
ಪ್ರತಿಧ್ವನಿ,ಯಲ್ಲಾಪುರ – ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪಟಾಕಿ ಸದ್ದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪರ ಜಯಘೋಷ ಮುಗಿಲು ಮುಟ್ಟಿತ್ತು.

ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಮಾತನಾಡಿ ರಾಜ್ಯಕ್ಕಿಂದು ಹಬ್ಬದ ವಾತಾವರಣ ಬಡವರ,ಶೋಷಿತರ, ಅಲ್ಪಸಂಖ್ಯಾತರ, ದಲಿತ, ಹಿಂದುಳಿದ,ಮಧ್ಯಮ ವರ್ಗದ ಜನ ನಾಯಕರಾಗಿ ಗುರುತಿಸುವ ಸಿದ್ದರಾಮಯ್ಯ ಅವರು ರಾಜ್ಯದ ಚುಕ್ಕಾಣಿ ಹಿಡಿದದ್ದು ಕರ್ನಾಟಕದ ಭಾಗ್ಯವಾಗಿದೆ.

ಯುವಕರ ಕಣ್ಮಣಿ ಪಕ್ಷವನ್ನು ಸಂಕಷ್ಟದಲ್ಲು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ ಡಿ.ಕೆ ಶಿವಕುಮಾರ್ ಅವರು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಜನಪರ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವುದು ಸಂತಸವಾಗಿದೆ. ಗ್ಯಾರಂಟಿ ಕಾಡ್೯ ಮೂಲಕ ಜನರ ಮನಗೆದ್ದು ಜಯಭೇರಿ ಬಾರಿಸಲಾಗಿದೆ. ಕ್ಷೇತ್ರದಲ್ಲಿ ವಿ.ಎಸ್.ಪಾಟೀಲ್ ಸಹ ಅತ್ಯಂತ ಕಡಿಮೆ ಅಂತರದಲ್ಲಿ ಸೋತಿರುವುದು ಗೆಲುವಿಗೆ ಸಮವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಮತ್ತು ಅನುಭವಿ ಮುತ್ಸದ್ದಿ ಉತ್ತರ ಕನ್ನಡ ಜಿಲ್ಲೆಯ ಹೆಮ್ಮಯ ನಾಯಕ ಆರ್.ವಿ.ದೇಶಪಾಂಡೆ ಅವರಿಗೆ ಕ್ಷೇತ್ರದ ಉಸ್ತುವಾರಿ ಸಚಿವ ಸ್ಥಾನ ಮತ್ತು ಉತ್ತಮ ಖಾತೆಯ ಸಚಿವ ಸ್ಥಾನ ನೀಡಿ ಗೌರವ ತೋರಬೇಕಿದೆ ಎಂದರು.

ನಂತರ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಹಾಗು ಎಂ.ಜಿ.ಭಟ್ ಅವರಿಗೆ ಹೂವಿನ ಹಾರಹಾಕಿ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ಮೂಲಕ ಜಯಘೋಷ ಕೂಗುತ್ತ ಕರೆತಂದು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ನರ್ಮದಾ ನಾಯ್ಕ್, ಸೈಯದ್ ಕೈಸರ್ ಪ್ರಮುಖರಾದ ವಿ.ಎಸ್.ಭಟ್ , ಉಲ್ಲಾಸ ಶಾನಬಾಗ್, ರಾಘು ಭಟ್ , ಪ್ರಶಾಂತ್ ಸಭಾಹಿತ್, ಅನಿಲ್ ನಾಯ್ಕ್ ಇಡಗುಂದಿ, ಸಂತೋಷ್ ನಾಯ್ಕ್, ದಿಲೀಪ್ ರೋಖಡೆ, ಸರಸ್ವತಿ ಗುನಗಾ, ಪೂಜಾ ನೇತ್ರೇಕರ್ ಮುಷರತ್, ಆಯಿಷಾ ಇನ್ನೂ ಮುಂತಾದವರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು..





Prathidvani Yellapura