
ಯಲ್ಲಾಪುರದ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…

ಪ್ರತಿಧ್ವನಿ,ಯಲ್ಲಾಪುರ : ಎಲ್ಲಾ ಇಲಾಖೆಗಳು ತಮಗೆ ನೀಡಿರುವ ಜವಾಬ್ದಾರಿಯನ್ನು ಬದ್ದತೆಯಿಂದ ನೆರವೇರಿಸಬೇಕಿದೆ ಮತ್ತು ಈ ಯಶಸ್ಸಿಗೆ ಇತರೆ ಇಲಾಖೆಗಳೊಂದಿಗೆ ಉತ್ತಮ ಬಾಂಧವ್ಯ ದೊಂದಿಗೆ ಮುಂದುವರೆಯಬೇಕಿದೆ.ಶಾಸಕರ ಮೌಖಿಕ ಆದೇಶದಂತೆ ನರೇಗಾದಡಿಯಲ್ಲಿ ಇಲಾಖೆಗಳು ಹೆಚ್ಚಿನ ಕೆಲಸವನ್ನು ಮಾಡಿಸಬೇಕಿದೆ ಇದರಿಂದ ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚಿನ ಸವಲತ್ತು ದೊರಕಿದಂತಾಗಲಿದೆ ಎಂದು ತಾಲೂಕು ಪಂಚಾಯತ ಆಡಳಿತಾಧಿಕಾರಿ ನಟರಾಜ್ ಟಿ.ಎಚ್ ಹೇಳಿದರು.
ಅವರು ಪಟ್ಟಣದ ತಾ.ಪಂ ಆವಾರದ ಸಾಮರ್ಥ್ಯ ಸೌಧದಲ್ಲಿ ನಡೆದ 2023-24 ನೇ ಸಾಲಿನ ಮೊದಲ ಮಾಸಿಕ ಕೆ.ಡಿ.ಪಿ ಮತ್ತು ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಆರಂಭದಲ್ಲಿ 2023-24 ನೇ ಸಾಲಿನ ವಿವಿಧ ಲೆಕ್ಕ ಶೀರ್ಷಿಕೆಯಡಿ ಲಿಂಕ್ ಡಾಕ್ಯುಮೆಂಟ್ ಪ್ರಕಾರ ಒಟ್ಟೂ 56,83,44,೦೦೦ ರೂ.ಗಳ ಬಜೆಟ್ಟನ್ನು ಮಂಡಿಸಲಾಯಿತು. ಶಿಕ್ಷಣ ಇಲಾಖೆ (4698.55 ರು), ಆರೋಗ್ಯ ಇಲಾಖೆ (16.93ರೂ), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (೪೮೯.೮೧ ರೂ.), ಸಮಾಜ ಕಲ್ಯಾಣ ಇಲಾಖೆ (71.86 ರೂ.), ಬಿ.ಸಿ.ಎಂ ಇಲಾಖೆ (11.48 ರೂ.), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ/ ಪೌಷ್ಠಿಕ ಆಹಾರ (85.73 ರೂ.), ಪಶುಸಂಗೋಪನಾ ಇಲಾಖೆ (56.45 ರೂ.), ಕೃಷಿ ಇಲಾಖೆ (10.72ರೂ.) ಹಾಗೂ ತಾಲೂಕಾ ಪಂಚಾಯತ್ (241.93 ರೂ.) ಸೇರಿದಂತೆ ವಿವಿಧ ಇಲಾಖೆಗಳ ವೇತನ ಮತ್ತು ವೇತನೇತ್ತರ ಬಾಬ್ತುಗಳಿಗಾಗಿ ಮಂಡಿಸಲಾದ ಬಜೆಟ್ ಬಳಸಲಾಗುವುದೆಂದು ತಾ.ಪಂ ಸಹಾಯಕ ಲೆಕ್ಕಾಧಿಕಾರಿ ಮೋಹನ ವಿವರಿಸಿದರು.
ಅಲ್ಲದೇ ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರಗಳ ಮಂಡನೆಯೂ ನಡೆಯಿತು. ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಮಾತನಾಡಿ, ತಾ.ಪಂ ಆಧೀನದ ವಿವಿಧ ಇಲಾಖೆಗಳಿಂದ ಫಲಾನುಭವಿಗಳ ಆಯ್ಕೆಯ ಬೇಡಿಕೆ ಬಂದನಂತರವೇ ಅವುಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು.

ತಾಲೂಕಿನಲ್ಲಿ ಯಾವುದೇ ಅನಾರೋಗ್ಯ ಪ್ರಕರಣಗಳೂ ಸಧ್ಯಕ್ಕಿಲ್ಲ. ಹುಣಶೆಟ್ಟಿಕೊಪ್ಪ ಮತ್ತು ವಜ್ರಳ್ಳಿ, ಕಳಚೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕುಡಿಯುವ ನೀರಿನ ಕೊರತೆಯಾಗಿದೆ ಎಂದು ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್ಟ ಮಾಹಿತಿ ನೀಡಿದರು.
ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ.ಸುಬ್ರಾಯ ಭಟ್ಟ ಮಾಹಿತಿ ನೀಡಿ, ತಾಲೂಕಿನಲ್ಲಿ ಈ ವರೆಗೆ ಯಾವುದೇ ರೋಗರುಜಿನಗಳ ಪ್ರಕರಣಗಳೂ ಕಂಡುಬAದಿಲ್ಲ. ಪಶುಪಾಲಕರ ಅನುಕೂಲಕ್ಕೆಂದು ಸ್ಥಾಪಿಸಲಾದ ಪಾಲಿ ಕ್ಲಿನಿಕ್ ಶೀಘ್ರವೇ ಆರಂಭಗೊಳ್ಳಲಿದೆ. ಮಂಚೀಕೇರಿ, ಉಮ್ಮಚಗಿ ಭಾಗದಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರಿಲ್ಲದೇ ಆಸ್ಪತ್ರೆ ಮುಚ್ಚುವ ಸ್ಥಿತಿ ಬರಲಿದೆ. ತಾಲೂಕಿನಲ್ಲಿ ಒಂದು ಕಾಲದಲ್ಲಿ 15_೦೦೦ಲೀ ಹಾಲು ಉತ್ಪಾದನೆಯಾಗುತ್ತಿತ್ತು. ಇದೀಗ 6 ರಿಂದ 7,೦೦೦ಲೀಗೆ ಕುಸಿದಿದೆ. ಇದಕ್ಕೆ ಮೇವಿನ ಕೊರತೆಯೂ ಒಂದು ಕಾರಣ ಎಂದರು.
ತೋಟಗಾರಿಕಾ ಇಲಾಖೆಯ ಸತೀಶ ಹೆಗಡೆ, ಮಳೆಗಾಲವೇ ಇರದೇ ಅಧಿಕ ಉಷ್ಠತೆ ರೈತರನ್ನು ಕಂಗೆಡಿಸಿದ್ದು, ಅಡಿಕೆ ಬೆಳೆಗೆ ಅಪಾರ ತೊಂದರೆ ಆಗಿದೆ ಎಂದರು.
ಕೃಷಿ ಇಲಾಖೆಯ ನಾಗರಾಜ ನಾಯ್ಕ ಮಾಹಿತಿ ನೀಡಿ, ಜೂನ್ ಮೊದಲ ವಾರದಲ್ಲಿಯೂ ಮಳೆ ಕಾಣದೇ ರೈತರು ಹತಾಶರಾಗಿದ್ದು, ತಾಲೂಕಿನ ವಿವಿಧೆಡೆಗಳಲ್ಲಿ ಬಿತ್ತನೆ ಕಾರ್ಯ ಆರಂಭವಾಗಿಲ್ಲ. ರೈತರು ಹತ್ತಿ ಬೆಳೆಯ ಒಲವನ್ನು ಬದಿಗಿರಿಸಿ, ಜೋಳದ ಕುರಿತಾಗಿ ಪ್ರೀತಿ ತೋರಿದ್ದಾರೆ. ತಾಲೂಕಿನಲ್ಲಿ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ದಾಸ್ತಾನು ಸಾಕಷ್ಟಿದೆ ಎಂದರು.

ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿನಾಯಕ ಪೇಟ್ಕರ್ ಮಾತನಾಡಿ, ನೂತನವಾಗಿ ಜಾರಿಗೊಂಡಿರುವ ಸರ್ಕಾರದ `ಗೃಹಜ್ಯೋತಿ’ ಯೋಜನೆಯಡಿ ಪ್ರತಿ ಮನೆಗೆ ವಿವಿಧ ಶರತ್ತು ಹಾಗೂ ನಿಭಂದನೆಗಳಿಗನುಸಾರ 200 ಯುನಿಟ್ ವಿದ್ಯುತ್ತನ್ನು ಪಡೆದುಕೊಳ್ಳುವ ವಿಧಾನವನ್ನು ವಿವರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ತಮ್ಮ ಇಲಾಖೆಯ ಕುರಿತಾಗಿ ವಿವರಿಸಿ ಮೊಟ್ಟೆಗದ್ದೆ, ಬಾಗಿನಕಟ್ಟಾ ಹಾಗೂ ಬರಗದ್ದೆ ಶಾಲೆಗಳು ಮಕ್ಕಳ ಕೊರತೆಯಿಂದಾಗಿ ಸ್ಥಗಿತಗೊಳ್ಳುವ ಸಂಭವ ಕಂಡುಬರುತ್ತಿದೆ ಎಂದರು.
ಲೋಕೋಪಯೋಗಿ ಇಲಾಖೆಯ ವಿ.ಎಂ.ಭಟ್ಟ, ಅರಣ್ಯ ಇಲಾಖೆಯ ಸಂಜಯಕುಮಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಫೀಕಾ ಹಳ್ಳುರು, ಜಿ.ಪಂ ಅಭಿಯಂತರ ಅಶೋಕ ಭಂಟ, ವಾ.ಕ.ರ.ಸಾ ಸಂಸ್ಥೆಯ ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೆಕರ್, ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರತಿನಿಧಿಗಳು ಉಪಸ್ಥಿತರಿದ್ದು, ತಮ್ಮ ಇಲಾಖೆಯ ವರದಿಯನ್ನು ವಿವರಿಸಿದರು.
Prathidvani Yellapura