Breaking News

ಯಲ್ಲಾಪುರ ಆಡಳಿತ ಸೌಧದ ಎದುರು ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ವಿವಿಧ ಸಂಘಟನೆಗಳ ಮನವಿ.


ಪ್ರತಿಧ್ವನಿ, ಯಲ್ಲಾಪುರ – ಪಟ್ಟಣದ ಮಿನಿ ವಿಧಾನಸೌಧದ ಎದುರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಪಟ್ಟಣದ ತಹಸೀಲ್ದಾರ ಕಚೇರಿ ಬಳಿ ತಹಸೀಲ್ದಾರ ಎಂ.ಗುರುರಾಜ ಅವರಿಗೆ ಮನವಿ ಸಲ್ಲಿಸಿದರು.
ಬೇರೆ ಬೇರೆ ತಾಲೂಕು, ಜಿಲ್ಲೆಗಳಲ್ಲಿ ಅಂಬೇಡ್ಕರ್ ಮೂರ್ತಿಗಳಿವೆ. ಆದರೆ ನಮ್ಮ ತಾಲೂಕಿನಲ್ಲಿ ಎಲ್ಲಿಯೂ ಅಂಬೇಡ್ಕರ್ ಮೂರ್ತಿ ಇಲ್ಲ. ಹಾಗಾಗಿ ತಾಲೂಕಿನ ಮಿನಿ ವಿಧಾನಸೌಧದ ಎದುರು ಅಂಬೇಡ್ಕರ್ ಅವರ 11 ಅಡಿ ಎತ್ತರದ ಕಂಚಿನ ಮೂರ್ತಿ ನಿರ್ಮಿಸಬೇಕೆಂದು ಆಗ್ರಹಿಸಿದರು.

ವಿಡಿಯೋ ದೃಶ್ಯಾವಳಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತು ನಮ್ಮ ಪ್ರತಿಧ್ವನಿ ಸುದ್ದಿ ನೋಡಲು ವಾಟ್ಸಪ್ ಗುಂಪಿಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ. https://chat.whatsapp.com/FXRKvD5zVEoJdbUcwCuZ55


ಸಮಿತಿಯ ಪರವಾಗಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿ ಸಂಚಾಲಕ ಕೇಬಲ್ ನಾಗೇಶ, ಅಂಬೇಡ್ಕರ್ ಅವರು ದೇಶದ ಪ್ರತಿ ಮನೆಯ ದೇವರು. ಅವರು ನೀಡಿದ ಸಂವಿಧಾನ ಕೇವಲ ಒಂದು ವರ್ಗ, ಜಾತಿ, ಧರ್ಮಕ್ಕೆ ಸೀಮಿತವಲ್ಲ. ಎಲ್ಲರಿಗೂ ಅನ್ವಯವಾಗುತ್ತದೆ. ಅಂತಹ ದೇವರ ಪ್ರತಿಮೆ ಪ್ರತಿ ತಾಲೂಕಿನ ತಹಸೀಲ್ದಾರ ಕಚೇರಿ ಎದುರು ಇರಲೇಬೇಕು. ಈ ಆಗ್ರಹ ಎಲ್ಲೆಡೆ ಕೇಳಿ ಬರುತ್ತಿದೆ. ಯಲ್ಲಾಪುರದಿಂದಲೇ ಪ್ರತಿಮೆ ಸ್ಥಾಪನೆಯ ಕಾರ್ಯ ಆರಂಭವಾಗಲಿ ಎಂದು ಆಶಿಸಿದರು.

ಇದಕ್ಕು ಮುನ್ನ ಸಂಘಟಕರು ರಾಷ್ಟ್ರೀಯ ಹೆದ್ದಾರಿ ಬಳ್ಳಾರಿ-ಕಾರವಾರ ಮೂಲಕ ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತ ಸಾಗಿ ಬಂದು ಮನವಿ ಸಲ್ಲಿಕೆ ಮಾಡಿದರು.


ಸಮಿತಿಯ ಗೌರವಾಧ್ಯಕ್ಷ ಜಗನ್ನಾಥ ರೇವಣಕರ್, ಅಧ್ಯಕ್ಷ ಮಾರುತಿ ಬೋವಿವಡ್ಡರ್, ಉಪಾಧ್ಯಕ್ಷರಾದ ಕಲ್ಲಪ್ಪ ಹೊಳಿ, ಅಶೋಕ ಕೊರವರ್, ಶಾಮಲಿ ಪಾಟಣ್ಕರ್, ಕಾರ್ಯದರ್ಶಿ ಸಂತೋಷ್ ಪಾಟಣ್ಕರ್, ಸಹ ಕಾರ್ಯದರ್ಶಿ ತೊಳರಾಮ್ ಜಿ ಅತ್ತರವಾಲ, ಮಾರ್ಗದರ್ಶಕ ಬೆನಿತ್ ಸಿದ್ದಿ, ಹಾಗು ಸದಸ್ಯರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿ ಪ್ರಮುಖರಾದ ಘನಶ್ಯಾಮ ರೇವಣಕರ್, ಶಂಕರ‌  ನಾಯಕ್  ರೂಪಾ ಪಾಟಣ್ಕರ್, ಇರ್ಷಾದ್ ಕಾಗಲ್ಕರ್, ಬಶೀರ್ ಸೈಯ್ಯದ್, ದ್ಯಾಮಣ್ಣ ಬೋವಿವಡ್ಡರ್, ಹನುಮಂತ ಕೊರವರ್, ಅನಂತ ಸಿದ್ದಿ  ಇನ್ನಿತರ ಪ್ರಮುಖರು.


ಸದಸ್ಯರು ನಾಗರಿಕರು ಉಪಸ್ಥಿತರಿದ್ದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಶಿಲ್ದಾರ ಗುರುರಾಜ್ ಮನವಿ ಸಂಬಂಧಿಸಿದವರಿಗೆ ತುಪಿಸಲಾಗುವುದೆಂದು ಭರವಸೆ ನೀಡಿದರು.


ಗೌರವಾಧ್ಯಕ್ಷ ಜಗನ್ನಾಥ ರೇವಣ್ಕರ್ ಮನವಿ ಪತ್ರ ವಾಚಿಸಿದರು. ಸಂತೋಷ್ ಪಾಟಣ್ಕರ್ ಸ್ವಾಗತಿಸಿ ವಂದಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *