

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬಹುತೇಕ ಟಿಕೆಟ್ ಘೋಷಿಸಿ ಚುನಾವಣಾ ಕಣದಲ್ಲಿ ಮುನ್ನುಗ್ಗುತ್ತಿವೆ. ಈ ಹಂತದಲ್ಲಿ ಆಡಳಿತಾರೂಡ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದಿದ್ದರೂ ಬಹುತೇಕ ಖಚಿತವಾದ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಈಗಾಗಲೇ ಆರಂಭಿಸಿದ್ದಾರೆ. ಅದರಲ್ಲಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪಕ್ಕಾ ಎನಿಸಿಕೊಂಡಿರುವ ಶಿವರಾಮ ಹೆಬ್ಬಾರ್ ಅವರ ಚುನಾವಣಾ ಪ್ರಚಾರ ಭರದಿಂದ ಸಾಗಿದೆ. ಅವರ ಪ್ರಚಾರದ ರಥಕ್ಕೆ ಮಗ ವಿವೇಕ ಹೆಬ್ಬಾರ್ ಸಾರಥಿಯಾಗಿ ಮುನ್ನುಗ್ಗುತ್ತಿದ್ದಾರೆ.

ಚುನಾವಣೆ ಘೋಷಣೆಯಾಗುವುದು ಎಂಬ ಸುಳಿವು ದೊರೆಯುತ್ತಲೇ ಕಳೆದ ಮರ‍್ನಾಲ್ಕು ತಿಂಗಳಿನಿಂದ ಕ್ಷೇತ್ರಾದ್ಯಂತ ಸಚಿವ ಹೆಬ್ಬಾರ್ ಅವರಿಗಿಂತಲೂ ಪುತ್ರ ವಿವೇಕ್ ಹೆಬ್ಬಾರ್ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

ತಾಲೂಕಿನ ಇಡಗುಂದಿ ಶಕ್ತಿಕೇಂದ್ರ ವ್ಯಾಪ್ತಿಯ ಅರಬೈಲು ಹಾಗೂ ಗುಳ್ಳಾಪುರ ಗ್ರಾಮದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯ ಮುಂದೆ ಆಗಬೇಕಿರುವ ಕಾರ್ಯಗಳ ಕುರಿತು ಮತದಾರರಿಗೆ ಮಾಹಿತಿ ನೀಡಿ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕಿದೆ.

ಪ್ರತಿಯೊಬ್ಬ ಕಾರ್ಯಕರ್ತ ಸೈನಿಕರಂತೆ ಕೆಲಸ ನಿರ್ವಹಿಸಿ ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಬಲ ತುಂಬಬೇಕಿದೆ ಎಂಬ ಕಿವಿಮಾತುಗಳನ್ನು ಕಾರ್ಯಕರ್ತರಿಗೆ ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಶ್ರೀಕಾಂತ ಶೆಟ್ಟಿ, ಶಕ್ತಿಕೇಂದ್ರದ ಪ್ರಮುಖ ಮಹಾಬಲೇಶ್ವರ ಭಟ್ಟ, ಗ್ರಾ.ಪಂ ಅಧ್ಯಕ್ಷೆ ನಾಗವೇಣಿ ಸಿದ್ದಿ ಹಾಗೂ ವಿವಿಧ ಸ್ತರದ ಪದಾಧಿಕಾರಿಗಳು, ಪಂಚಾಯತ ಸದಸ್ಯರು, ಬೂತ್ ಅಧ್ಯಕ್ಷರು , ಕಾರ್ಯಕರ್ತರು ಉಪಸ್ಥಿತರಿದ್ದರು.





Prathidvani Yellapura