
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಶಕ್ತಿ ಪೀಠ ಯಲ್ಲಾಪುರ ಗ್ರಾಮದೇವಿ ಸಾನಿದ್ಯದಲ್ಲಿ ನವರಾತ್ರಿ ಹಬ್ಬದ ಸಡಗರ ಮನೆಮಾಡಿದ್ದು ಶ್ರದ್ದಾಭಕ್ತಿಯ ಧಾರ್ಮಿಕ ಆಚರಣೆಗಳು ನಿತ್ಯವು ಜರುಗುತ್ತಿದೆ. ವಿಶೇಷವಾಗಿ ಮಂಗಳವಾರ ಅನ್ನ ಸಂತರ್ಪಣಾ ಕಾರ್ಯ ಸಹಸ್ರಾರು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

ಸಾಮಾಜಿಕ ಕಾರ್ಯಕರ್ತ ಮತ್ತು ಅನ್ನ ಸಂತರ್ಪಣಾ ಕಾರ್ಯಕ್ರಮದ ಪ್ರಮುಖ ರುವಾರಿ ಸಂತೋಷ್ ನಾಯ್ಕ್ ನೇತೃತ್ವದ ಲಾರಿ ಚಾಲಕರ ಸಂಘ, ಶ್ರೀ ಗ್ರಾಮದೇವಿ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘ, ಬಸವೇಶ್ವರ ಗೂಡ್ಸ್ ರಿಕ್ಷಾ ಚಾಲಕ ಮಾಲಕರ ಸಂಘ ಹಾಗು ವಿವಿಧ ಕನ್ನಡ ಪರ ಸಂಘಟನೆಗಳು ಮತ್ತು ಹಲವು ದಾನಿಗಳ ಸಹಕಾರದಿಂದ ಯಶಸ್ವಿಯಾಗಿ ಅನ್ನ ಸಂತರ್ಪಣೆ ನಡೆಯುತ್ತಿದೆ.

ದಿನಾಂಕ 16 ರ ಶುಕ್ರವಾರ ಸಹ ರಾಜಸ್ಥಾನಿ ವಿಷ್ಣು ಸಮಾಜದವರ ಸಹಕಾರದಿಂದ ಅನ್ನಸಂತರ್ಪಣೆ ಇದ್ದು ಸಮಸ್ತ ಭಕ್ತಾದಿಗಳು ಅನ್ನವಪ್ರಸಾದ ಸ್ವೀಕರಿಸಿ ಧನ್ಯರಾಗಬೇಕಾಗಿ ತಮ್ಮನ್ನು ಸಂಘಟಕರು ಸ್ವಾಗತಿಸಿದ್ದಾರೆ.

















Prathidvani Yellapura