
ಪ್ರತಿಧ್ವನಿ ಯಲ್ಲಾಪುರ : ದಿನಾಂಕ 29, ಮಂಗಳವಾರ ಅಂಗಾರಕ ಸಂಕಷ್ಟಿ ಚತುರ್ಥಿಯ ಪಾವನ ದಿನದಂದು ಶ್ರೀ ಘಂಟೆ ಗಣಪತಿ ದೇವಸ್ಥಾನ ಸಮಿತಿ ಚಂದಗುಳಿ ಮತ್ತು ಜ್ಞಾನತರಂಗಿಣಿ ಫೌಂಡೇಶನ್, ಯಲ್ಲಾಪುರ ಹಾಗು ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆ, ಹುಬ್ಬಳ್ಳಿ ಇವರ ಸಹಯೋಗದಲ್ಲಿ ಪರಮ ಪವಿತ್ರ ಘಂಟೆ ಗಣಪನ ಸಾನಿದ್ಯದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಭಿರ ಆಯೋಜಿಸಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಲು ಸಂಘಟಕರು ಮನವಿ ಮಾಡಿದ್ದಾರೆ.

ಕಣ್ಣಿನ ಆರೋಗ್ಯದ ಮಹತ್ವವನ್ನು ಅರಿತು, ಗ್ರಾಮೀಣ ಭಾಗದ ಜನರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಅಗತ್ಯ ವೈದ್ಯಕೀಯ ಮಾರ್ಗದರ್ಶನ ಒದಗಿಸುವ ಒಂದು ಸಾರ್ಥಕ ಪ್ರಯತ್ನ ಇದಾಗಿದೆ. ಆರೋಗ್ಯ ಸೇವೆಯ ಪಯಣ ಸಮಾಜದೊಂದಿಗೆ ಸದಾ ಮುಂದುವರೆಯುತ್ತದೆ.












Prathidvani Yellapura