Breaking News

ಯಲ್ಲಾಪುರದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಆರೋಗ್ಯ ಪ್ರಗತಿ ಪರಿಶೀಲನ ಸಭೆ.

ಪ್ರತಿಧ್ವನಿ ಯಲ್ಲಾಪುರ : ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರೂ ಕಾಯ,ವಾಚ,ಮನಸಾ ಪರಿಶುದ್ದರಾಗಿ ಆತ್ಮ ಒಪ್ಪುವಂತೆ ಸೇವೆ ಸಲ್ಲಿಸ ಬೇಕಿದೆ, ಸರ್ಕಾರ ಕಾಲಕಾಲಕ್ಕೆ ಆರೋಗ್ಯ ವಿಚಾರದಲ್ಲಿ ಇಲಾಖೆಯ ಮೂಲಕ ಹಮ್ಮಿಕೊಳ್ಳುವ ಜನಜಾಗೃತಿ ಮತ್ತು ಜನೋಪಯೋಗಿ ಆರೋಗ್ಯ ಕಾರ್ಯಕ್ರಮಗಳನ್ನು ಕ್ರಿಯಾಶೀಲವಾಗಿ ಅನುಷ್ಟಾನಕ್ಕೆ ತರಬೇಕಿದ್ದು ಎಲ್ಲರು ಸಂಘಟಿತರಾಗಿ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಉಪನಿರ್ದೇಶಕರು ರೇಡಿಯೋಲಜಿ ಸೇಫ್ಟಿ ಕಾರ್ಯಕ್ರಮ ಮತ್ತು ಶಿರಸಿ ವಿಭಾಗ ನೋಡಲ್ ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆ ಡಾ.ರಾಜಕುಮಾರ ಹೇಳಿದರು.

ಅವರು ಸೆ,18 ರಂದು ಯಲ್ಲಾಪುರದ ತಾಲೂಕ ಪಂಚಾಯತ್ ಸಭಾ ಭವನದಲ್ಲಿ ಹಮ್ಮಿಕೊಂಡ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕುಗಳ ರಾಷ್ಟ್ರೀಯ ಅರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಯಲ್ಲಿ ಡಾ. ಸಂಜಯ್ ದೊಡ್ಮನಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಉಪಸ್ಥಿತರಿದ್ದರು, ಉತ್ತರಕನ್ನಡ, ಜಿಲ್ಲೆಯ ವಿವಿಧ ಜಿಲ್ಲಾ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು ಮತ್ತು ಜಿಲ್ಲಾ ಮೇಲ್ವಿಚಾರಕರು, ಎಲ್ಲಾ ತಾಲೂಕ ಅರೋಗ್ಯ ಅಧಿಕಾರಿಗಳು, ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು, ತಾಲೂಕ ಮಟ್ಟದ ಮೇಲ್ವಿಚಾರಕರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಿರಿಯ ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿಗಳು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಸೇರಿ ಒಟ್ಟು 140 ಜನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿ ಪ್ರಗತಿ ಪರಿಶೀಲನಾ ಸಭೆಯನ್ನು ಯಶಶ್ವಿಗೊಳಿಸಿದರು.

ಸಭೆಯ ನಂತರ ಯಲ್ಲಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಹಿರಿಯ ಅಧಿಕಾರಿ ಡಾ.ರಾಜಕುಮಾರ್ ಆಸ್ಪತ್ರೆ ವಾತಾವರಣ, ಶುಚಿತ್ವ,ಸಿಬ್ಬಂದಿಗಳ ಶಿಸ್ತು ಮತ್ತು ವೈದ್ಯರ ಸಾರ್ವಜನಿಕರೊಂದಿಗಿನ ಒಡನಾಟ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.  ರಾಜ್ಯದಲ್ಲೆ ಅತ್ಯಂತ ಸ್ವಚ್ಚತೆ ಹೊಂದಿರುವ ಆಸ್ಪತ್ರೆಗಳ ಸಾಲಿಗೆ ಯಲ್ಲಾಪುರ  ಆಸ್ಪತ್ರಯು ಸೇರುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಸ್ರೀ ರೋಗ ತಜ್ಞರು ಮತ್ತು ಅನಸ್ತೇಶಿಯ ತಜ್ಞರ ಕೊರತೆಯ ಕುರಿತು ಆಸ್ಪತ್ರೆ ವ್ಯದ್ಯಾಧಿಕಾರಿ ಡಾ,ನರೇಂದ್ರ ಪವಾರ್ ಅಧಿಕಾರಿಗಳ ಗಮನಕ್ಕೆ ತಂದರು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರವಾಗಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಅರ್. ಸಿ. ಎಚ್ ಅಧಿಕಾರಿಗಳಾದ ಡಾ.ನಟರಾಜ ಕೆ. ಸ್ವಾಗತಿಸಿದರು ಹಾಗೂ ಯಲ್ಲಾಪುರ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ನರೇಂದ್ರ ಪವಾರ್ ವಂದಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವಿದ್ಯಾದಾನ ಮತ್ತು ನೇತ್ರದಾನ ಮಾಡಿದ ನಿವೃತ್ತ ಶಿಕ್ಷಕಿ ಭಾಗೀರಥಿ ಜನಾರ್ಧನ ಹೆಗಡೆ ನಿಧನ

ಪ್ರತಿಧ್ವನಿ ಯಲ್ಲಾಪುರ :  ನಿವೃತ್ತ ಶಿಕ್ಷಕಿ, ಶಿಕ್ಷಣಾಭಿಮಾನಿ ಹಾಗೂ ಸಮಾಜಮುಖಿ ವ್ಯಕ್ತಿತ್ವದ ತಾಲೂಕಿನ ಮಂಚಿಕೇರೆ ಬಳಿಯ ಕುಂಬ್ರಿಗುಡ್ಡೆಯ ಭಾಗೀರಥಿ ಜನಾರ್ದನ …

Leave a Reply

Your email address will not be published. Required fields are marked *