Breaking News

ಸುಡು ಬಿಸಿಲ ಬೇಗೆ ತೀರಿಸುವುದಿನ್ನು ಬಲು ದೂರ ಗಗನಕ್ಕೇರಿದ ನಿಂಬೆಹಣ್ಣಿನ ದರ


ಪ್ರತಿಧ್ವನಿ,ಯಲ್ಲಾಪುರ : ಬೇಸಿಗೆಯ ಜಳ ಹೆಚ್ಚಾದಂತೆಲ್ಲಾ ಎಳನೀರು, ಕಲ್ಲಂಗಡಿ, ಕಬ್ಬಿನಹಾಲು, ಮಜ್ಜಿಗೆ, ಎಳ್ಳುನೀರು, ಶರಬತ್ತು ಹಾಗೂ ಇನ್ನಿತರೆ ದಾಹ ನೀಗುವ ಪಾನೀಯಗಳ ಬೇಡಿಕೆ ಹೆಚ್ಚಿದ್ದು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ವಿಶೇಷವಾಗಿ ಈ ಸಂದರ್ಭದಲ್ಲಿ ನಿಂಬೆ ಹಣ್ಣಿನ ದರ ದಿಡೀರನೆ ಹೆಚ್ಚಾಗಿದ್ದು ಒಂದು ನಿಂಬೆಹಣ್ಣಿಗೆ ೧೦ರೂ ವರೆಗೂ ಏರಿಕೆ ಕಂಡಿದೆ.


ಬೇಸಿಗೆಯ ಸಮಯದಲ್ಲಿ ಪೆಪ್ಸಿ, ಕೋಕೋಕೋಲಾದಂತಹ ಪಾನೀಯಗಳಿಗೆ ಮೊರೆ ಹೋಗುವ ಮಂದಿ ಕಡಿಮೆಯಾಗುತ್ತಿದ್ದು ದೇಸೀ ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ. ಉಳ್ಳವರು ಬೆಲೆ ಹೆಚ್ಚಾದರೂ ಎಳನೀರನ್ನೇ ಹೆಚ್ಚಾಗಿ ಬಳಸುತ್ತಿದ್ದು ಕಡಿಮೆ ದರದಲ್ಲಿ ನಿಂಬೂಪಾನಿ, ಶರಬತ್ತು , ನಿಂಬೂಸೋಡಾ ಬಳಸುತ್ತಿದ್ದ ಜನರಿಗೆ ನಿಂಬೆಹಣ್ಣಿನ ದರ ಏರಿಕೆಯಾಗಿರುವುದರಿಂದ ನಿಂಬೆಹಣ್ಣಿನಿಂದ ತಯಾರಾಗುವ ಎಲ್ಲಾ ಪಾನೀಯಗಳ ಬೆಲೆಯ ಬಿಸಿಯೂ ತಟ್ಟಿದೆ.


ಅಂತೂ ತನಗೊಂದು ಸುವರ್ಣಕಾಲ ಬಂದಿದೆ ಎಂದು ರೂಪಾಯಿಗೊಂದರಂತೆ ಬಿಕರಿಯಾಗುತ್ತಿದ್ದ ಬಂಗಾರದ ಬಣ್ಣದ ನಿಂಬೆಹಣ್ಣು 1೦ ರೂ ಗೆ ಏರಿಕೆಯಾಗಿದ್ದು ಬಂಗಾರದ ಬೆಲೆಯೂ ಬಂದಂತಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಹುಟಕಮನೆ ಗುಡ್ಡ ನೆಲಸಮ ಪ್ರಕರಣ ನ್ಯಾಯಾಲಯಲ್ಲಿರುವಂತೆಯೆ ಮಾರಾಟಕ್ಕೆ ತೆರೆಮರೆಯ ಯತ್ನ.!!

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಸದ್ದುಮಾಡಿ ಬೆಂಗಳೂರಿನ ಭೂ ವ್ಯಾಜ್ಯಗಳ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ ಹುಟಕಮನೆ ಗುಡ್ಡ ನೆಲಸಮ ಅರಣ್ಯನಾಶ …

Leave a Reply

Your email address will not be published. Required fields are marked *