Breaking News

ಅನಧಿಕೃತವಾಗಿ ವೈಟ್ ಬೋರ್ಡ್ ವಾಹನದಲ್ಲಿ ಪ್ಯಾಸೆಂಜರ್ ಬಾಡಿಗೆ ಸಾಗಾಟ ; ಠಾಣೆಗೆ ದೂರು.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಕಳೆದೆರಡು ದಿನಗಳ ಹಿಂದೆ ಟ್ಯಾಕ್ಸಿ ಚಾಲಕ ಮಾಲಕ ಸಂಘದ ಅಡಿಯಲ್ಲಿ ಯಲ್ಲಾಪುರ ದಲ್ಲಿ ವೈಟ್ ಬೋರ್ಡ್ ಸ್ವಂತ ಬಳಕೆ ವಾಹನದಲ್ಲಿ ಪ್ಯಾಸೆಂಜರ್ ಬಾಡಿಗೆ ಹೊಡೆಯುತ್ತಿದ್ದ ಕುರಿತು ಯೆಲ್ಲೋ ಬೋರ್ಡ್ ಹೊಂದಿರುವ ಗ್ರಾಮದೇವಿ ಮತ್ತು ಚೌಡೇಶ್ವರಿ ಟ್ಯಾಕ್ಸಿ ಚಾಲಕ ಮಾಲಕರು ತಮಗಾಗುತ್ತಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿ ಎಂದು ತಹಸೀಲ್ದಾರರ ಬಳಿ ಮನವಿ ಸಲ್ಲಿಸಿದ್ದರು.


ಮನವಿ ಸಲ್ಲಿಸಿ ಕೆಲವೇ ದಿನಗಳಲ್ಲಿ ಮತ್ತೆ ಅದೇ ಸಮಸ್ಯೆ ಟ್ಯಾಕ್ಸಿ ಚಾಲಕರನ್ನು ಕಾಡಿದ್ದು ವೈಟ್ ಬೋರ್ಡ್ ಹೊಂದಿರುವ ಸ್ವಂತ ಬಳಕೆಯ ವಾಹನದಲ್ಲಿ ಬಾಡಿಗೆ ಹೊಡೆಯುತ್ತಿರುವುದು ಕಂಡುಬರುತ್ತಿದ್ದು ನ್ಯಾಯವಾಗಿ ಸರ್ಕಾರಕ್ಕೆ ತೆರಿಗೆ ಭರಣ ಮಾಡಿ ವಾಹನದ ಮೇಲಿನ ಸಾಲ ತೀರಿಸಲು ಹಗಲು ರಾತ್ರಿ ದುಡಿವ ಯೆಲ್ಲೊ ಬೋರ್ಡ್ ಚಾಲಕರ ಪರಿಸ್ಥಿತಿ ಗಂಭೀರವಾಗಿದೆ.
ಬುಧವಾರ ಯಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರೆಲ್ಲಾ ಸೇರಿ ಅನಧಿಕೃತವಾಗಿ ಪ್ಯಾಸೆಂಜರ್ ಬಾಡಿಗೆ ಮಾಡುತ್ತಿದ್ದ ವೈಟ್ ಬೋರ್ಡ್ ವಾಹನವನ್ನು ಠಾಣೆಗೆ ಚಾಲಕನ ಸಹಿತ ತಂದು ಪೊಲೀಸರ ಗಮನಕ್ಕೆ ತಂದರು.


ಸಂಘದ ಪ್ರಮುಖ ಸಂದೀಪ್ ಮಾತನಾಡಿ ಬಾಡಿಗೆ ವಾಹನ ನಡೆಸಿ ಜೀವನ ಸಾಗಿಸುತ್ತಿರುವ ಚಾಲಕರೆಲ್ಲರು ಬಡತನದಲ್ಲಿ ಬದುಕು ಸಾಗಿಸುತ್ತಿದ್ದು ಸರ್ಕಾರಕ್ಕೆ ನ್ಯಾಯವಾದ ತೆರಿಗೆ ಭರಿಸಿ ಬಾಡಿಗೆ ಮಾಡುತ್ತಿದ್ದೇವೆ ಆದರೆ ಕೆಲವು ವೈಟ್ ಬೋರ್ಡ್ ವಾಹನಗಳು ಅನದಿಕೃತವಾಗಿ ಪ್ಯಾಸೆಂಜರ್ ಬಾಡಿಗೆ ಮಾಡುತ್ತಿದ್ದು ಇದರಿಂದ ಇದೇ ನಂಬಿ ಬದುಕುವ ನಮ್ಮ ಜೀವನ ದುಸ್ತರವಾಗಿದೆ. ಅಲ್ಲದೆ ಇಂತಹ ವಾಹನದಲ್ಲಿ ಮಿತಿಮೀರಿ ಜನರನ್ನು ತುಂಬಿ ಸಾಗಿಸುವುದಲ್ಲದೆ ಅಕಸ್ಮಾತ್ ಅಪಘಾತವೇನಾದರು ಆದರೆ ವಿಮೆಯು ಸಹ ಸಿಗುವುದಿಲ್ಲ ಆದ್ದರಿಂದ ನಮ್ಮ ಜೀವನದ ಮಾನವೀಯ ದೃಷ್ಟಿಯಿಂದ ಮತ್ತು ಕಾನೂನಿನ ದೃಷ್ಟಿಯಿಂದ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕೇವಲ ಯೆಲ್ಲೋ ಬೋರ್ಡ್ ವಾಹನಗಳಿಗಷ್ಟೆ ಬಾಡಿಗೆ ನಡೆಸಲು ಅನುವು ಮಾಡಬೇಕಿದೆ ಎಂದರು.


ಯಲ್ಲಾಪುರ ಠಾಣೆಗೆ ವೈಟ್ ಬೋರ್ಡ್ ಹೊಂದಿದ್ದು ಪ್ಯಾಸೆಂಜರ್ ಬಾಡಿಗೆ ಮಾಡುತ್ತಿದ್ದ ಚಾಲಕನನ್ನು ವಾಹನ ಸಮೇತ ಹಿಡಿದು ತಂದು ಅಧಿಕೃತ ಬಾಡಿಗೆ ವಾಹನಗಳ ಚಾಲಕರು ಒಪ್ಪಿಸಿದ್ದಾರೆ. ಪೊಲೀಸರು ಮುಂದೆ ಯಾವ ಕ್ರಮ ಕೈಗೊಳ್ಳುವರೊ ಕಾದು ನೋಡಬೇಕಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *