Breaking News

ಬಡವರ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರವೆ- ಗಾಂವ್ಕರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಬಾಯಲ್ಲಿ ರಾಮಮಂತ್ರ ನಡೆಯಲ್ಲಿ ಬಡವರ ರಕ್ತ ಹೀರುವ ರಾವಣ ತಂತ್ರ ಬಿಜೆಪಿ ಕುತಂತ್ರವಾಗಿದೆ. ಬಡವರ ಪರವಾಗಿ ಧ್ವನಿ ಎತ್ತುವ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ ಗೆಲ್ಲಿಸಿ, ದೇಶ ಉಳಿಸಿ ‘ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಹೇಳಿದರು.
ಅವರು ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಭಾವಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಪ್ರಮುಖ ಎಂ.ಜಿ.ಭಟ್ಟ ನಂದೊಳ್ಳಿ ಇವರ ನೇತ್ರತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದರು.
 ಕಾಂಗ್ರೆಸ್ ಸರ್ಕಾರ ಬಂದರೆ, 10 ಕೆಜಿ. ಅಕ್ಕಿ, 200 ಯುನಿಟ್ ವಿದ್ಯುತ್, ಮಹಿಳೆಯರಿಗೆ 2 ಸಾವಿರ, ನಿರುದ್ಯೋಗಿಗಳಿಗೆ 3 ಸಾವಿರ ರೂ. ಹಾಗೂ ಇನ್ನೂ ಹಲವಾರು ಗ್ಯಾರಂಟಿ ನೀಡಿದ ಯೋಜನೆಗಳ ಮೊತ್ತ ಪ್ರತಿ ಕುಟುಂಬಕ್ಕೆ 3 ಲಕ್ಷ ರೂಪಾಯಿ ಆಗುತ್ತದೆ ಎಂದ ಅವರು 40% ಕಮೀಶನ್ ಸರ್ಕಾರದವರು ರಾತ್ರಿ ಬಂದು ಹಣ ಹಂಚಿ ಆಣೆ ಮಾಡಿಸುತ್ತಾರೆ. ಆಮಿಷಕ್ಕೆ ಬಲಿಯಾಗಬೇಡಿ. ಹಣಕೊಟ್ಟರೆ ತೆಗೆದುಕೊಳ್ಳಿ, ಮತ ಕಾಂಗ್ರೆಸ್ ಗೆ ಹಾಕಿ ಎಂದರು.
  ಕಾಂಗ್ರೆಸ ಮುಖಂಡ ದಿಲೀಪ್ ರೋಖಡೆ ಮಾತನಾಡಿ ‘ ಮೀಸಲಾತಿ ಕಾರಣದಿಂದ ಗ್ರಾಮ ಪಂಚಾಯಿತಿಗೆ ಎಲ್ಲೆಲ್ಲಿಯವರೋ, ಎಲ್ಲೋ ಬಂದು ಚುನಾವಣೆಗೆ ನಿಲ್ಲುತ್ತಾರೆ. ಇವರಿಂದ ಗ್ರಾಮದ ಅಭಿವೃದ್ಧಿ ಹೇಗೆ ಸಾಧ್ಯ. ಆಮಿಷಕ್ಕೆ ಬಲಿಯಾಗಿ ಕೆಲಸ ಮಾಡದವರನ್ನು ಮನೆಗೆ ಕಳಿಸುತ್ತಾರೆ, ಬಣ್ಣದ ಮಾತಿಗೆ ಮರುಳಾಗಿ ಅಂತವರನ್ನು ಆಯ್ಕೆ ಮಾಡುತ್ತೇವೆ. ಈ ಪ್ರಜ್ಞೆ ಮತದಾರರಲ್ಲಿ ಬಂದರೆ ಕೆಲಸಗಾರರನ್ನು ಆಯ್ಕೆ ಮಾಡುತ್ತಾರೆ’ ಎಂದರು.
  ಪ್ರಚಾರ ಸಮಿತಿ ಅಧ್ಯಕ್ಷ ಅನಿಲ ನಾಯ್ಕ, ಉಸ್ತುವಾರಿ ಎಂ.ಜಿ.ಭಟ್ಟ ನಂದೊಳ್ಳಿ ಮಾತನಾಡಿದರು. ಜಿಲ್ಲಾ ಸೇವಾ ದಳದ ಅಧ್ಯಕ್ಷ ಪ್ರಶಾಂತ ಸಭಾಹಿತ ಸ್ವಾಗತಿಸಿ ನಿರೂಪಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಹುಟಕಮನೆ ಗುಡ್ಡ ನೆಲಸಮ ಪ್ರಕರಣ ನ್ಯಾಯಾಲಯಲ್ಲಿರುವಂತೆಯೆ ಮಾರಾಟಕ್ಕೆ ತೆರೆಮರೆಯ ಯತ್ನ.!!

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಸದ್ದುಮಾಡಿ ಬೆಂಗಳೂರಿನ ಭೂ ವ್ಯಾಜ್ಯಗಳ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ ಹುಟಕಮನೆ ಗುಡ್ಡ ನೆಲಸಮ ಅರಣ್ಯನಾಶ …

Leave a Reply

Your email address will not be published. Required fields are marked *