
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ರಾತ್ರಿ ವೇಳೆಯಲ್ಲಿ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದು ಅದಕ್ಕೆ ಪ್ರಮುಖ ಕಾರಣ ರಸ್ತೆ ಪಕ್ಕದಲ್ಲೆ ನಿಲ್ಲಸುವ ಬೃಹತ್ ಗಾತ್ರದ ವಾಹನಗಳಾಗಿವೆ.

ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬೃಹತ್ ಗಾತ್ರದ ವಾಹನಗಳು ನಿಲ್ಲಿಸುವುದರಿಂದ ಸಂಚರಿಸುವ ವಾಹನಗಳಿಗೆ ಅಪಾಯ ತಪ್ಪಿದ್ದಲ್ಲ. ಗಾಡಿಗಳ ಲೈಟ್ ಎಷ್ಟೆ ಪ್ರಖರವಾದ ಬೆಳಕು ಹೊಂದಿದ್ದರು ಎದುರಿನಿಂದ ಬರುವ ವಾಹನದ ಬೆಳಕು ಕಣ್ಣಿಗೆ ಬೀಳುತ್ತಲೆ ಎದುರಿನ ದೃಶ್ಯ ಮಂದವಾಗಿ ರಸ್ತೆ ಪಕ್ಕದಲ್ಲೆ ನಿಲ್ಲಿಸಿರುವ ವಾಹನಕ್ಕೆ ಡಿಕ್ಕಿ ಸಂಭವಿಸಬಹುದಾಗಿದ್ದು ಹೀಗೊಂದು ಘಟನೆ ಸಂಭವಿಸುವುದನ್ನು ಕಾಯದೆ ಮುನ್ನೆಚ್ಚರಿಕೆಯಿಂದ ರಸ್ತೆ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸದಂತೆ ಎಚ್ಚರಿಸಿ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡಬೇಕಿದೆ ಇಲ್ಲವಾದಲ್ಲಿ ದುರ್ಘಟನೆ ನಡೆದ ನಂತರ ಪಶ್ಚಾತ್ತಾಪ ಪಟ್ಟು ಪ್ರಯೋಜನವಿಲ್ಲ.

ವಿಶೇಷವಾಗಿ ಯಲ್ಲಾಪುರದ ಟಿ.ಎಂ.ಎಸ್ ಪೆಟ್ರೋಲ್ ಬಂಕ್ ಸಮೀಪ, ಹುಬ್ಬಳ್ಳಿ ರಸ್ತೆ ಕಾಮಾಕ್ಷಿ ಬಂಕ್ ಸಮೀಪ, ಸಂಕಲ್ಪ ಹೊಟೆಲ್ ಮುಂದಿನ ರಸ್ತೆಯಲ್ಲಿ, ಆದಿತ್ಯ ಬಾರ್ ಎದುರು,ಕೃಷಿ ಇಲಾಖೆ ಎದುರು, ಹೋಲಿ ರೋಜರಿ ಚಚ್೯ ಮುಂಭಾಗ ಹಾಗು ಇನ್ನೂ ಇತರೆಡೆಗಳಲ್ಲಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವುದರಿಂದ ಬಹುತೇಕ ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ.

ಹಾಗೆಂದು ಬೃಹತ್ ಗಾತ್ರದ ವಾಹನಗಳು ಸುಮ್ಮನೆ ನಿಲ್ಲಿಸಿದ್ದಾರೆ ಎಂದು ಅರ್ಥವಲ್ಲ, ರಿಪೇರಿಗಾಗಿ, ರೇಶನ್ ಕೊಳ್ಳಲು, ಊಟ ಉಪಹಾರ,ಟೀ,ಕಾಫಿ ಇನ್ನಿತರ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲೆಂದೇ ನಿಲ್ಲಿಸಿರುತ್ತಾರೆ. ಆದರೆ ಇಂತಹ ಕೆಲಸಗಳಿಗೆಂದೇ ಪೊಲೀಸ್ ಇಲಾಖೆ ಸ್ಥಳ ಗುರುತಿಸಿ ಅಲ್ಲಿಯೆ ವಾಹನಗಳನ್ನು ನಿಲ್ಲಿಸುವಂತೆ ಕಟ್ಟುನಿಟ್ಟಾಗಿ ಆಧೆಶಿಸಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.

ಒಮ್ಮೊಮ್ಮೆ ಕರೆಂಟ್ ಹೋದಾಗ ಬಹಳ ಅಪಾಯದ ಸನ್ನಿವೇಶ ಎದುರಾಗುತ್ತದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿರುವ ವಾಹನ ಗೋಚರಿಸದೆ ಏಕಾ ಏಕಿ ಗುದ್ದುವ ಪ್ರಮೆಯ ಬರಲಿದೆ. ಸೋಮವಾರ ಸಣ್ಣದಾಗಿ ಮಳೆ ಸುರಿದು ರಾತ್ರಿ ಕೆಲ ಗಂಟೆಗಳ ಕಾಲ ಕರೆಂಟ್ ಹೋದ ಪರಿಣಾಮ ಯಲ್ಲಾಪುರ ಕಗ್ಗತ್ತಲಾಗಿತ್ತು ಈ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ವಾಹನಗಳು ನಿಂತಿರುವುದು ಗಣೊಚರಿಸುವುದೆ ಇಲ್ಲ ಇಂತಹ ಪರಿಸ್ಥಿತಿಯಲ್ಲಿ ವಾಹನ ಸವಾರರು ಏನು ಮಾಡಬೇಕು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಅವಘಡಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸದಂತೆ ಎಚ್ಚರಿಸಬೇಕಿದೆ ಇಲ್ಲವಾದಲ್ಲಿ ಆಗುವ ಅವಘಡಗಳಿಗೆ ಹೊಣೆ ಯಾರೆಂಬುದನ್ನು ಈಗಲೆ ಸಾರ್ವಜನಿಕರಿಗೆ ಬಹಿರಂಗ ಪಡಿಸಬೇಕಿದೆ.





Prathidvani Yellapura