Breaking News

ಕನ್ನಡ ಜೀವನ ಹಬ್ಬ – ಸಂಸ್ರ್ಕೃತಿ ಸುಗ್ಗಿ 40 ನೇ ವರ್ಷದ “ಸಂಕಲ್ಪೋತ್ಸವ” ನವೆಂಬರ್1ರಿಂದ 5 ರ ತನಕ ಯಲ್ಲಾಪುರದಲ್ಲಿ ಸಾಂಸ್ಕೃತಿಕ ಸುಗ್ಗಿ.


ಪ್ರತಿಧ್ವನಿ ಯಲ್ಲಾಪುರ : ಸಮಸ್ತ ಕಲಾ ಸಹೃದಯ ಕನ್ನಡಿಗರ ಆಶಿರ್ವಾದ ಮತ್ತು ನಾಡಿನ ಹಿರಿಯರ ಸ್ಥಳೀಯ ಮಾರ್ಗದರ್ಶಕರ ಮತ್ತು ಸಂಕಲ್ಪ ಅಭಿಮಾನಿಗಳ ಸಹಕಾರದಿಂದ ಈ ನೆಲದ ಹೆಮ್ಮೆಯ ಸಾಂಸ್ಕೃತಿಕ ಪರಂಪರೆಯಾದ ” ಸಂಕಲ್ಪ ಉತ್ಸವ ” 40 ನೆ ವರ್ಷದ ಆಚರಣೆಗೆ ದಿನಗಣನೆ ಆರಂಭಿಸಿದ್ದು ಎಂದಿನಂತೆ ಸಹಕರಿಸಿ ಯಶಸ್ವಿಗೊಳಿಸಬೇಕಿದೆ ಎಂದು ಸಂಚಾಲಕ ಪ್ರಸಾದ್ ಹೆಗಡೆ ಹೇಳಿದರು.


ಅವರು ಪಟ್ಟಣದ ಸಂಕಲ್ಪ ಮೌನ ಗ್ರಂಥಾಲಯ ಆವರಣದಲ್ಲಿ ಸಂಕಲ್ಪ ಉತ್ಸವದ ನಿಮಿತ್ತ ಕರೆಯಲಾದ ಸುದ್ದಿ ಗೋಷ್ಟಿಯಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.


ಈ ವರ್ಷ ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ನಾಡು ಕಂಡ ಶ್ರೇಷ್ಠ ನಾಯಕ ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ನಿಮಿತ್ತ ವಿಶೇಷ ಗೋಷ್ಠಿಗಳನ್ನು ಆಯೋಜಿಸಿದ್ದು ನಿತ್ಯವೂ ತಾಯಿ ಭಾರತಾಂಭೆಯ ಆರಾಧಿಸುವ ” ವಂದೇಮಾತರಂ” ಗೀತೆಯಪಠಣ ನಡೆಯಲಿದೆ, ರಾಜಕೀಯ, ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ ಹಾಗು ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಿದ್ದು ಸಮಸ್ತರು ಪಾಲ್ಗೊಳ್ಳಲು ಕೋರುತ್ತೇನೆ ಎಂದರು.


ಸಂಸ್ಥೆ ಅಧ್ಯಕ್ಷ ಪ್ರಮೋದ್ ಹೆಗಡೆ.
ಸಾಕಷ್ಟು ಸಮಯದಿಂದ ನಾಡಿನ ಶ್ರೇಷ್ಠ ಉತ್ಸವವಾಗಿ ಕಾಪಾಡಿಕೊಂಡು ಬಂದ ತಾಯಿ ಭುವನೇಶ್ವರಿ ಆರಾಧನೆಯ ” ಸಂಕಲ್ಪ ಉತ್ಸವ ” ಭವಿಷ್ಯದ ದೃಷ್ಟಿಯಿಂದ ಸಂಘಟನೆಯ ಇತರ ಪ್ರಮುಖರ ಹೊಣೆಗಾರಿಕೆಗೆ ವಹಿಸಿ ಸಲಹೆ ಸೂಚನೆ ನೀಡುತ್ತ ನಾನು ಕೂಡ ಸಂಕಲ್ಪ ಉತ್ಸವದ ಪ್ರೇಕ್ಷಕನಾಗಿ ಮುಂದುವರೆಯುತ್ತೇನೆ. ಸದಾ ಹರಸಿದಂತೆ ದೇವದುರ್ಲಭ ಪ್ರೇಕ್ಷಕ ಪ್ರೋತ್ಸಹಕರು ಸಹಕರಿಸಿ ಇನ್ನೂ ನೂರುಕಾಲ ಸಂಕಲ್ಪ ಉತ್ಸವ ನಿರಂತರತೆಗೆ ಸಾಕ್ಷಿಯಾಗಬೇಕೆಂದು ಕೋರುತ್ತೇನೆ.


ಹಿರಿಯ ಸದಸ್ಯ ಸಿ.ಜಿ.ಹೆಗಡೆ.
ಸಂಕಲ್ಪ ಉತ್ಸವ ಜಿಲ್ಲೆಯ ಹೆಮ್ಮೆಯ ಉತ್ಸವವಾಗಿ ಪ್ರತಿ ವರ್ಷ ನಡೆದು ಬರುತ್ತಿದ್ದು ಪ್ರಸಕ್ತ ವರ್ಷ ನಾಡಿನ ಮಾಜಿ ಮುಖ್ಯ ಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಯವರ ಜನ್ಮ ಶತಮಾನೋತ್ಸವವನ್ನು ಅವಿಸ್ಮರಣೀಯವಾಗಿಸಲು ಪ್ರತಿ ನಿತ್ಯ ಅವರ ಕುರಿತ ವಿಶೇಷ ವಿಚಾರಗಳ ಗೋಷ್ಟಿ ಆಯೋಜಿಸಿದ್ದು ಇದು ಅವರಿಗೆ ಅರ್ಪಿಸುವ ಗೌರವ ಸಮರ್ಪಣೆಯಾಗಿದೆ ಇಂತಹ ಕಾರ್ಯಕ್ರಮದಲ್ಲಿ ಸಹೃದಯ ನಾಗರಿಕರು ಪಾಲ್ಗೊಂಡು ಯಶಸ್ವಿಯಾಗಿಸಬೇಕಿದೆ. ಎಂದಿನಂತೆ ಸಂಕಲ್ಪ ಉತ್ಸವದ ಪ್ರತಿ ನಿತ್ಯದ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಉತ್ಸವದ ಯಶಸ್ಸಿಗೆ ಕಾರಣೀಕರ್ತರಾಗಬೇಕಿದೆ.

ಪರಮಪೂಜ್ಯರ ಉಪಸ್ಥಿತಿ, ಆಶಿರ್ವಚನ

ಪರಮಪೂಜ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾನಿಗಳು, ಸೋಂದಾ ಸ್ವರ್ಣವಲ್ಲಿಯವರ ಅಮೃತ ಹಸ್ತದಿಂದ ಆರಂಭಗೊಳ್ಳುವ ಸಂಕಲ್ಪ ಉತ್ಸವ.
ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಮದ್ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಶ್ರೀ ಸಂಸ್ಥಾನ ನೆಲೆ ಮಾವು ಮಠ,
ವಿದ್ಯಾ ವಾಚಸ್ಪತಿ ಶ್ರೀ ವಿಶ್ವ ಸಂತೋಷ ಭಾರತಿ ಶ್ರೀಪಾದರು.
ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಸಚ್ಚಿದಾನಂದ ಭಾರತಿ ಮಹಾ ಸ್ವಾಮಿಗಳು ಎಡನೀರು ಮಠ
ಸಮಾರೋಪದಲ್ಲಿ ಶ್ರೀ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಮದ್ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳು ಶ್ರೀ ಸಂಸ್ಥಾನ ರಾಮಚಂದ್ರಾಪುರ ಮಠ
ಇವರುಗಳ ದಿವ್ಯ ಉಪಸ್ಥಿತಿ ಆಶಿರ್ವಚನದೊಂದಿಗೆ ಉತ್ಸವದ ಪರಿಸರ ಧಾರ್ಮಿಕತೆಯ ಆವರಣವಾಗಿ ಹೊರಹೊಮ್ಮಲಿದೆ.


ಸಂಕಲ್ಪ ಉತ್ಸವದ ವಿಶೇಷತೆಯ ಯಕ್ಷಗಾನ ಹಬ್ಬ


ನವಂಬರ್ 1 – ಭಕ್ತ ಪ್ರಹ್ಲಾದ ಯಕ್ಷಗಾನ
ನವೆಂಬರ್ 2 – ಕಂಸ ದಿಗ್ವಿಜಯ – ಕಂಸ ವಧೆ ಯಕ್ಷಗಾನ
ನವೆಂಬರ್ 3 – ವೀರ ಬರ್ಭಿರಿಕ – ಚಕ್ರಚಂಡಿಕೆ ಯಕ್ಷಗಾನ
ನವೆಂಬರ್ 4 – ನಾಗ ನಂದನೆ ಯಕ್ಷಗಾನ
ನವೆಂಬರ್ 5 –  ಭಾರ್ಗವ ವಿಜಯ ಪೌರಾಣಿಕ ನಾಟಕ

ಸಂಕಲ್ಪ ಪ್ರಶಸ್ತಿ ಪ್ರಧಾನ. ಸಾಧಕರಿಗೆ


ಗಣಪತಿ ಭಟ್ಟ, ನ್ಯಾಯವಾದಿ, ಬೆಂಗಳೂರು
ಬಲರಾಮ ಗುಡಿಗಾರ,ಕರಕುಶಲಕರ್ಮಿ
ಸಂಜೀವ ಹೊಸ್ಕೇರಿ, ಶಿಕ್ಷಣ ಕ್ಷೇತ್ರ
ಗಣಪತಿ ಮಾನಿಗದ್ದೆ, ಸಾಮಾಜಿಕ ಕ್ಷೇತ್ರ
ದೀಪಿಕಾ ತಾಮ್ಸೆ, ಆರೋಗ್ಯ ಕ್ಷೇತ್ರ
ಜಿ.ವಿ.ಹೆಗಡೆ ಕುಂದರಗಿ, ಸಾಮಾಜಿಕ ಕ್ಷೇತ್ರ
ರಾಮಚಂದ್ರ ಭಟ್ ಕುಂಕುಮನೆ,ಯಕ್ಷಗಾನ ಸಂಘಟನೆ
ಕೆ.ಎಸ್.ಭಟ್,ಪತ್ರಿಕೋದ್ಯಮ
ನಾಗರಾಜ್ ಮದ್ಗುಣಿ, ಪತ್ರಿಕೋದ್ಯಮ
ಶ್ರೀಧರ ಅಣಲಗಾರ, ಪತ್ರಿಕೋದ್ಯಮ
ಸಿ.ಜಿ.ಹೆಗಡೆ,ಯಕ್ಷಗಾನ ಸಂಘಟನೆ
ಜಿ.ಎಸ್.ಭಟ್ಟ,ಕಳಚೆ,ಸಹಕಾರಿ ಕ್ಷೇತ್ರ
ವಾಣಿ ರಮೇಶ್ ಹೆಗಡೆ,ಸಂಗೀತ ಕ್ಷೇತ್ರ
ಡಾ.ಜ್ಞಾನಪ್ರಕಾಶ್, ವೈದ್ಯಕೀಯ ಕ್ಷೇತ್ರ
ಸುಮಂತ ಬಳಗುಂಡಿ, ವೈದ್ಯಕೀಯ ಕ್ಷೇತ್ರ
ವಿಶಾಲ್ ಪಂಡಿತ್, ವೈದ್ಯಕೀಯ ಕ್ಷೇತ್ರ
ತನ್ಮಯ ಹೆಗಡೆ, ವೈದ್ಯಕೀಯ ಕ್ಷೇತ್ರ

ಸ್ವದೇಶಿ ಗೋ ಸಂಕಲ್ಪ ಉತ್ಸವ ಉಪನ್ಯಾಸ


ನವೆಂಬರ್ 1 – ಗೋ ಪಾಲನೆ, ಗೋ ಚಿಕಿತ್ಸೆ, ಗೋ ವೈಭವ ಉಪನ್ಯಾಸ – ಜಯ ಶಂಕರ್,ಉತ್ತರ ಪ್ರಾಂತ ಗೋ ಸಂರಕ್ಷಣೆ ಆಯಾಮ ಪ್ರಮುಖರು.
ನವೆಂಬರ್ 2 – ಗೋ ಜೈವಿಕ ಕೃಷಿ, ಗೋ ಸಂಪನ್ಮೂಲಗಳ ಸದ್ಬಳಕೆ ಉಪನ್ಯಾಸ – ರವಿ ಹಡಪದ್,ಗದಗ,ಕೃಷಿ ಆಯಾಮ ಪ್ರಮುಖರು
ನವೆಂಬರ್ 3 – ಗವ್ಯೋತ್ಪನ್ನ ಮಾರಾಟ,ಸದ್ಬಳಕೆ ಉಪನ್ಯಾಸ – ದತ್ತಾತ್ರೇಯ ಭಟ್,ಹುಬ್ಬಳ್ಳಿ, ಉತ್ತರ ಪ್ರಾಂತ ಸಂಯೋಜಕರು
ನವೆಂಬರ್ 4 – ಗವ್ಯೋತ್ಪನ್ನ – ತಯಾರಿಕ ಪ್ರಶಿಕ್ಷಣ ಉಪನ್ಯಾಸ – ಯಲ್ಲಪ್ಪ ಮಡಿವಾಳ.

ಸಂಕಲ್ಪ ಸಾಂಸ್ಕೃತಿಕ ಸುಗ್ಗಿ


ಐದು ದಿನಗಳ ಕನ್ನಡ ತಾಯಿ ಭುವನೇಶ್ವರಿ ಆರಾಧನೆ ಕನ್ನಡ ಸಂಸ್ಕೃತಿ,ಪರಂಪರೆ,ಆಚರಣೆಗಳ ವೈಭವ ಸಂಗೀತ, ನಾಟಕ,ಭಜನೆ, ತಾಳಮದ್ದಳೆ, ಯಕ್ಷಗಾನ ಪದ್ಯ, ಭಗವದ್ಗೀತಾ ಪಠಣ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳು ಸಂಕಲ್ಪ ಉತ್ಸವದಲ್ಲಿ ಮೇಳೈಸಲಿದೆ, ವಿಶೇಷ ತಿಂಡಿ ತಿನಿಸುಗಳ ಮಳಿಗೆಗಳು, ಗೃಹ ಉತ್ಪನ್ನ ವಸ್ತುಗಳ ಮಾರಾಟ, ಕೃಷಿ ಉಪಕರಣಗಳ ಪ್ರಾತ್ಯಕ್ಷಿಕೆ, ಖಾಧಿ ಬಟ್ಟೆಗಳ ಮಾರಾಟ, ಪುಸ್ತಕ ಮಳಿಗೆಗಳು ಇನ್ನಿತರ ವಿಶೇಷ ಆಕರ್ಷಣೆ ಉತ್ಸವದಲ್ಲಿ ಇರಲಿದೆ

ತಾಲೂಕಿನ ಹಾಗು ಸುತ್ತಮುತ್ತಲಿನ ಸಾರ್ವಜನಿಕರು ಸಹಸ್ರಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿಸ ಬೇಕೆಂದು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಸಂಕಲ್ಪ ಉತ್ಸವ ಸಮಿತಿ ಉಪಾಧ್ಯಕ್ಷ ಪ್ರಶಾಂತ ಹೆಗಡೆ ಹಾಗೂ ಪ್ರಮುಖರಾದ ಬಾಬು ಬಾಂದೇಕರ್, ಶಿವು, ಪ್ರದೀಪ್ ಯಲ್ಲಾಪುರಕರ್, ರವಿ ದೇವಾಡಿಗ, ನರಸಿಂಹ ತಾಳಗುಪ್ಪ,  ಶ್ರೀಪಾದ ಭಟ್, ಗೋಪಣ್ಣ ತಾರಿಮಕ್ಕಿ ಉಪಸ್ಥಿತರಿದ್ದು ಕರಪತ್ರ ಬುಡುಗಡೆಯಲ್ಲಿ ಪಾಲ್ಗೊಂಡು ಪ್ರೇಕ್ಷಕರನ್ನು ಸ್ವಾಗತಿಸಿದರು.


.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *