
ಪ್ರತಿಧ್ವನಿ ಯಲ್ಲಾಪುರ, 7/3/26,ಶನಿವಾರ : ಪಟ್ಟಣದ ಹೊರವಲಯದಲ್ಲಿನ ಬೆಡಸಗದ್ದೆ ನಿವಾಸಿ ಸಮಾಜಮುಖಿ ವ್ಯಕ್ತಿತ್ವದ ಕಿರಣ ಹಮ್ಮಣ್ಣ ಗಾಂವಕರ (42) ಅನಾರೋಗ್ಯದ ಹಿನ್ನೆಲೆಯಲ್ಲಿ ಫೆ,7 ರಂದು ನಿಧನಹೊಂದಿದ್ದಾರೆ
ಬೆಡಸಗದ್ದೆ ಕಿರಣ ಹಲವು ರೀತಿಯ ಸಮಾಜ ಸೇವೆಗಳಲ್ಲಿ ಯುವಕರೊಂದಿಗೆ ಬೆರೆಯುತ್ತಿದ್ದರು. ಕ್ರೀಡೆ,ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದ ಕಿರಣ್ ಕೊರೊನ ಸಂದರ್ಭದಲ್ಲಿ ಹಲವು ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಗಮನ ಸೆಳೆಯುತ್ತಿದ್ದರು.

ವಿಶೇಷವಾಗಿ ಬೆಡಸಗದ್ದೆಯಲ್ಲಿ ನಡೆಯುವ ದೀಪಾವಳಿ ಸಂದರ್ಭದ ಸಾಂಪ್ರದಾಯಿಕ ಆಟಗಳು, ವಾಲಿಬಾಲ್ ಪಂದ್ಯಾವಳಿ, ಆಲೆಮನೆ ಆಯೋಜನೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.

ಇತ್ತೀಚಿನ ಆನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಶನಿವಾರ ನಿಧನಹೊಂದಿದ್ದು ಕುಟುಂಬದ ಸದಸ್ಯರು ಹಾಗು ಅಪಾರ ಬಂಧುಬಳಗ ಮತ್ತು ಸ್ನೇಹಿತರನ್ನು ಅಗಲಿದ್ದು ಉತ್ತಮ ಸಮಾಜಮುಖಿ ವ್ಯಕ್ತಿತ್ವ ಕಣ್ಮರೆಯಾದಂತಾಗಿದೆ.
Prathidvani Yellapura