Breaking News

ಯಲ್ಲಾಪುರ ವಿಭಾಗದ ಅರಣ್ಯ ಇಲಾಖೆ ದಾಳಿ – ಬೆಂಗಾಲ್ ಮಾನಿಟರ್ ಲಿಝಾಡ್೯ ಎಂಬ ಉಡಗಳ ಬೇಟೆಯಾಡಿದ ತಂದೆ ಮತ್ತು ಮಗನ ಬಂಧನ

ಪ್ರತಿಧ್ವನಿ ಯಲ್ಲಾಪುರ :  ಯಲ್ಲಾಪುರ ವಲಯ ವ್ಯಾಪ್ತಿಯ ಹಳಬೈಲ್ ಶಾಖಾ ವ್ಯಾಪ್ತಿ ,ಕಣ್ಣಿಗೇರಿ ಗ್ರಾಮ ಹಳಿಯಾಳ ಕ್ರಾಸ್ ಅರಣ್ಯದಲ್ಲಿ ಇರುವ ಮನೆಯೊಂದರಲ್ಲಿ  ಯಾವುದೊ ವನ್ಯಪ್ರಾಣಿ ಭೇಟೆ ಆಡಿ ದಾಸ್ತಾನಿಟ್ಟ ಬಗ್ಗೆ ಬಂದ ಖಚಿತ ಮಾಹಿತಿ ಆದರಿಸಿ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ದಾಳಿಮಾಡಿ  Bengal monitor lizzard(ವೈಜ್ಞಾನಿಕ ಹೆಸರು -Varanus bengalensis) ಜಾತಿಯ ಮೃತಪಟ್ಟ ಎರಡು ಗಂಡು ಉಡಗಳು ಹಾಗೂ ಭೇಟೆಗೆ ಬಳಸಿದ ಎರಡು ಕತ್ತಿಗಳು  ಒಂದು ಕೊಡಲಿಯನ್ನು ಇಲಾಖಾ ವಶಕ್ಕೆಪಡೆಯಲಾಗಿದೆ.


ಆರೋಪಿತರಾದ ಹಳಿಯಾಳ ಕ್ರಾಸ್,ಕಣ್ಣಿಗೇರಿ ಗ್ರಾಮ ನಿವಾಸಿ ಇನಾಸ್ ಬಸ್ಥ್ಯಾಂವ್ ಸಿದ್ದಿ ವಯಸ್ಸು :55ವರ್ಷ ಹಾಗು ಈ ತನ ಮಗನಾದ ಪ್ರಕಾಶ್ ಇನಾಸ್ ಸಿದ್ದಿ,ವಯಸ್ಸು :27ವರ್ಷ ಎಂಬುವರನ್ನು  ಬಂಧಿಸಿ ಇಲಾಖಾ ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆ -1972 ಸೆಕ್ಷನ್ 2(16),9,39(a) ಹಾಗೂ 50 ರ ಉಲ್ಲಂಘನೆ ಆದ ಕುರಿತು ಮೊಕದ್ದಮೆ ದಾಖಲಿಸಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಬ್ದುಲ್ ಅಜೀಜ್ ಶೇಖ್  ಮಾರ್ಗದರ್ಶನದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹಿಮವತಿ ಭಟ್ಟ ರವರ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್ ಎಚ್ ನಾಯ್ಕರವರ ಮುಂದಾಳತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಸುಭಾಷ್ ಗಾಂವ್ಕರ್, ಶ್ರೀನಿವಾಸ್ ನಾಯ್ಕ, ಶ್ರೀಧರ್ ಸಜ್ಜನ್, ಶರಣಬಸು ದೇವರ,ಪ್ರಭಾಕರ ಬಗಲಿ,ಮಂಜುನಾಥ್ ಗರ್ಭಗುಡಿ, ದರ್ಶನ್ ವಿ ಎಸ್ ಹಾಗೂ ಗಸ್ತು ಅರಣ್ಯ ಪಾಲಕರಾದ ಶ್ರೀ ಸತೀಶ ಕುಂಬಾರ, ಬಸವರಡ್ಡಿ ರಡ್ಡೇರ, ರಾಮು ಕೊಕ್ಕರೆ, ಶಾನವಾಜ ಮುಲ್ತಾನಿ, ಗೌಡಪ್ಪ ಗೌಡ ಸುಳ್ಳದ, ರಮೇಶ್ ಬಡಿಗೇರ್, ಲಕ್ಷ್ಮಣ ಪಮ್ಮಾರ್, ಪ್ರಶಾಂತ್ ತಳವಾರ್, ವಾಹನ ಚಾಲಕರಾದ ಮಂಜುನಾಥ, ಪ್ರಶಾಂತ ಹಾಗೂ ಮುಂತಾದವರು ಭಾಗಿಯಾಗಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *