
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಶಾರದಾಗಲ್ಲಿಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಅಂದಾಜು 4,50,000 ಮೌಲ್ಯದ ಇನ್ನೋವಾ ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಮೂವರು ಆರೋಪಿಗಳನ್ನು ಮಂಗಳೂರಿನ ಕಂಕನಾಡಿಯಲ್ಲಿ ಯಲ್ಲಾಪುರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಪಟ್ಟಣದ ಶಾರದಾ ಗಲ್ಲಿಯ ನಿವಾಸಿ ಮಹ್ಮದ್ ಶೇಖ್ ಎಂಬುವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಕಳ್ಳತನವಾಗಿರುವ ಕುರಿತು ಯಲ್ಲಾಪುರ ಠಾಣೆಯಲ್ಲಿ ಏ.4 ರಂದು ದೂರು ಸಲ್ಲಿಸಿದ್ದರು.
ಪ್ರಕರಣದ ಬೆನ್ನತ್ತಿದ ಪೊಲೀಸರು ಖಚಿತ ಮಾಹಿತಿಯನ್ನಾಧರಿಸಿ ಏ. 8 ರಂದು ಮಂಗಳೂರಿನ ಕಂಕನಾಡಿಯಲ್ಲಿ ಆರೋಪಿಗಳಾದ ಮಹ್ಮದ್ ಸಾಹಿಲ್ ಶೇಖ, ಮಹ್ಮದ್ ಮುಸ್ತಾಫಾ, ಮಹ್ಮದ್ ಅಬ್ದುಲ್ ಹಮೀದ್ ಎಂಬ ಮೂವರನ್ನು ಬಂಧಿಸಿ ಆರೋಪಿಗಳಿಂದ ಕಳ್ಳತನ ಮಾಡಿದ ಇನ್ನೋವಾ ಕಾರು ಹಾಗೂ ಕೃತ್ಯಕ್ಕೆ ಬಳಸಿದ ಬಿಳಿ ಬಣ್ಣದ ಫಾರ್ಚೂನ್ ಕಾರು ಸೇರಿದಂತೆ ಒಟ್ಟು12 ಲಕ್ಷ 50 ಸಾವಿರ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ, ಪೊಲೀಸ್ ಉಪಾಧೀಕ್ಷಕ ಗಣೇಶ ಕೆ.ಎಲ್ ಮಾರ್ಗದರ್ಶನದಲ್ಲಿ ಯಲ್ಲಾಪುರ ಪಿಐ ರಂಗನಾಥ ನೀಲಮ್ಮನವರ್ ನೇತೃತ್ವದಲ್ಲಿ ಪಿ.ಎಸ್.ಐ ಗಳಾದ ರವಿ ಗುಡ್ಡಿ, ಸುನಿಲ್ ಹುಲ್ಕೋಳಿ, ಮಂಜುನಾಥ ಪಾಟೀಲ, ಲತಾ ಕೆ ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹ್ಮದ್ ಶಪಿ, ಗಜಾನನ ನಾಯ್ಕ, ಗಿರೀಶ್ ಲಮಾಣಿ, ಪರಶುರಾಮಕಾಳೆ ಭಾಗವಹಿಸಿದ್ದಾರೆ.
Prathidvani Yellapura