Breaking News

ಸಮಾಜಮುಖಿ ವ್ಯಕ್ತಿತ್ವದ ಯಲ್ಲಾಪುರ ಬೆಡಸಗದ್ದೆ ಕಿರಣ ಇನ್ನಿಲ್ಲ..


ಪ್ರತಿಧ್ವನಿ ಯಲ್ಲಾಪುರ, 7/3/26,ಶನಿವಾರ : ಪಟ್ಟಣದ ಹೊರವಲಯದಲ್ಲಿನ ಬೆಡಸಗದ್ದೆ ನಿವಾಸಿ ಸಮಾಜಮುಖಿ ವ್ಯಕ್ತಿತ್ವದ ಕಿರಣ ಹಮ್ಮಣ್ಣ ಗಾಂವಕರ (42) ಅನಾರೋಗ್ಯದ ಹಿನ್ನೆಲೆಯಲ್ಲಿ ಫೆ,7 ರಂದು ನಿಧನಹೊಂದಿದ್ದಾರೆ‌
ಬೆಡಸಗದ್ದೆ ಕಿರಣ ಹಲವು ರೀತಿಯ ಸಮಾಜ ಸೇವೆಗಳಲ್ಲಿ ಯುವಕರೊಂದಿಗೆ ಬೆರೆಯುತ್ತಿದ್ದರು. ಕ್ರೀಡೆ,ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದ ಕಿರಣ್ ಕೊರೊನ ಸಂದರ್ಭದಲ್ಲಿ ಹಲವು ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಗಮನ ಸೆಳೆಯುತ್ತಿದ್ದರು.


ವಿಶೇಷವಾಗಿ ಬೆಡಸಗದ್ದೆಯಲ್ಲಿ ನಡೆಯುವ ದೀಪಾವಳಿ ಸಂದರ್ಭದ ಸಾಂಪ್ರದಾಯಿಕ ಆಟಗಳು, ವಾಲಿಬಾಲ್ ಪಂದ್ಯಾವಳಿ, ಆಲೆಮನೆ ಆಯೋಜನೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.


ಇತ್ತೀಚಿನ ಆನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಶನಿವಾರ ನಿಧನಹೊಂದಿದ್ದು ಕುಟುಂಬದ ಸದಸ್ಯರು ಹಾಗು ಅಪಾರ ಬಂಧುಬಳಗ ಮತ್ತು ಸ್ನೇಹಿತರನ್ನು ಅಗಲಿದ್ದು ಉತ್ತಮ ಸಮಾಜಮುಖಿ ವ್ಯಕ್ತಿತ್ವ ಕಣ್ಮರೆಯಾದಂತಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ರವೀಂದ್ರ ನಗರ “ಶ್ರೀ ಆಂಜನೇಯ ದೇಗುಲ ” ಅಭಿವೃದ್ಧಿ ಸಹಾಯಾರ್ಥ ನಾಟಕ ಪ್ರದರ್ಶನ.

ಪ್ರತಿಧ್ವನಿ ಯಲ್ಲಾಪುರ : ಕಲೆ ಇರುವುದು ಕಲಾವಿದನಲ್ಲಿ ಸುಂದರ,ಸಾಮಾಜಿಕ,ನಗೆ ನಾಟಕ ಇರುವುದು ಯಲ್ಲಾಪುರದಲ್ಲಿ. ನಾಟಕ ಪ್ರಿಯರಿಗೊಂದು ಕೊನೆಯ ರಸದೌತಣ ಇಂದು …

Leave a Reply

Your email address will not be published. Required fields are marked *