




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ವಿಶ್ವದರ್ಶನ ಪಿ.ಯು ಕಾಲೇಜಿನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ವಾಣಿಜ್ಯ ಮತ್ತು ವಿಜ್ಞಾನ ವಿಭಾಗ ಸೇರಿದಂತೆ 42 ವಿಧ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪಿ.ಸಿ.ಎಂ. ವಿಷಯದಲ್ಲಿ ಎಚ್.ಎಸ್.ಸಂದೇಶ 393/600 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾನೆ. ಅಲ್ಲದೇ, ಗಣಿತಶಾಸ್ತ್ರ ಮತ್ತು ಜೀವವಿಜ್ಞಾನದಲ್ಲಿ 100 ಕ್ಕೆ 100 ಅಂಕಗಳನ್ನು ಗಳಿಸಿದ್ದಾನೆ. ವಿಜ್ಞಾನ ವಿಭಾಗದಲ್ಲಿ ಫರ್ಧಿನ್ ಇಕ್ಬಾಲ್ ಸಯ್ಯದ್ ಹಾಗೂ ವೈಷ್ಣವಿ ದತ್ತಾತ್ರೇಯ ಗಾಂವ್ಕರ್ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಲಕ್ಷ್ಮೀ ಕೃಷ್ಣ ಪಟಗಾರ (95/.83%) ಪ್ರಥಮ ಸ್ಥಾನ ಪಡೆದರೆ, ದೀಕ್ಷಾ ಮಂಜುನಾಥ ಹೆಗಡೆ (95.5%) ದ್ವಿತೀಯ ಹಾಗೂ ಶ್ರೀಗೌರಿ ಮಹಾಬಲೇಶ್ವರ ಭಟ್ಟ (9%) ಮತ್ತು ವೈಷ್ಣವಿ ಪರಮಾನಂದ ದುಂಡಿ (೯೩.೩%) ತೃತೀಯ ಸ್ಥಾನ ಗಳಿಸಿದ್ದಾರೆ.
ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡಿದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಎಲ್ಲಾ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.



Prathidvani Yellapura