Breaking News

Uncategorized

TMS ಆಡಳಿತಾಧಿಕಾರಿ ಸರ್ವಾಧಿಕಾರಿ ಯಂತೆ ವರ್ತಿಸುತ್ತಿರುವುದು ವಿಷಾದನಿಯ – ಎನ್.ಕೆ ಭಟ್ ಅಗ್ಗಾಶಿಕುಂಬ್ರಿ.

ಪ್ರತಿಧ್ವನಿಯಲ್ಲಾಪುರ : ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ಆಡಳಿತ ಅಧಿಕಾರಿ ತನ್ನ ಅಧಿಕಾರ ವ್ಯಾಪ್ತಿ ಮೀರಿ ಕಾರ್ಯ ನಿರ್ವಹಿಸುತ್ತಿರುವುದು ವಿಷಾದನಿಯ. ಎರಡು ಸಾವಿರ ಸದಸ್ಯರ ಹಕ್ಕನ್ನು ಮೊಟಕು ಮಾಡಿ, ಹಣವಂತರಿಗೆ ಅನುಕೂಲ ಕಲ್ಪಿಸುವ ಕಾರ್ಯ ಮಾಡುತ್ತಿರುವುದು ರೈತರ ದುರಂತವಾಗಿದೆ.. ಇವರನ್ನು ತಕ್ಷಣದಿಂದ ತೆಗೆದುಹಾಕಬೇಕು ಎಂದು ಟಿ.ಎಂ.ಎಸ್.ನ ಮಾಜಿ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಆಗ್ರಹಿಸಿದ್ದಾರೆ. ಅವರು, ಮಂಗಳವಾರ ಪಟ್ಟಣದ ಶ್ರೀ ಶಕ್ತಿಗಣಪತಿ ದೇವಸ್ಥಾನದ ಆವಾರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ಕುರಿತು ಬುಧವಾರ ಸಹಕಾರಿ …

Read More »

ಯಲ್ಲಾಪುರದ ಕಾಳಮ್ಮ ನಗರದಲ್ಲಿ ಇಂದು ರಾತ್ರಿ ಮನೋಜ್ ಎಂಟಟ್ರೈನರ್ ಮ್ಯಾನ್ಯುಯಲ್ ಆರ್ಕೆಸ್ಟ್ರಾ..🎤🎶🎻💃

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರದ ಜೂನಿಯರ್ ಎಸ್ಪಿಬಿ ಎಂದೇ ಖ್ಯಾತಿ ಪಡೆದ ಯಾರೆನೀನು ರೋಜಾ ಹೂವೆ ಖ್ಯಾತಿಯ“ಮನೋಜ್ ಪಾಟೀಲ್” ತಂಡದಿಂದ ಇಂದು ಕಾಳಮ್ಮ ನಗರದ ತಾಲೂಕು ಕ್ರೀಡಾಂಗಣದಲ್ಲಿ ಕಾಳಮ್ಮ ದೇವಿ ದೇವಸ್ಥಾನದ ವರ್ಧಂತಿ ಉತ್ಸವದ ನಿಮಿತ್ತ ದೇವಸ್ಥಾನ ಮತ್ತು ತ್ರಶೂಲ್ ಬಳಗದ ಆಯೋಜನೆಯಲ್ಲಿ ಸುಮಧುರ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮವು ಸಂಜೆ 7 ರಿಂದ ಪ್ರಾರಂಭವಾಗಲಿದ್ದು ಸಂಗೀತ ಪ್ರೇಮಿಗಳಿಗೊಂದು ಗಂಧರ್ವ ಗಾನಗಳ ರಸದೌತಣ ಸಿಗಲಿದೆ.ಹಲವು ಕಲಾವಿದರನ್ನೊಳಗೊಂಡ ತಂಡದಲ್ಲಿ ಟಿ.ವಿ ರಿಯಾಲಿಟಿ …

Read More »

ಜೋಡುಕೆರೆ ಮಾರುತಿದೇವಸ್ಥಾನದ ಪರಿಸರ ಪ್ರವಾಸಿಗರಿಗೊಂದು ಸುಂದರ ವಿಶ್ರಾಂತ ತಾಣ.

ಕೇಬಲ್ ನಾಗೇಶ್,ಯಲ್ಲಾಪುರಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಜೋಡುಕೆರೆ ಎಂದರೆಬಹೆದ್ದಾರಿಯಲ್ಲಿ ಸಂಚರಿಸುವವರಿಗೆ ಸ್ವಾಗತ ಕೋರುವ ಮತ್ತು ಊರಿಂದ ಹೋರ ಹೋಗುವವರಿಗೆ ಶುಭ ವಂದನೆ ಹೇಳುವ ಸುಂದರ ಸ್ಥಳವಾಗಿದೆ. ಅದರಲ್ಲೂ ವಿಶೇಷವಾಗಿ ಜೋಡುಕೆರೆ ಮಾರುತಿ ದೇವಾಲಯದ ಪರಿಸರ ಯಾತ್ರಿಕರಿಗೆ, ಪ್ರವಾಸಿಗರಿಗೆ ಕೆಲಕಾಲ ವಿಶ್ರಾಂತಿ ಪಡೆಯಲು, ಊಟ ಉಪಹಾರ ಸೇವಿಸಲು ಅನುಕೂಲಕರವಾಗಿದ್ದು ಇತ್ತೀಚೆಗೆ ಹಲವು ತಂಡ ಇಲ್ಲಿನ ಪರಿಸರದಲ್ಲಿ ಬೀಡು ಬಿಟ್ಟು ಪ್ರಕೃತಿ ಸೌಂದರ್ಯ ಸವಿಯುವುದರೊಂದಿಗೆ ಉಪಹಾರ ಸೇವಿಸಿ ಮಾರುತಿಯ ದರ್ಶನ ಪಡೆದು ಮುಂದೆ …

Read More »

ವಿಶ್ವದ ವೇದಿಕೆಯಲ್ಲಿ ಮತ್ತೆ ಮೆರೆಯಿತು ಭಾರತದ ತ್ರಿವರ್ಣ ಧ್ವಜ 🇮🇳 – ಶಿವರಾಮ್ ಹೆಬ್ಬಾರ್

ಪ್ರತಿಧ್ವನಿ ಯಲ್ಲಾಪುರ : 20/20 ವಿಶ್ವಕಪ್ ಜಯಗಳಿಸುವ ಮೂಲಕ ಕೋಟ್ಯಾಂತರ ಭಾರತೀಯರ ಕನಸನ್ನು ನನಸು ಮಾಡಿದ ಟೀಮ್ ಇಂಡಿಯಾ ಆಟಗಾರರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕ್ರೀಡಾಪ್ರೇಮಿ ಶಿವರಾಮ ಹೆಬ್ಬಾರ್ ಟೀಂ ಇಂಡಿಯಾ ಆಟಗಾರರಿಗೆ ಅಭಿನಂದಿಸಿದ್ದಾರೆ‌. ನಿಮ್ಮ ಪರಿಶ್ರಮ ಮತ್ತು ಸಮರ್ಪಣೆಯಿಂದ ಭಾರತಕ್ಕೆ ಈ ಮಹತ್ವದ ವಿಶ್ವಕಪ್ ಕಿರೀಟ ದೊರೆತಿದೆ. ದೇಶವೇ ನಿಮ್ಮ ಮೇಲೆ ಹೆಮ್ಮೆಪಡುತ್ತಿದೆ ಎಂದು ಮಾದ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆರಂಭದಲ್ಲಿ ಬ್ಯಾಟರ್‌ಗಳ ವಿಸ್ಫೋಟಕ …

Read More »

ಮಹಿಳೆಯರು ನಮ್ಮಲ್ಲಿನ ಸಾಧನೆಗಾಗಿ ಶಿಸ್ತು ಹಾಗೂ ಬದ್ಧತೆಯನ್ನು ಹೊದಿರಬೇಕು – ಡಾ,ಸುಚೇತಾಮದ್ಗುಣಿ

ಪ್ರತಿಧ್ವನಿ ಯಲ್ಲಾಪುರ : ‘ ತೊಟ್ಟಿಲು ತೂಗುವ ಕೈ ಇಡೀ ಜಗತ್ತನ್ನೇ ತೋಗಬಲ್ಲದು ಎಂಬಂತೆ ಮಹಿಳೆಯು ಪ್ರತಿ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾಳೆ. ತಾನೂ ಏನಾದರೂ ಸಾದಿಸಬೇಕಂಬ ಛಲಕ್ಕಾಗಿ ತನ್ನ ಬಾವನೆಗಳಿಗೆ ಸ್ಪಂದಿಸುವುದರ ಮೂಲಕ ತನ್ನನ್ನು ತಾನು ಗೌರವಿಸಿಕೊಳ್ಳುವಂತಾಗಬೇಕು. ನಮ್ಮಲ್ಲಿನ ಸಾಧನೆಗಾಗಿ ಶಿಸ್ತು ಹಾಗೂ ಬದ್ಧತೆಯನ್ನು ಹೊದಿರಬೇಕು’ ಎಂದು ಡಾ. ಜಿ.ಪಿ.ಭಟ್ಟ ಮದ್ಗುಣಿ ಸ್ಮಾರಕ ಆಯುರ್ವೇದ ಸೇವಾ ಭವನದ ವೈದ್ಯೆ ಡಾ. ಸುಚೇತಾ ಮದ್ಗುಣಿ ಹೇಳಿದರು.ಚೇತನಾ ಮಹಿಳಾ …

Read More »

ಯಲ್ಲಾಪುರ ಜೇನುಕಲ್ಲು ಗುಡ್ಡದಿಂದ ಹಾರಿ ಪ್ರಾಣಬಿಟ್ಟ ಯುವಕ..

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಜೇನುಕಲ್ಲು ಗುಡ್ಡದಿಂದ ಯುವಕನೋರ್ವ ಹಾರಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.ಧಾರವಾಡ ಮೂಲದ ಶ್ರೀನಿಧಿ ಕೃಷ್ಣ ಕಡಕೋಳ(೨೩) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಫೆ.೪ರಂದು ಗೋಕರ್ಣಕ್ಕೆ ಹೋಗಿಬರುವುದಾಗಿ ಮನೆಯಲ್ಲಿ ಹೇಳಿ ಸ್ಕೂಟಿಯಲ್ಲಿ ಪ್ರಯಾಣ ಬೆಳೆಸಿದ್ದಾನೆ. ನಂತರ ಸಂಪರ್ಕಕ್ಕೆ ಸಿಗದಾದಾಗ ಪೋಷಕರು ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆಗಿಳಿದ ಪೊಲೀಸರು ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿದಾಗ ಯಲ್ಲಾಪುರಕ್ಕೆ ಬಂದ ನಂತರ ಪೋನ್ …

Read More »

ಸಮಾಜಮುಖಿ ವ್ಯಕ್ತಿತ್ವದ ಯಲ್ಲಾಪುರ ಬೆಡಸಗದ್ದೆ ಕಿರಣ ಇನ್ನಿಲ್ಲ..

ಪ್ರತಿಧ್ವನಿ ಯಲ್ಲಾಪುರ, 7/3/26,ಶನಿವಾರ : ಪಟ್ಟಣದ ಹೊರವಲಯದಲ್ಲಿನ ಬೆಡಸಗದ್ದೆ ನಿವಾಸಿ ಸಮಾಜಮುಖಿ ವ್ಯಕ್ತಿತ್ವದ ಕಿರಣ ಹಮ್ಮಣ್ಣ ಗಾಂವಕರ (42) ಅನಾರೋಗ್ಯದ ಹಿನ್ನೆಲೆಯಲ್ಲಿ ಫೆ,7 ರಂದು ನಿಧನಹೊಂದಿದ್ದಾರೆ‌ಬೆಡಸಗದ್ದೆ ಕಿರಣ ಹಲವು ರೀತಿಯ ಸಮಾಜ ಸೇವೆಗಳಲ್ಲಿ ಯುವಕರೊಂದಿಗೆ ಬೆರೆಯುತ್ತಿದ್ದರು. ಕ್ರೀಡೆ,ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದ ಕಿರಣ್ ಕೊರೊನ ಸಂದರ್ಭದಲ್ಲಿ ಹಲವು ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಗಮನ ಸೆಳೆಯುತ್ತಿದ್ದರು. ವಿಶೇಷವಾಗಿ ಬೆಡಸಗದ್ದೆಯಲ್ಲಿ ನಡೆಯುವ ದೀಪಾವಳಿ ಸಂದರ್ಭದ ಸಾಂಪ್ರದಾಯಿಕ ಆಟಗಳು, ವಾಲಿಬಾಲ್ ಪಂದ್ಯಾವಳಿ, ಆಲೆಮನೆ …

Read More »

17 ನೆ ಬಾರಿಗೆ ಆಯವ್ಯಯ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ..

ಪ್ರತಿಧ್ವನಿ ಯಲ್ಲಾಪುರ : ರಾಜ್ಯದ ಮುಖ್ಯಮಂತ್ರಿ, ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯ ಅವರು ಶುಕ್ರವಾರ (ಮಾ.6) ದಾಖಲೆಯ 17ನೇ ಆಯವ್ಯಯ ಮಂಡಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ. ರಾಜ್ಯದ 2026-27 ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್‌ ಮಂಡನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 17 ನೇ ಬಾರಿಗೆ 4.48 ಲಕ್ಷ ಕೋಟಿ ಗಾತ್ರದ ಆಯವ್ಯಯ ಮಂಡಿಸಿದ್ದಾರೆ.“ರಾಜ್ಯದಲ್ಲಿ 56432 ಹುದ್ದೆಗಳನ್ನು ಹಂತಹಂತವಾಗಿ ಭರ್ತಿ”  2026-27 ನೇ ಆಯವ್ಯಯದಲ್ಲಿ ರಾಜ್ಯದ ಜನರ …

Read More »

ಗುಬ್ಬಚ್ಚಿಗಳ ಗಾತ್ರ ಚಿಕ್ಕದಾದರು – ಪರಿಸರಕ್ಕೆ ಅವುಗಳ ಪಾತ್ರ ಮಹತ್ವದ್ದಾಗಿದೆ – ಸಂಗಮೇಶ ಪ್ರಭಾಕರ…

ಪ್ರತಿಧ್ವನಿ ಯಲ್ಲಾಪುರ : ಮಾನವನ ಬದುಕಿನಲ್ಲಿ ಹಾಗೂ ಪರಿಸರ ವ್ಯವಸ್ಥೆಯಲ್ಲಿ ಗುಬ್ಬಚ್ಚಿಗಳ ಪಾತ್ರ ಮಹತ್ವದ್ದಾಗಿದೆ.ಅತೀಯಾದ ರಾಸಾಯನಿಕಗಳ ಬಳಕೆ,ಆಧುನೀಕರಣದ ಅಳವಡಿಕೆ ಹಾಗೂ ಶಬ್ದ ಮಾಲಿನ್ಯಗಳಂತ ಕಾರಣಗಳಿಂದ ಗುಬ್ಬಚ್ಚಿಗಳ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಗುಬ್ಬಚ್ಚಿಗಳ ಸಂತಾನ ಅಭಿವೃದ್ಧಿಯ ಬಗ್ಗೆ ಗಂಭೀರ ಚಿಂತನೆ ಅತ್ಯಗತ್ಯವಾಗಿದೆ. ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ ಪ್ರಭಾಕರ್ ಹೇಳಿದರು. ಅವರು ತಾಲೂಕಿನ ಹಿತ್ಲಳ್ಳಿ ಸರಕಾರಿ ಪ್ರೌಢಶಾಲೆ ಯಲ್ಲಿ ಸ್ಪೇರೋ ಕಂಸೆರ್ವಶನ್ ಫೌಂಡೇಶನ್ ಹಾಗೂ ಅರಣ್ಯ ಇಲಾಖೆ ಹಾಗೂ ವನಸಿರಿ …

Read More »

“ಶ್ರೀ ಪರಾಭವ ಸಂವತ್ಸರ” ನೂತನ ವರ್ಷ ಯುಗಾದಿ ಆಚರಣೆಗೆ ಉತ್ಸವ ಸಮಿತಿಯಿಂದ ಕರಪತ್ರ ಬಿಡುಗಡೆ.

ಪ್ರತಿಧ್ವನಿ ಯಲ್ಲಾಪುರ : ಹಿಂದುಗಳ ನೂತನ ವರ್ಷ ಯುಗಾದಿ ಸಂಭ್ರಮಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು “ಶ್ರೀ ಪರಾಭವ ಸಂವತ್ಸರ ಯುಗಾದಿ ” ಯನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು ಯುಗಾದಿ ಉತ್ಸವ ಸಮಿತಿ ವತಿಯಿಂದ ಗುರುವಾರ ಯಲ್ಲಾಪುರ ಗ್ರಾಮದೇವಿ ಸಾನಿದ್ಯದಲ್ಲಿ ಕರಪತ್ರ ಬಿಡುಗಡೆ ಮಾಡಲಾಯಿತು. ಉತ್ಸವದ ಯಶಸ್ಸಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದಿನಾಂಕ 17 ರಂದು ಬೃಹತ್ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ. ದಿನಾಂಕ 19 ರಂದು ಬೃಹತ್ …

Read More »