಾಯತ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದು ರೇಣುಕಾ ಬಸವಣ್ಣಿ ಭೋವಿವಡ್ಡರ ಅಧ್ಯಕ್ಷರಾಗಿ , ಸದಾಶಿವ ನರಸಿಂಹ ಭಟ್ಟ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಕಂಪ್ಲಿ ಗ್ರಾ.ಪಂಚಾಯತಕ್ಕೆ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣಾ ಆಯ್ಕೆ ಪ್ರಕ್ರಿಯೆಯಲ್ಲಿ ಸಮಯಕ್ಕೆ ಸರಿಯಾಗಿ ನಾಮಪತ್ರ ಸಲ್ಲಿಕೆಯಾಗದ ಕಾರಣ ಚುನಾವಣೆ ಮುಂದೂಡಿ ಆಯೋಗದ ನಿರ್ದೇಶನಕ್ಕೆ …

Read More »

ಯಲ್ಲಾಪುರದ ವಿವಿದೆಡೆ ನಡೆದ ಚಂಪಾಷಷ್ಠಿ ವೈಭವ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ವಿವಿಧ ಭಾಗಗಳಲ್ಲಿ ಚಂಪಾಶೆಟ್ಟಿ ವಿಶೇಷ ಪೂಜೆಗಳು ಜರುಗಿದವು. ಭಕ್ತಾದಿಗಳು ಮುಂಜಾನೆಯಿಂದಲೇ ನಾಗದೇವರ ಸ್ಥಳಗಳಲ್ಲಿ ಭಕ್ತಿಭಾವಗಳಿಂದ ವಿವಿಧ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿದರು. ಚಂಪಾ ಷಷ್ಠಿ ಪ್ರಯುಕ್ತ ಶಾಸಕ ಅರಬೈಲ್ ಶಿವರಾಮ್ ಹೆಬ್ಬಾರ್‌ ಉದ್ಯಮ ನಗರದ ನಾಗರ ದೇವಾಲಯದ ನಾಗದರ್ಶನ ಪಡೆದು ಪೂಜೆ ಸಲ್ಲಿಸಿದರು. ಪಟ್ಟಣದ ಉದ್ಯಮ ನಗರದಲ್ಲಿರುವ ಏಕೈಕ ನಾಗ ದೇವಾಲಯದಲ್ಲಿ ಭಕ್ತಸಾಗರವೇ ತುಂಬಿತ್ತು. ಹಾಲಿನ …

Read More »

” ಶ್ರೀ ರಾಮ ಜಯ ರಾಮ ಜಯ ಜಯ ರಾಮ “
🚩ಆತ್ಮೀಯ ಹಿಂದು ಧರ್ಮದ ಬಂಧುಗಳೆ. 🚩

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ 2024 ರ ಜನವರಿ 22 ರಂದು ನೂರಾರು ವರ್ಷಗಳ ನೋವಿನ ಇತಿಹಾಸಕ್ಕೆ ತಿಲಾಂಜಲಿ ಇಟ್ಟು ಭರತ ಭೂಮಿಯಲ್ಲಿ ಹಿಂದು ನೆಲದಲ್ಲಿ ಮರ್ಯಾದಾ ಪುರುಷೋತ್ತಮ ” ಪ್ರಭು ಶ್ರೀ ರಾಮನ ಜನ್ಮ ಸ್ಥಳ ಅಯೋಧ್ಯೆ ” ಯಲ್ಲಿ ದಿವ್ಯವಾದ ದೇಗುಲ ಭಾರತೀಯ ಸನಾತನ ಸಂಸ್ಕೃತಿಯ ಪ್ರತಿ ಹಿಂದುವಿನ ಆತ್ಮಗೌರವದ ಪ್ರತೀಕವಾಗಿ ಲೋಕಾರ್ಪಣೆಯಾಗುತ್ತಿದೆ.ಬಂಧುಗಳೆ ಇದು ಸಾಮಾನ್ಯದ ಸಂಗತಿಯಲ್ಲ ನೂರಾರು ವರ್ಷಗಳ ಸುದೀರ್ಘ …

Read More »

ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ; ಪಂ. ಗಣಪತಿ ಭಟ್ಟ ಹಾಸಣಗಿ ಅವರಿಗೆ ಸನ್ಮಾನ…

,ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಮಧ್ಯಪ್ರದೇಶ ಸರ್ಕಾರದ ಪ್ರತಿಷ್ಠಿತ ತಾನ್ ಸೇನ್ ಸಮ್ಮಾನ್ ಪುರಸ್ಕಾರಕ್ಕೆ ಭಾಜನರಾದ, ನಮ್ಮ ನಾಡಿನ ಶ್ರೇಷ್ಠ ಸಂಗೀತ ವಿದ್ವಾಂಸಂ ತಾಲೂಕಿನ ಪಂ.ಗಣಪತಿ ಭಟ್ ರಂದು ಹಾಸಣಗಿಯವರನ್ನು ಯಲ್ಲಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನವತಿಯಿಂದ ಡಿ.17 ರಂದು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರಾದ ಪಂ.ಗಣಪತಿ ಭಟ್ ಹಾಸಣಗಿಯವರು ಕೃತಜ್ಞತೆಯ ಮಾತುಗಳನ್ನಾಡಿದರು. ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದ ಅಡಿಯಲ್ಲಿ …

Read More »

ರಾಮಜನ್ಮಭೂಮಿಯಿಂದ ಬಂದ ಪವಿತ್ರಾಕ್ಷತೆ ನಾಲ್ಕು ತಾಲೂಕುಗಳಿಗೆ ಹಂಚಿಕೆ…🚩🚩🚩

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಶ್ರೀರಾಮನ ತಾರಕ ಮಂತ್ರ ಪ್ರತಿ ಮನೆಗಳಲ್ಲಿ ಮಾರ್ದನಿಸಬೇಕು. ಪ್ರತಿ ಮನಗಳಲ್ಲಿ ಪ್ರಭು ಶ್ರೀರಾಮನ ಆದರ್ಶಗಳು ಮನೆಮಾಡಬೇಕಿದೆ . ತನು, ಮನ ಶುದ್ಧಿಯ ಜೊತೆಯಲ್ಲಿ ಪರಿಸರ ಸ್ವಚ್ಛತೆ ಅತ್ಯವಶ್ಯಕವಾಗಿದ್ದು ಯಲ್ಲಾಪುರದ ಶ್ರದ್ಧಾಕೇಂಧ್ರಗಳ ಸುತ್ತಮುತ್ತಲ ಪರಿಸರದ ಸ್ವಚ್ಛತೆಗೆ ಮುಂದಾಗಬೇಕಿದೆ. ಅಯೋಧ್ಯಾ ರಾಮಮಂದಿರ ಲೋಕಾರ್ಪಣೆ ದಿನವನ್ನು ಚಿರಸ್ಥಾಯಿಯಾಗಿಸಲು ಸರ್ವ ಹಿಂದೂಗಳೂ ಮುಂದಾಗಬೇಕಿದೆ ಎಂದು ನಿಶ್ಚಲಾನಂದ ಸ್ವಾಮೀಜಿ ಹೇಳಿದರು. ಅವರು …

Read More »