Breaking News

ಯಲ್ಲಾಪುರ ಎಲ್ಎಸ್ಎಂಪಿ ಆವರಣದಲ್ಲಿ ಅಡಿಕೆಗೆ ಪರ್ಯಾಯ ಬೆಳೆಯಾಗಿ ಕಾಫಿ ಬೆಳೆಗೆ ಉತ್ತೇಜನ ಈ ಕುರಿತು ನಡೆದ ಕಾರ್ಯಗಾರ.


ಪ್ರತಿಧ್ವನಿ ಯಲ್ಲಾಪುರ : ಅಡಿಕೆಯನ್ನು ನಮ್ಮ ಭಾಗದ ರೈತರು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆಯನ್ನು ಬೆಳೆಯುತ್ತಾ ಬರಲಾಗಿದೆ, ನಮ್ಮ ಜೀವನದ ಎಲ್ಲಾ ವ್ಯವಸ್ಥೆ ಅವಶ್ಯಕತೆಗಳಿಗು ಅಡಿಕೆ ಬೆಳೆಯನ್ನೆ ಅವಲಂಬಿಸಿಕೊಂಡು ಬಂದಿದ್ದೇವೆ. ಎಲೆ ಚುಕ್ಕೆ ರೋಗದ ಭಾದೆಯಿಂದ ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆಯ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ ಆದರೆ ಹೊಸ ತೋಟಗಳನ್ನು ಕೂರಿಸುವುದನ್ನು ಬಿಟ್ಟಿಲ್ಲ ಇದು ಅಪಾಯದ ಮುನ್ಸೂಚನೆ ನೀಡುವಂತಿದೆ, ಈ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆಯಕಡೆಗೆ ರೈತರು ಮುಖಮಾಡಬೇಕಿದೆ ಅದಕ್ಕೆ ಕಾಫಿ ಬೆಳೆಯುವತ್ತ ಮುಂದಾಗಬೇಕಿದೆ ಎಂದು ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ್ ಕವಡಿಕೆರೆ ಹೇಳಿದರು.


ಅವರು ಪಟ್ಟಣದ ಎಲ್.ಎಸ್.ಎಂ.ಪಿ ಸಭಾಭವನದಲ್ಲಿ ಹಮ್ಮಿಕೊಂಡ ಅಡಿಕೆ ಬೆಳೆಗೆ ಪರ್ಯಾಯವಾಗಿ ಕಾಫಿ ಬೆಳೆ ಕಾರ್ಯಾಗಾರದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಈ ದಿಸೆಯಲ್ಲಿ ಶಿರಸಿ ಭಾಗದ ರೈತರು ಒಂದು ಹೆಜ್ಜೆ ಮುಂದೆ ಹೋಗಿ ಕಾಫಿ ಬೆಳೆಯುವ ಪ್ರಯತ್ನದಲಿದ್ದಾರೆ ಅದಕ್ಕಾಗಿ ನಮ್ಮ ಎಲ್‌ಎಸ್ಎಂಪಿ ಸಂಸ್ಥೆ ಅಡಿಯಲ್ಲಿ ಒಂದು ದಿನದ ಕಾರ್ಯಗಾರದ ಆಯೋಜನೆ ಮಾಡಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದರು.


ತೋಟಗಾರಿಕ ಇಲಾಖೆ ಉಪ ನಿರ್ದೇಶಕ ಸತೀಶ್ ಹೆಗಡೆ ಪ್ರಸ್ತುತ ಅಡಿಕೆ ಬೆಳೆಯ ಸನ್ನಿವೇಶ,ಪರ್ಯಾಯ ಬೆಳೆಯ ಅನಿವಾರ್ಯತೆ, ಭವಿಷ್ಯದ ದಿನಗಳಲ್ಲಿ ಪರ್ಯಾಯ ಬೆಳೆಯ ಮಹತ್ವ ಕುರಿತು ಎಳೆಎಳೆಯಾಗಿ ವಿವರಿಸಿದರು.


ಉಪಸ್ಥಿತಿ : ಸಂಸ್ಥೆ ಉಪಾಧ್ಯಕ್ಷರಾದ ಟಿ.ಆರ್.ಹೆಗಡೆ, ಹಿರಿಯ ನಿರ್ದೇಶಕ ತಿಮ್ಮಣ್ಣ ಭಟ್ಟ ಘಟ್ಟಿ, ಮಹಾಬಲೇಶ್ವರ ಭಟ್ಟ್, ಗೋಪಣ್ಣ ಸೇರಿದಂತೆ ಪ್ರಮುಖರು ಸಂಸ್ಥೆ ಸಿಬ್ಬಂದಿಗಳು ಹಾಗು ರೈತರು ಉಪಸ್ಥಿತರಿದ್ದರು.

ಭವಿಷ್ಯದ ದೃಷ್ಟಿಯಿಂದ ಅಡಿಕೆ ಬೆಳೆವ ರೈತರಿಗೆ ಇಂತಹ ಕಾರ್ಯಗಾರ ಉಪಯುಕ್ತವಾಗಲಿದೆ. ಶಿಭಿರದಲ್ಲಿ ಪಾಲ್ಗೊಂಡು ಸಾಕಷ್ಟು ಮಾಹಿತಿ ಪಡೆದುಕೊಂಡೆನು, ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಡು ಉಪಯುಕ್ತವಾದ ಕಾರ್ಯಗಾರಗಳನ್ನು ಸಂಸ್ಥೆ ನಡೆಸಿದರೆ ರೈತರಿಗೆ ಅನುಕೂಲವಾಗಲಿದೆ. ಲಕ್ಷ್ಮೀ ನಾರಾಯಣ್ ತೋಟ್ಮನೆ, ಅಡಿಕೆ ಬೆಳೆಗಾರರು

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *