Breaking News

ಕಳೆದುಕೊಂಡ ಮಾಂಗಲ್ಯ ಸರ ಮರಳಿ ಪಡೆದು ಪ್ರಾಮಾಣಿಕತೆಗೆ ವಂದಿಸಿದ ದಂಪತಿ.!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಸುಮಾರು 12 ರಿಂದ 13 ಗ್ರಾಂ ತೂಗುವ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡಿದ್ದ ದಂಪತಿಗಳು ವಾಟ್ಸಪ್ ಗ್ರೂಪ್‌ನಲ್ಲಿದ್ದ ಸಂದೇಶದ ಮೂಲಕ ಮರಳಿ ಪಡೆದ ಘಟನೆ ಯಲ್ಲಾಪು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕೃಷ್ಣಮೂರ್ತಿ ಗಾಂವ್ಕರ್ ಶೇವ್ಕಾರ ದಂಪತಿಗಳು ಏ.29ರಂದು ಚಿನ್ನಾಪುರ- ಮಲವಳ್ಳಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುವಾಗ ಮಾರ್ಗಮಧ್ಯೆ ಸುಮಾರು ಅಂದಾಜು 85 ರಿಂದ 90 ಸಾವಿರ ಮೌಲ್ಯದ 12 ರಿಂದ 13 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡಿದ್ದರು. ಸರ ಎಲ್ಲಿ ಬಿದ್ದು ಹೋಗಿದೆ ಎಂದೇ ಗೊತ್ತಿರದ ದಂಪತಿಗಳಿಗೆ ನೆರವಾದದ್ದು ವಾಟ್ಸಪ್ ಗ್ರೂಪ್ಗಳಲ್ಲಿ ಹರಿದಾಡಿದ ಒಂದು ಮೆಸೇಜ್…


ಕಳಚೆ ಮೂಲದ ಹೊಸಕುಂಬ್ರಿಯ (ಈಗ ತೆಲಂಗಾರದಲ್ಲಿ ನೆಲೆಸಿರುವ)ಆರ್.ವಿ ಭಟ್ ದಂಪತಿಗಳು ಅದೇ ದಾರಿಯಲ್ಲಿ ಹೋಗುವಾಗ ತೆಲಂಗಾರ ಬಳಿಯ ಬೆಳ್ಳಿಮನೆ ಘಟ್ಟದ ಹತ್ತಿರ ಸರ ದೊರೆತಿದ್ದು, ಅವರು ಸರ ದೊರಕಿರುವ ಮಾಹಿತಿಯನ್ನು ಕೆಲವು ವಾಟ್ಸಪ್ ಗ್ರೂಪ್ ಗಳಲ್ಲಿ ಹಂಚಿಕೊಂಡಿದ್ದರು. ಸಂಬಂಧಿಕರಿಂದ ಈ ಮೆಸೇಜಿನ ಮಾಹಿತಿ ಪಡೆದು ಅವರನ್ನು ಸಂಪರ್ಕಿಸಿ ಮಾಂಗಲ್ಯ ಸರ ನಮ್ಮದೇ ಎಂದು ಖಾತ್ರಿ ಪಡಿಸಿ ಮರಳಿ ಪಡೆಯಲಾಯಿತು.


ಕಳೆದುಕೊಂಡ ವಸ್ತುವಿನ ಬೆಲೆ ಹೆಚ್ಚಿರಲಿ ಕಡಿಮೆ ಇರಲಿ ಕಳೆದುಕೊಂಡವರಿಗೆ ಆ ವಸ್ತುವಿನ ಪ್ರಾಮುಖ್ಯತೆ, ಅನಿವಾರ್ಯತೆ ಮಾತಲ್ಲಿ ಹೇಳಲಾರದ್ದು. ಅಂತೆಯೇ ದೊರೆತ ವಸ್ತುವನ್ನ ಮರಳಿಸುವ ಗುಣಕೂಡ ಬೆಲೆಕಟ್ಟಲಾರದ್ದು. ಹೀಗಾಗಿ ಆರ್.ವಿ.ಭಟ್ ದಂಪತಿಗಳ ಪ್ರಾಮಾಣಿಕತೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದ್ದು ಅದೇ ವಾಟ್ಸಪ್ ಗುಂಪುಗಳಲ್ಲಿ ಪ್ರಶಂಸೆಯ ಸಂದೇಶಗಳು ಹರಿದಾಡುತ್ತಿವೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

“ಭಾವಗಳ ಬ್ರಹ್ಮಾಂಡ” ಕವನ ಸಂಕಲನ ಮೇ 1 ಕ್ಕೆ ಅನಾವರಣ..

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಇದೇ ಮೊದಲು AI ತಂತ್ರಜ್ಞಾನ ಬಳಸಿ ಒಂದು ಸುಂದರ ಕವನ ಸಂಕಲನ ರೂಪುಗೊಂಡಿದ್ದು “ಭಾವಗಳ …

Leave a Reply

Your email address will not be published. Required fields are marked *