Breaking News

ಯಲ್ಲಾಪುರ ಪಟ್ಟಣ ವ್ಯಾಪ್ತಿಯ ಅಲಂಕಾರಿಕ ವಿದ್ಯುತ್ ಕಂಬಗಳ ಅಳವಡಿಕೆಯಲ್ಲಿ ಬಾರಿ ಭ್ರಷ್ಟಾಚಾರ – ತನಿಖೆಗೆ ಆಗ್ರಹಿಸಿದರು ಪ್ರಯೋಜನ ಇಲ್ಲ – ಸೋಮೇಶ್ವರ ನಾಯ್ಕ್


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಲಂಕಾರಿಕ ವಿದ್ಯುತ್ ದೀಪದ ಕಂಬಗಳನ್ನು ಅಳವಡಿಸಿದ್ದು ಅವುಗಳಲ್ಲಿ ಬಹಳಷ್ಟು ದೀಪಗಳು ಉರಿಯದೆ ಹಾಳಾಗಿದೆ ಮತ್ತು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಇಲ್ಲದೆ ಜನರ ತೆರಿಗೆ ಹಣ ಪೋಲಾಗಿದೆ ಮತ್ತು ಪೋಲಾಗುತ್ತಿದೆ ಈ ಕುರಿತು ಹಲವು ಬಾರಿ ಪಟ್ಟಣ ಪಂಚಾಯತ್ ಅಧಿಕೃತ ಸಭೆಯಲ್ಲಿ ಧ್ವನಿ ಎತ್ತಿದರು ಪ್ರಯೋಜನವಾಗದೆ ಸಂಬಂಧಿಸಿದ ಅಧಿಕಾರಿಗಳ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು ಪ್ರಯೋಜನವಾಗದಿರುವುದು ಸಹ ವಿಪರ್ಯಾಸವಾಗಿದೆ ಎಂದು ರವೀಂದ್ರ ನಗರ ವಾಡ್೯ನ ಮಾಜಿ ಪಟ್ಟಣ ಪಂಚಾಯತ್ ಸದಸ್ಯ ಸೋಮೇಶ್ವರ ನಾಯ್ಕ್ ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಹಕ್ಕು ಅಡಿಯಲ್ಲಿ ಎರಡು ವರ್ಷಗಳ ಹಿಂದೆ ಮಾಹಿತಿ ಕೊರಿದರು ಮಾಹಿತಿ ನೀಡದೆ ಇರುವುದನ್ನು ಕಂಡರೆ ಇದರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಸಾಭೀತಾಗುತ್ತದೆ ಎನ್ಬುತ್ತಿದ್ದಾರೆ.


ಇದೇ ವಿಚಾರವಾಗಿ ಅಲಂಕಾರಿಕ ವಿದ್ಯುತ್ ಕಂಬಗಳನ್ನು ಅಣುಕು ಶವಯಾತ್ರೆ ಮಾಡುವ ಮೂಲಕ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡಿದರು ಪ್ರಯೋಜನ ಆಗಲಿಲ್ಲ,

ಕುಂಭಕರ್ಣ ನಿದ್ದೆಯಲಿದ್ದವರಂತೆ ವರ್ತಿಸುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿದ್ದೆಗೆಡಿಸಲು ಮತ್ತೊಮ್ಮೆ ಅದೇ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಇದರ ಗಂಭೀರತೆ ಅರಿತು ಸಮಸ್ಯೆ ಬಗೆಹರಿಸುವತ್ತ ಇಲಾಖೆ ಮುಂದಾಗಬೇಕಿದೆ, ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿರುವ ಯಲ್ಲಾಪುರ ಲೋಕೋಪಯೋಗಿ ಇಲಾಖೆ ಸರಿದಾರಿಗೆ ಬಂದು ಜನತೆಗೆ ನಿಜಾಂಶ ತಿಳಿಸಬೇಕಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


ಇಷ್ಟೆಲ್ಲಾ ಸಮಸ್ಯೆಯಲಿದ್ದರು ಪಟ್ಟಣ ಪಂಚಾಯತ್ ಅಧಿಕಾರಿಗಳು ಮಾತ್ರ ನಮ್ಮದೇನು ಪಾತ್ರವೆ ಇಲ್ಲದಂತೆ ವರ್ತಿಸುತ್ತಿರುವುದು ವಿಪರ್ಯಾಸವಾಗಿದೆ.
ಅಲಂಕಾರಿಕ ವಿದ್ಯುತ್ ಕಂಬಗಳನ್ನು ಅಳವಡಿಸುವ ಗುತ್ತಿಗೆ ಪಡೆದ ಗುತ್ತಿಗೆದಾರ ಸಂಪೂರ್ಣ ಕೆಲಸ ಮುಗಿಸಿ ವ್ಯವಸ್ಥೆಯನ್ನು ಪಟ್ಟಣ ಪಂಚಾಯತ್ ಸುಪರ್ಧಿಗೆ ನೀಡಿದ್ದಾನೊ ಇಲ್ಲವೊ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ, ಒಂದುವೇಳೆ ಯಲ್ಲಾಪುರ ಪಟ್ಟಣ ಪಂಚಾಯತ್ ಜವಾಬ್ದಾರಿ ಪಡೆದಿದ್ದರೆ ಗುತ್ತಿಗೆದಾರನ ಕೆಲಸವೆ ಪೂರ್ಣವಾಗದೆ ಬಿಲ್ ಮಂಜೂರು ಮಾಡಿರುವುದು ಸಹ ಕಾನೂನು ಉಲ್ಲಂಘನೆ ಆಗಲಿದೆ.


ಅಲಂಕಾರಿಕ ವಿದ್ಯುತ್ ಕಂಬಳಿಗೆ  ಅಳವಡಿಸಲಾದ ಟೈಮರ್ ಸಹಿತ ಕಳಪೆಯಾಗಿದ್ದು ಹಲವೆಡೆ ಬೆಳಕಿಲ್ಲದೆ ಕಂಬಗಳು ಬರಿದಾಗಿ ನಿಂತಿದೆ ಹಾಗು ಐಬಿ ಬಳಿಯಲ್ಲಿ ಕಂಬಗಳು ಹಾಗೆ ಉಳಿದಿವೆ. ಒಟ್ಟಿನಲ್ಲಿ ಅಲಂಕಾರಿಕ ವಿದ್ಯುತ್ ಕಂಬಗಳನ್ನು ಅಳವಡಿಸಿದ ಯೋಜನೆಯ ಸಂಪೂರ್ಣ ಸತ್ಯಾಸತ್ಯತೆಯನ್ನು ಸಂಬಂಧಿಸಿದ ಇಲಾಖೆಗಳು ಜನತೆಯ ಮುಂದೆ ತೆರೆದಿಡಬೇಕಿದೆ ಎಂಬುದು ಆಗ್ರಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *