Breaking News

ಸಂಭ್ರಮ, ಸರಳತೆಗೆ ಸಾಕ್ಷಿಯಾದ ಶಾಸಕ ಹೆಬ್ಬಾರ್ ಜನ್ಮದಿನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಶಾಸಕ ಶಿವರಾಮ ಹೆಬ್ಬಾರ್ ಅವರ ಹುಟ್ಟುಹಬ್ಬ ಅಭಿಮಾನಿ ಕಾರ್ಯಕರ್ತರಲ್ಲಿ ಸಂಭ್ರಮಕ್ಕೆಡೆ ಮಾಡಿತ್ತು. ಮುಂಜಾನೆಯಿಂದಲೇ ಹೆಬ್ಬಾರ್ ಸ್ವಗೃಹದ ಮುಂದೆ ನೆಚ್ಚಿನ ನಾಯಕನನ್ನು ಕಂಡು ಶುಭ ಹಾರೈಸಲು ಅಭಿಮಾನಿಗಳು, ಕಾರ್ಯಕರ್ತರ ದಂಡು ಕಾತರದಿಂದ ಕಾಯುತ್ತಿತ್ತು. ಪ್ರತಿದಿನದಂತೆ ದೇವರ ಪೂಜೆ ನೆರವೇರಿಸಿ ಹೆಬ್ಬಾರ್ ಮನೆಯಿಂದ ಹೊರಗಡಿಯಿಡುತ್ತಲೇ ಅಭಿಮಾನಿಗಳು, ಕಾರ್ಯಕರ್ತರು ಹೂಗುಚ್ಛ ನೀಡಿ , ಸಿಹಿ ತಿನಿಸಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು.


ಹೆಬ್ಬಾರ್ ಆಪ್ತರು, ಹಿರಿಯರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಹೂಗುಚ್ಛ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಕಾರ್ಯಕರ್ತರು ಮತ್ತು ಅಭಿಮಾನಿಗಳು ಬಲು ಆಸೆಯಿಂದ ತಂದ ಕೇಕುಗಳನ್ನು ಕತ್ತರಿಸಿ ಅವರಿಗೂ ತಿನಿಸಿ ತಾವೂ ತಿಂದು ಸರಳತೆಯೊಂದಿಗೆ ಯಾರಿಗೂ ಬೇಸರ ಮೂಡಿಸದೇ ಹೆಬ್ಬಾರ್ ಹುಟ್ಟುಹಬ್ಬ ಆಚರಿಸಿಕೊಂಡರು.


ಹುಟ್ಟುಹಬ್ಬದ ನಿಮಿತ್ತ ಹೆಬ್ಬಾರ್ ಅಭಿಮಾನಿ ಬಳಗ, ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು-ಹಣ್ಣು ಹಂಚಿದರು. ನಂತರ ಪಟ್ಟಣದ ಬಾಳಗಿಮನೆಯಲ್ಲಿರುವ ಶ್ರೀ ರಾಘವೇಂದ್ರ ಹಿರಿಯ ನಾಗರೀಕರು ಮತ್ತು ಬುದ್ದಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಯಲ್ಲಿ ಹೊದಿಕೆ ಮತ್ತು ಆಹಾರ ಸಾಮಗ್ರಿಗಳನ್ನು ವಿತರಿಸಿ ಹೆಬ್ಬಾರ್ ಹುಟ್ಟುಹಬ್ಬವನ್ನು ಸಾರ್ಥಕವಾಗಿಸಿದರು.


ಈ ಸಂದರ್ಭದಲ್ಲಿ ಪುತ್ರ ವಿವೇಕ್ ಹೆಬ್ಬಾರ್, ಬಿಜೆಪಿ ಮಂಡ¯ ಉಪಾಧ್ಯಕ್ಷ ಶಿರೀಶ್ ಪ್ರಭು, ಖಜಾಂಚಿ ಮುರಳೀ ಹೆಗಡೆ, ಪ.ಪಂ ಸದಸ್ಯ ಅಮಿತ್ ಅಂಗಡಿ, ವಿನೋದ ತಳೇಕರ , ಗಿರೀಶ್ ಹೆಗಡೆ, ಗಣೆಶ ಹೆಗಡೆ ಪಣತಗೇರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಸಿಲಿನ ಝಳಕ್ಕೆ ತಂಪೆರೆವ ಸ್ವರ್ಗ  ಯಲ್ಲಾಪುರದ “ಸಾತೊಡ್ಡಿ ಜಲಪಾತ” ಪ್ರವಾಸಿಗರ ಕೈ ಬೀಸಿ ಕರೆಯುತ್ತಿದೆ.

ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ಒಂದೆಡೆ ಸಾಗರ ಮತ್ತೊಂದೆಡೆ ಜಲಪಾತಗಳ ಆಗರ  ಹಚ್ಚಹಸಿರಿನ ಮಡಿಲು ಉತ್ತರ ಕನ್ನಡ …

Leave a Reply

Your email address will not be published. Required fields are marked *