Breaking News

ಶಿವಕುಮಾರ್ ರಾಮಕೃಷ್ಣ ಭಟ್ ಯಡಳ್ಳಿಗೆ ಒಲಿದ ಡಾಕ್ಟರೇಟ್ ಪದವಿ – ಎಂ.ಕೆ.ಭಟ್ ಯಡಳ್ಳಿ ಸಂತಸ

ಪ್ರತಿಧ್ವನಿ ಯಲ್ಲಾಪುರ :  ರಾಜಧಾನಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ  ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ನೀಡುವ ಡಾಕ್ಟರೇಟ್ ಪದವಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಘನತೆವೆತ್ತ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ರವರು ಯಲ್ಲಾಪುರ ತಾಲೂಕಿನ ಶಿವಕುಮಾರ್ ಭಟ್ಟ ಯಡಳ್ಳಿ ಅವರಿಗೆ ಪಿ.ಹೆಚ್.ಡಿ  ಪ್ರಧಾನ ಮಾಡಿದರು.

ತಾಲೂಕಿನ ತಿಮ್ಮಪ್ಪ ಬಟ್ಟ ಕುಟುಂಬದ ಮಹಾಲಕ್ಷ್ಮಿ ಮತ್ತು ರಾಮಕೃಷ್ಣ ಭಟ್ಟ ಪುತ್ರರಾಗಿ ಜನಿಸಿದ. ಶಿವಕುಮಾರ್ ಭಟ್ವ ಯಡಳ್ಳಿ ಇವರು ಶ್ರೀ ಮಾತಾ ಸಂಸ್ಕೃತ ಮಹಾವಿದ್ಯಾಲಯ ಕೋಟೆಮನೆ ಉಮ್ಮಚಗಿಯಲ್ಲಿ, ಸಂಸ್ಕೃತ ಅಭ್ಯಾಸಮಾಡಿ ಡಾ, ಆರೂಢ ಭಾರತಿಸ್ವಾಮಿಗಳ ಮಾರ್ಗದರ್ಶನದಲ್ಲಿ ಕಿರಾತಾಜು೯ನೀಯ ಮಹಾಕಾವ್ಯ ಸ್ಥಿತಕೃತ್ತದ್ದಿತ ಪದ ವಿಮರ್ಶ್
ವಿಷಯದ ಮೇಲೆ ಡಾಕ್ಟರೇಟ್ ಪದವಿಯನ್ನು ಗಳಿಸಿರುತ್ತಾರೆ.


ಏ,7 ರಂದು ಬೆಂಗಳೂರಿನಲ್ಲಿ  ನಡೆದ ಸಮಾರಂಭದಲ್ಲಿ, ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾಕ್ಟರ್ ಎಸ್ ಅಹಲ್ಯಾ ಶರ್ಮಾರವರು ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಡಾಕ್ಟರ್ ಸಿ ಎನ್ ಮಂಜುನಾಥ್ ರವರು, ಪಾಲ್ಗೊಂಡು ಪ್ರಶಸ್ತಿ ಪ್ರಧಾನಕ್ಕೆ ಸಾಕ್ಷಿಯಾದರು.

ನಮ್ಮ ಕುಟುಂಬದಲ್ಲಿ ಪ್ರಥಮ ಬಾರಿಗೆ ಡಾಕ್ಟರೇಟ್ ಪದವಿ ಪಡೆದ ಶಿವಕುಮಾರ್ ಭಟ್ಟರವರಿಗೆ  ನಮ್ಮ ಕುಟುಂಬದ ಎಲ್ಲಾ ಸದಸ್ಯರ ಪರವಾಗಿ ಮತ್ತು ಊರಿನ ಪರವಾಗಿ ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಎಂ.ಕೆ.ಭಟ್.ಯಡಳ್ಳಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇವರ ಕಲ್ಲಳ್ಲಿಯಲೊಂದು ಬುಡಕಟ್ಟು ಸಿದ್ದಿ ಸಮುದಾಯದ ಜಾನಪದ ಜಗತ್ತಿನ ಪರಿಚಯ.

ಕೇಬಲ್ ನಾಗೇಶ್, ಯಲ್ಲಾಪುರ.🖋 ಪ್ರತಿಧ್ವನಿ ಯಲ್ಲಾಪುರ : ನಶಿಸಿ ಹೋಗುತ್ತಿರುವ ಅನೇಕ ಸಂಸ್ಕೃತಿಗಳಲ್ಲಿ ಅರಣ್ಯ ವಾಸಿ ಬುಡಕಟ್ಟು ಸಿದ್ದಿ ಸಮುದಾಯದ …

Leave a Reply

Your email address will not be published. Required fields are marked *