Breaking News

ಹೆಬ್ಬಾರ್ ದೂರದೃಷ್ಟಿ ಪ್ರತಿ ಸರ್ಕಾರಿ ಕಟ್ಟಡಗಳಿಗು ರೂಪ್ ಟಾಪ್ ಕಡ್ಡಾಯ – ಹೆಬ್ಬಾರ್ ಕಾಲೋನಿ ಮನೆಗಳಿಗು ರೂಪ್ ಟಾಪ್ ಅಳವಡಿಕೆ ಕಾರ್ಯ.


ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ಹೆಬ್ಬಾರ್ ನಿರ್ದೇಶನದಂತೆ ಪ್ರತಿಯೊಂದು ಸರ್ಕಾರಿ ಕಚೇರಿ ಕಟ್ಟಡಗಳು G+2 ಮನೆಗಳ ಮೇಲು ಕಡ್ಡಾಯವಾಗಿ ಮೆಟಲ್ ರೂಪ್ ಟಾಪ್ ಅಳವಡಿಸಲೆ ಬೇಕೆಂದು ನಿರ್ದೇಶನ ನೀಡಿದಾಗಿನಿಂದ ಯಲ್ಲಾಪುರ ತಾಲೂಕಿನಾದ್ಯಂತ  ಯಾವುದೆ ಇಲಾಖೆಗಳ ಕಟ್ಟಡಗಳು ಅಥವ ಹೆಬ್ಬಾರ್ ಕಾಲೋನಿಯಲ್ಲಿ ನಿರ್ಮಾಣವಾಗಿರುವ ವಸತಿ ಸಮುಚ್ಚಯಗಳ ಮೇಲೆ ಸದೃಡವಾದ ರೂಪ್ ಟಾಪ್ ಅಳವಡಿಸಲಾಗುತ್ತಿದೆ.


ಯಲ್ಲಾಪುರ ವಿಶೇಷವಾಗಿ ಮಲೆನಾಡು ಪ್ರದೇಶವಾಗಿರುವುದರಿಂದ ಮಳೆಗಾಲದಲ್ಲಿ ಧಾರಾಕಾರವಾಗಿ ಮಳೆ ಸುರಿಯುವ ಹಿನ್ನೆಲೆಯಲ್ಲಿ ರೂಪ್ ಟಾಪ್ ಇರದಿದ್ದರೆ ಎಂತಹ ಸದೃಡವಾಗಿ ಕಟ್ಟಿದ ಕಟ್ಟಡಗಳು ಸೋರುವ ಪರಿಸ್ಥಿತಿ ಎದುರಿಸಬೇಕಾಗಲಿದೆ. ಇದನ್ನೆಲ್ಲ ಅರಿತ ಶಾಸಕ ಹೆಬ್ಬಾರ್ ಯಾವುದೆ ಸರ್ಕಾರಿ ಕಟ್ಟಡಗಳ ನಿರ್ಮಾಣ ಕಾರ್ಯ ಅಂತ್ಯವಾಗಿ ಉದ್ಘಾಟನೆ ಇಟ್ಟುಕೊಂಡಾಗ ಮೊದಲು ಹೇಳುವ ಕಿವಿಮಾತು. ವ್ಯವಸ್ಥಿತವಾದ ಕಟ್ಟಡ ಮತ್ತು ಸೌಲಭ್ಯ ನೀಡಲಾಗಿದೆ ಸದ್ಬಳಕೆ ಮಾಡಿಕೊಂಡು ಸುಸ್ಥಿತಿಯಲ್ಲಿಡಬೇಕು ಪ್ರಮುಖವಾಗಿ ಬಿಲ್ಡಿಂಗ್ ಗೆ ರೂಪ್ ಟಾಪ್ ಕಂಪಲ್ಸರಿಯಾಗಿ ಹಾಕಲೆಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಅಥವ ಗುತ್ತಿಗೆದಾರನಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡುತ್ತಿದ್ದರು.


ಶಾಸಕ ಶಿವರಾಮ ಹೆಬ್ಬಾರ್ ಅವರ ದೂರದೃಷ್ಟಿ ಚಿಂತನೆ ಫಲ
ನೀಡಿದೆ .ಸರ್ಕಾರಿ ಕಟ್ಟಡಗಳು ಬಹುತೇಕ ರೂಪ್ ಟಾಪ್ ಅಳವಡಿಸಕೊಂಡಿದ್ದು ಎಲ್ಲಾ ಕಟ್ಟಡಗಳು ಸುಸ್ಥಿತಿಯಲ್ಲಿವೆ. ತಾಲೂಕು ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ಆಡಳಿತ ಸೌಧ, ಪೊಲೀಸ್ ಠಾಣೆ, ಕಾರ್ಮಿಕ ಭವನ, ಸಮಾಜ ಕಲ್ಯಾಣ ಇಲಾಖೆ ಇನ್ನೂ ಅನೇಕ ಕಟ್ಟಡಗಳು ಸದೃಡವಾಗಿರಲು ರೂಪ್ ಟಾಪ್ ಅಳವಡಿಕೆಯೆ ಪ್ರಮುಖ ಕಾರಣವಾಗಿದೆ. ಸದ್ಯ ಬೃಹಧಾಕಾರವಾಗಿ ನಿರ್ಮಾಣಗೊಂಡಿರುವ ಹೆಬ್ಬಾರ್ ಕಾಲೋನಿ ಪ್ರತಿ 12 ಮನೆಗಳ ಸಮುಚ್ಚಯದ ಮೇಲೆ ರೂಪ್ ಟಾಪ್ ಅಳವಡಿಸಲಾಗುತ್ತಿದೆ. ಜನ ನಾಯಕರಿಗೆ ಇರಬೇಕಾದ ದೂರ ದೃಷ್ಟಿ ಇದಲ್ಲವೆ..

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ..

ಪ್ರತಿಧ್ವನಿ ಯಲ್ಲಾಪುರ: ಭಾರತದ ಸಂವಿಧಾನ ಶಿಲ್ಪಿ,ಸಾಮಾಜಿಕ ನ್ಯಾಯದ ಹರಿಕಾರರು,ಶೋಷಿತರ ದ್ವನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಭಾರತೀಯ ಜನತಾ ಪಾರ್ಟಿ …

Leave a Reply

Your email address will not be published. Required fields are marked *