




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಚಂದಗುಳಿ ದೇಸಾಯಿ ಮನೆಯ 26 ವರ್ಷದ ಯುವತಿಯೋರ್ವಳು ತಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಹೋಗುವುದಾಗಿ ಹೇಳಿ 2023ರ ಡಿ.12 ರಂದು ಮನೆಯಿಂದ ಹೋದವಳು ಕಂಪನಿಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ , ತನ್ನ ಮನೆಗೂ ಬಾರದೇ ಎಲ್ಲೋ ಕಾಣೆಯಾಗಿದ್ದು ಹುಡುಕಿ ಕೊಡುವಂತೆ ಯುವತಿಯ ತಂದೆ ರಾಮಕೃಷ್ಣ ಸುಬ್ರಾಯ ಭಟ್ಟ ಯಲ್ಲಾಪುರ ಠಾಣೆಯಲ್ಲಿ ದೂರು ಡಿ.27ರಂದು ದಾಖಲಿಸಿದ್ದು ಈವರೆಗೂ ಪತ್ತೆಯಾಗದ ಕಾರಣ ಪತ್ರಿಕಾ ಪ್ರಕಟಣೆ ನೀಡಿ ಪತ್ತೆಗೆ ಸಹಕರಿಸಲು ಕೋರಿದ್ದಾರೆ.

ತೇಜಾ ರಾಮಕೃಷ್ಣ ಭಟ್ಟ (26) ಎಂಬಾಕೆಯೇ ಕಾಣೆಯಾದ ಯುವತಿಯಾಗಿದ್ದು ಸುಮಾರು 5 ಫೂಟ್ 2 ಇಂಚು ಎತ್ತರ, ಗೋದಿ ವರ್ಣ, ದುಂಡು ಮುಖ, ಕಪ್ಪು ಕೂದಲನ್ನು ಹೊಂದಿದ್ದಾಳೆ. ಈಕೆ ಎಂ.ಎ ಕಲಿತಿದ್ದು ಕನ್ನಡ, ಇಂಗ್ಲೀಷ್ ಭಾಷೆಯನ್ನು ಮಾತನಾಡುತ್ತಾಳೆ.
ಈ ರೀತಿಯ ಚಹರೆಯುಳ್ಳ ಯುವತಿ ಎಲ್ಲಾದರೂ ಪತ್ತೆಯಾದಲ್ಲಿ ಯಲ್ಲಾಪುರ ಠಾಣಾ ಪಿ.ಐ ದೂರವಾಣಿ ಸಂಖ್ಯೆ- 9480805257 ಪಿ.ಎಸ್.ಐ ದೂರವಾಣಿ ಸಂಖ್ಯೆ- 9480805273ಗೆ ಕರೆ ಮಾಡಿ ತಿಳಿಸಲು ಕೋರಲಾಗಿದೆ.
Y



Prathidvani Yellapura