
ಪ್ರತಿಧ್ವನಿ ಯಲ್ಲಾಪುರ : ರಾಜಧಾನಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ನೀಡುವ ಡಾಕ್ಟರೇಟ್ ಪದವಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಘನತೆವೆತ್ತ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ರವರು ಯಲ್ಲಾಪುರ ತಾಲೂಕಿನ ಶಿವಕುಮಾರ್ ಭಟ್ಟ ಯಡಳ್ಳಿ ಅವರಿಗೆ ಪಿ.ಹೆಚ್.ಡಿ ಪ್ರಧಾನ ಮಾಡಿದರು.

ತಾಲೂಕಿನ ತಿಮ್ಮಪ್ಪ ಬಟ್ಟ ಕುಟುಂಬದ ಮಹಾಲಕ್ಷ್ಮಿ ಮತ್ತು ರಾಮಕೃಷ್ಣ ಭಟ್ಟ ಪುತ್ರರಾಗಿ ಜನಿಸಿದ. ಶಿವಕುಮಾರ್ ಭಟ್ವ ಯಡಳ್ಳಿ ಇವರು ಶ್ರೀ ಮಾತಾ ಸಂಸ್ಕೃತ ಮಹಾವಿದ್ಯಾಲಯ ಕೋಟೆಮನೆ ಉಮ್ಮಚಗಿಯಲ್ಲಿ, ಸಂಸ್ಕೃತ ಅಭ್ಯಾಸಮಾಡಿ ಡಾ, ಆರೂಢ ಭಾರತಿಸ್ವಾಮಿಗಳ ಮಾರ್ಗದರ್ಶನದಲ್ಲಿ “ಕಿರಾತಾಜು೯ನೀಯ ಮಹಾಕಾವ್ಯ ಸ್ಥಿತಕೃತ್ತದ್ದಿತ ಪದ ವಿಮರ್ಶ್“
ವಿಷಯದ ಮೇಲೆ ಡಾಕ್ಟರೇಟ್ ಪದವಿಯನ್ನು ಗಳಿಸಿರುತ್ತಾರೆ.
ಏ,7 ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ, ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾಕ್ಟರ್ ಎಸ್ ಅಹಲ್ಯಾ ಶರ್ಮಾರವರು ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಡಾಕ್ಟರ್ ಸಿ ಎನ್ ಮಂಜುನಾಥ್ ರವರು, ಪಾಲ್ಗೊಂಡು ಪ್ರಶಸ್ತಿ ಪ್ರಧಾನಕ್ಕೆ ಸಾಕ್ಷಿಯಾದರು.

ನಮ್ಮ ಕುಟುಂಬದಲ್ಲಿ ಪ್ರಥಮ ಬಾರಿಗೆ ಡಾಕ್ಟರೇಟ್ ಪದವಿ ಪಡೆದ ಶಿವಕುಮಾರ್ ಭಟ್ಟರವರಿಗೆ ನಮ್ಮ ಕುಟುಂಬದ ಎಲ್ಲಾ ಸದಸ್ಯರ ಪರವಾಗಿ ಮತ್ತು ಊರಿನ ಪರವಾಗಿ ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಎಂ.ಕೆ.ಭಟ್.ಯಡಳ್ಳಿ





Prathidvani Yellapura