Breaking News

ಮಹಿಳೆಯರು ನಮ್ಮಲ್ಲಿನ ಸಾಧನೆಗಾಗಿ ಶಿಸ್ತು ಹಾಗೂ ಬದ್ಧತೆಯನ್ನು ಹೊದಿರಬೇಕು – ಡಾ,ಸುಚೇತಾಮದ್ಗುಣಿ

ಪ್ರತಿಧ್ವನಿ ಯಲ್ಲಾಪುರ :ತೊಟ್ಟಿಲು ತೂಗುವ ಕೈ ಇಡೀ ಜಗತ್ತನ್ನೇ ತೋಗಬಲ್ಲದು ಎಂಬಂತೆ ಮಹಿಳೆಯು ಪ್ರತಿ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾಳೆ. ತಾನೂ ಏನಾದರೂ ಸಾದಿಸಬೇಕಂಬ ಛಲಕ್ಕಾಗಿ ತನ್ನ ಬಾವನೆಗಳಿಗೆ ಸ್ಪಂದಿಸುವುದರ ಮೂಲಕ ತನ್ನನ್ನು ತಾನು ಗೌರವಿಸಿಕೊಳ್ಳುವಂತಾಗಬೇಕು. ನಮ್ಮಲ್ಲಿನ ಸಾಧನೆಗಾಗಿ ಶಿಸ್ತು ಹಾಗೂ ಬದ್ಧತೆಯನ್ನು ಹೊದಿರಬೇಕು’ ಎಂದು ಡಾ. ಜಿ.ಪಿ.ಭಟ್ಟ ಮದ್ಗುಣಿ ಸ್ಮಾರಕ ಆಯುರ್ವೇದ ಸೇವಾ ಭವನದ ವೈದ್ಯೆ ಡಾ. ಸುಚೇತಾ ಮದ್ಗುಣಿ ಹೇಳಿದರು.
ಚೇತನಾ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟ ಯಲ್ಲಾಪುರ, ಜ್ಞಾನ ಜ್ಯೋತಿ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟ ಮುಂಡಗೋಡ ಹಾಗೂ ಟೀಡ್ ಟ್ರಸ್ಟ್ ಯಲ್ಲಾಪುರ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಶಾರದಾ ಗಲ್ಲಿಯ ಶಿವಪ್ಪ ಪೂಜಾರಿ ಗ್ರಾಮೀಣ ಅಭಿವೃದ್ಧಿ ಸಂಪನ್ಮೂಲ ಕೇಂದ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವಂತ ಕುಟುಂಬಗಳು ಇದ್ದಾಗ ಮಾತ್ರ ಆರೋಗ್ಯವಂತ ಸಮುದಾಯ ಇರಲು ಸಾಧ್ಯ ಎಂಬ ನಿಟ್ಟಿನಲ್ಲಿ ಮಹಿಳೆಯು ಪ್ರತಿ ಹಂತದಲ್ಲೂ ತನ್ನ ಆಸೆ ಆಕಾಂಕ್ಷೆ ಗಳನ್ನು ಬದಿಗಿಟ್ಟು ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಮಾತ್ರ ಹೆಚ್ಚು ಕಾಳಜಿವಹಿಸುತ್ತಿದ್ದು, ಇತರರ ಆರೋಗ್ಯದ ಜೊತೆ ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜೀವಹಿಸಬೇಕು’ ಎಂದರು.
ಮುಖ್ಯ ಅತಿಥಿಗಳಾದ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಮಾತನಾಡಿ, ‘ಮಹಿಳೆಯರೂ ಹೆಚ್ಚಿನ ತ್ಯಾಗ ಜೀವಿಗಳು. ಮಹಿಳೆಯು ತನ್ನ ಆಸೆ ಆಕಾಂಕ್ಷೆ ಗಳನ್ನು ಬದಿಗಿಟ್ಟು ತಮ್ಮ ಸಂಸಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬದುಕುತ್ತಾಳೆ, ಮಹಿಳೆಯರಲ್ಲಿ ಅನೇಕ ಪ್ರತಿಭೆಗಳು ಇರುತ್ತದೆ ಆದರೆ ಆ ಪ್ರತಿಭೆಗಳನ್ನು ಸಮಾಜದ ಮುಂದೆ ತೋರಿಸಲು ಅವಕಾಶ ಸಿಗದೇ ಇರುವುದು ವಿಪಯಾಸ . ಪುರುಷ ಪ್ರದಾನ ಸಮಾಜವಾಗಿರುವದರಿಂದ ತಮ್ಮ ಸಾಮರ್ಥ್ಯ ಗಳನ್ನೂ ಹೊರ ಹಾಕಲು ಕಟ್ಟು ಪಾಡುಗಳನ್ನು ಮೆಟ್ಟಿ ಮಹಿಳೆ ಹೊರಬರಲು ಸಾಧ್ಯ ವಾಗುತ್ತಿಲ್ಲ ಹೆಣ್ಣು ಮಕ್ಕಳಿಗಾಗಿ ಮಹಿಳೆಯರಿಗಾಗಿ ಸರಕಾರದಿಂದ ಹೆಚ್ಚು ಸೌಲಭ್ಯಗಳ ಕಾನೂನು ಇದ್ದು ಮಾಹಿತಿ ನೀಡುವ ಕಾರ್ಯ ಸರಕಾರದಿಂದ ಆಗಬೇಕು.
ಶಿಕ್ಷಣ ಸಂಯೋಜಕ ಸುಧಾಕರ್ ನಾಯಕ್ ಮಾತನಾಡಿ, ‘ಒಳ್ಳೆಯ ಕೆಲಸ ಒಳ್ಳೆಯ ವ್ಯಕ್ತಿತ್ವ ವನ್ನು ರಚಿಸಿಕೊಳ್ಳಲು ಅನುಕೂಲವಾಗುತ್ತದೆ ಮಕ್ಕಳ ಕಲಿಕೆ ಬಗ್ಗೇ ಎಲ್ಲಾ ಪಾಲಕರು ಜಾಗರೂಕತೆ ವಹಿಸಿಕೊಂಡು ಮಕ್ಕಳಿಗೆ ಹೆಚ್ಚಿನ ಜ್ಞಾನವನ್ನು ಕೊಡಬೇಕು. ಟೀಡ್ ಸಂಸ್ಥೆ ಸಂಸ್ಥೆಯ ಮಾರ್ಗದರ್ಶನದಲ್ಲಿ ಮಹಿಳೆಯರೂ ಸಂಘಟಿತರಾಗಿ ಒಕ್ಕೂಟ ರಚಿಸಿಕೊಂಡು ಸದಾ ಮಹಿಳೆಯರನ್ನು ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಥೆ ಎಂದು ಶ್ಲಾಘನೆ ವ್ಯಕ್ತ ಪಡಿಸಿದರು.
ಟೀಡ್ ನ್ ವ್ಯವಸ್ಥಾಪಕ ಟ್ರಸ್ಟಿ ಮೋಹಿನಿ ಪೂಜಾರಿ ಮಾತನಾಡಿ ಸಂಸ್ಥೆಯ ಮಾರ್ಗದರ್ಶನದಲ್ಲಿ ಮಹಿಳೆಯ ಮೂಲಕ ನಾವು ಕುಟುಂಬಗಳ ಸಬಲೀಕರಣಕ್ಕಾಗಿ ಸೇವೆ ಸಲ್ಲಿಸಿದ್ದೇವೆ. ಸಮಾಜದ ಸಮಸ್ಯೆಗಳಿಗೆ ಎಲ್ಲರೂ ಒಟ್ಟಾಗಿ ಹೋಗುವಂತೆ ವೇದಿಕೆಗಳನ್ನು ಕಲ್ಪಿಸಿ ಕೊಟ್ಟಿದ್ದೇವೆ’ ಎಂದರು.
ಪೊಲೀಸ್ ಇಲಾಖೆಯೇ ಅಕ್ಕಪಡೆಯ ಅಧಿಕಾರಿ ರೇಣುಕಾ ಬರಗಟ್ಟಿ ಹಾಗೂ ಮುಕ್ತಾ ಸೂರ್ಯವಂಶ ಇಲಾಖೆ ಕಾನೂನು ಸೇವೆಗಳ ಬಗ್ಗೆ ಮಾಹಿತಿನೀಡಿದರು.
ಲಕ್ಷ್ಮಿ ಸಿದ್ಧಿ ಹಾಗೂ ಲಕ್ಷ್ಮಿ ಗೌಡ ತಮ್ಮ ಅನುಭವವನ್ನು ಹಂಚಿಕೊAಡರು.
ಚೇತನಾ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಕಾಮಾಕ್ಷಿ ರಾಯ್ಕರ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದರು . ವೇದಿಕೆಯಲ್ಲಿ ಮುಂಡಗೋಡನ ಜ್ಞಾನ ಜ್ಯೋತಿ ಮಹಿಳಾ ಸ್ಪ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಗುತ್ತೇವ್ವ ಮನ್ನೂರು ಉಪಸ್ಥಿತರಿದ್ದರು.
ರೇಖಾ ಘಾಡಿ ಪ್ರಾರ್ಥಿಸಿದರು, ಲಲಿತಾ ಮರಾಟಿ ಸ್ವಾಗತಿಸಿದರು, ಒಕ್ಕೂಟದ ಕಾರ್ಯದರ್ಶಿ ಸರೋಜಾ ಮಿರಾಶಿ ಪ್ರಾಸ್ತಾವಿಕಮಾತನಾಡಿದರು. ವಿನಯಾ ಚಂದ್ಗುಳಿಕರ ವಂದಿಸಿದರು. ಸುಜಾತಾ ನಾಯ್ಕ ನಿರೂಪಿಸಿದರು. ಟೀಡ್ ಸಿಬ್ಬಂದಿ ಬಮ್ಮು ತೋರತ,ನರಸಿಂಹ ಸಿದ್ಧಿ, ಗೀತಾ ನೆರಲಗಿ ಸಹಕರಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರ ಖಾತೆಗೆ ಎರಡನೇ ಕಂತಿನ ಬೆಳೆ ವಿಮೆ ಜಮೆ ಆರಂಭ.

ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಾರರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ‘ಹವಾಮಾನ ಆಧಾರಿತ ಬೆಳೆ …

Leave a Reply

Your email address will not be published. Required fields are marked *