
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮಂಚಿಕೇರಿಯ ತೂಕದಬೈಲ್ ಬಳಿ ಬೈಕ್ ಸ್ಕಿಡ್ ಆಗಿ ರಸ್ತೆಯ ಪಕ್ಕ ಬಿದ್ದು ಓದ್ದಾಡುತ್ತಿದ್ದ ಮಾರುತಿ ಎಂಬ ಕಲಘಟಗಿ ವ್ಯಕ್ತಿಯೊರ್ವರನ್ನೂ ದೇವರಂತೆ ಸ್ಥಳಕ್ಕಾಗಮಿಸಿ ಚಿಕಿತ್ಸೆ ನೀಡಿ ಮಾನವಿಯತೆ ಮೆರೆದ ಡಾ.ದಿನೇಶ್ ಹೆಗಡೆಗೆ ಅಭಿನಂದನೆಗಳ ಮಹಾಪೂರವೆ ಹರಿದು ಬರುತ್ತಿದೆ.

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನುಆಸ್ಪತ್ರೆಗೆ ಸಾಗಿಸಲು ಸಾರ್ವಜನಿಕರು 108 ಗೆ ಪೊನ್ ಮಾಡಿದರೆ ಡೈವರ್ ಇಲ್ಲಾ ಎಂದು ಉತ್ತರ ಬಂದಿದೆ, ನಂತರ ಸಮೀಪದ ಮಂಚಿಕೇರಿ ಆಸ್ಪತ್ರೆಯ ಅಂಬುಲೆನ್ಸ ಗೆ ಪೊನ್ ಮಾಡಿದರೆ ಸರ್ವಿಸ್ ಗೆ ಹೊಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಸ್ತೆಯ ಮೇಲೆ ಬಿದ್ದು ಓದ್ದಾಡುತ್ತಿದ್ದ ಮಾರುತಿಯನ್ನೂ ಶಿರಸಿಯ ಮಹಾಲಕ್ಷ್ಮಿ ಆಸ್ಪತ್ರೆಯ ಮಕ್ಕಳ ತಜ್ಞರಾದ ದಿನೇಶ್ ಹೆಗಡೆಯವರು ನೊಡಿ ಕಾರ್ ನಿಲ್ಲಿಸಿ ರಸ್ತೆಯಲ್ಲಿಯೆ ಸಲಾಯನ್ ಎರಿಸಿ ಇಂಜೆಕ್ಷನ್ ನೀಡಿ ಚಿಕಿತ್ಸೆ ನೀಡಿ ಮಾನವಿಯತೆ ಮೇರೆದರು.
ನಂತರ ಯಲ್ಲಾಪುರ ದಿಂದ ತಾಲೂಕಾ ಆಸ್ಪತ್ರೆಯಿಂದ ಬಂದ ಅಂಬುಲೆನ್ಸ ನಲ್ಲಿ ಅಪಘಾತ ಗೊಂಡ ವ್ಯಕ್ತಿ ಮಾರುತಿಯನ್ನೂ ಹೆಚ್ವಿನ ಚಿಕಿತ್ಸೆಗಾಗಿ ಕಳುಹಿಸಿ ಕೊಡಲಾಯಿತು.

ಈ ಸಂದರ್ಭದಲ್ಲಿ ನವಿನ ಸಾಗರ ಹಾಗೂ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸತೀಶ ನಾಯ್ಕ ಸ್ಥಳದಲ್ಲಿದ್ದು ಸಹಕರಿಸಿದರು

108 ಆಂಬುಲೆನ್ಸ ಗೆ ಎರಡು ಶಿಪ್ಟಗಳಿಗೆ ಮಾತ್ರ ಚಾಲಕರು ಇದ್ದು 3 ನೆ ಶಿಫ್ಟ್ ಮದ್ಯಾಹ್ನದ ಸಮಯದಲ್ಲಿ ಚಾಲಕರಿಲ್ಲದೆ ಇರುವ ಮಾಹಿತಿ ತಿಳಿದಿದ್ದು ಮೂರನೆ ಚಾಲಕರನ್ನೂ 108 ಸಂಸ್ಥೆ ಯವರು ತಕ್ಷಣ ನೆಮಿಸಬೇಕು.ಸತೀಶ ಎಸ್ ನಾಯ್ಕ, ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಯಲ್ಲಾಪುರ















Prathidvani Yellapura