
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಿರವತ್ತಿಯಲ್ಲಿ ಪ್ರಸಕ್ತ ಸಾಲಿನ ಹತ್ತಿ ಮಾರಾಟ ಟೆಂಡರ್ ಪ್ರಕ್ರಿಯೆ ಮಂಗಳವಾರದಿಂದ ಶುಭಾರಂಭ ಕಂಡಿತು.

ಈ ಬಾರಿ ಹತ್ತಿ ಬೀಜದ ಕೊರತೆಯಾಗಿ ಬೆಲೆಯು ಹೆಚ್ಚಳವಾಗಿದ್ದರಿಂದ ರೈತರು ಹತ್ತಿ ಬೆಳೆಯಲು ಹಿಂದೇಟು ಹಾಕಿದ್ದು ಮತ್ತು ಮಳೆ ರಾಯನ ಕೃಪೆ ಬೆಳೆಗಳಮೇಲೆ ಸಾಕಷ್ಟು ಪ್ರಮಾಣದಲ್ಲಿ ಬಾರದಿರುವುದು ಬೆಳೆ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ.

ಕಳೆದ ವರ್ಷ ಇದೇ ಸಮಯದಲ್ಲಿ ಸುಮಾರು 3,500 ಕ್ಕು ಅಧಿಕ ಅಂಡಿಗೆ ಹತ್ತಿ ಟೆಂಡರ್ ಪ್ರಕ್ರಿಯೆಯಲ್ಲಿ ವಹಿವಾಟಾಗಿತ್ತು. ಸದ್ಯ ಈ ವರ್ಷ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು ಎಷ್ಟು ಹಂಡಿಗೆ ಹತ್ತಿ ಬರಲಿದೆ ಕಾದುನೋಡಬೇಕಿದೆ. ಕಳೆದ ವರ್ಷ ಪ್ರತಿ ಕ್ವಿಂಟಾಲ್ ಹತ್ತಿ 7,500 ರಿಂದ 9,200 ರ ವರೆಗು ಬಿಕರಿಯಾಗಿತ್ತು ಇದೀಗ ಪ್ರಾರಂಭವಾಗಿರುವ ವಹಿವಾಟಿನಲ್ಲಿ 9 ಸಾವಿರದಿಂದ 9,900 ರ ವರೆಗು ಬೆಲೆ ಬಂದಿದೆ.
ಬೀಜದ ಬೆಲೆ ಮತ್ತು ರೈತರ ದುಡಿಮೆ ಮಾರುಕಟ್ಟೆಯ ಬೆಲೆ ಆದರಿಸಿ ಖರ್ಚು ವೆಚ್ಚಗಳನ್ನು ಗಮನಿಸಿದರೆ ಕನಿಷ್ಟ ಕ್ವಿಂಟಾಲ್ ಹತ್ತಿಗೆ 11,000 ಬೆಲೆ ಬಂದರೆ ಲಾಭವಾಗಲಿದೆ ಎಂಬುದು ರೈತರ ಅಳಲಾಗಿದೆ.
ಮಂಗಳವಾರ ನಡೆದ ಹತ್ತಿ ಟೆಂಡರ್ ಪ್ರಕ್ರಿಯೆಯಲ್ಲಿ ಕನಿಷ್ಟ ದರ 9369 ಸಿಕ್ಕರೆ ಗರಿಷ್ಠ 9869 ದಕ್ಕಿದಂತಾಗಿದೆ. ಸರಾಸರಿ 9751. ಮಂಗಳವಾರ 184 ಅಂಡಿಗೆ (441 ಕ್ವಿಂಟಾಲ್) ಹತ್ತಿ ಟೆಂಡರ್ ಪ್ರಕ್ರಿಯೆಗೆ ಮಾರುಕಟ್ಟೆ ಪ್ರವೇಶಿಸಿತ್ತು.

ಈ ವರ್ಷ ಹತ್ತಿ ಬೆಳೆದ ವ್ಯಾಪ್ತಿ ಪ್ರದೇಶವು ಕಡಿಮೆ ಇದೆ. ಸುಮಾರು 40 ರಿಂದ 60 ಹೆಕ್ಟೇರ್ ಹತ್ತಿ ಬೆಳೆಯುತ್ತಿದ್ದ ತಾಲೂಕಿನಲ್ಲಿ ಈ ವರ್ಷ ಕೇವಲ 20 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಬೀಜದ ಕೊರತೆಯಾಗಿದೆ ಈ ಹಿನ್ನೆಲೆಯಲ್ಲಿ ಹತ್ತಿ ಪ್ರಮಾಣ ಕಡಿಮೆಯಾಗಿದೆ ಹಾಗು ಸಕಾಲದಲ್ಲಿ ಮಳೆ ಬಾರದಿರುವುದು ಸಹ ಕಾರಣವಾಗಿದೆ.
ನಾಗರಾಜ್ ನಾಯ್ಕ್
ತಾಲೂಕು ಸಹಾಯಕ ಕೃಷಿ ನಿರ್ದೇಶಕ


ಈ ಬಾರಿಯ ಹತ್ತಿ ವಹಿವಾಟಿನಲ್ಲಿ ಹತ್ತಿಯ ಪ್ರಮಾಣ ಕಡಿಮೆಯಾಗಬಹುದೆಂದು ಅಂದಾಜಿದೆ ಕಾರಣ ಮಳೆ ಕೈ ಕೊಟ್ಟಿದ್ದು ಪ್ರಮುಖವಾಗಲಿದೆ. ಯಲ್ಲಾಪುರ ತಾಲೂಕಿನಲ್ಲಿ ಕಿರವತ್ತಿ ಮದನೂರು ಮತ್ತೆ ಕೆಲವು ಭಾಗದಲ್ಲಿ ಹತ್ತಿ ಬೆಳೆಯಲಾಗುತ್ತಿದ್ದು ಟೆಂಡರ್ ಪ್ರಕ್ರಿಯೆಯಲ್ಲಿ ರೈತರು ಹುಮ್ಮಸ್ಸಿನಿಂದ ಪಾಲ್ಗೊಳ್ಳಲು ಉತ್ತಮ ಬೆಲೆ ಬರಬೇಕಿದೆ ಆಗ ರೈತರ ಮೊಗದಲ್ಲಿ ಸಂತಸ ಕಾಣಲಿದ್ದು ಮುಂದಿನ ಕೃಷಿ ಚಟುವಟಿಕೆಗೆ ಸ್ಪೂರ್ತಿ ಬರಲಿದೆ.
ಹತ್ತಿ ವ್ಯಾಪಾರಿಗಳಾದ ಶ್ರೀಕೃಷ್ಣ ಟ್ರೆಡಸ್೯ ನ ಮಾಕು ಸೋನು ಕೊಕರೆ ಮತ್ತು ಸಿದ್ದಿ ವಿನಾಯಕ ಟ್ರೇಡಸ್೯ನ ಶೇಖರ್ ಶೇಟ್ ಹೇಳಿದರು..

ಹತ್ತಿ ಪ್ರಮಾಣ ಕಡಿಮೆಯಾಗಲು ಮಳೆ ಪ್ರಮುಖ ಕಾರಣವಾಗಿದೆ ಈ ಹಿನ್ನೆಲೆಯಲ್ಲಿ ಹತ್ತಿ ಬೆಳೆಯುವ ಪ್ರದೇಶವೆಲಚಲ ಈ ಬಾರಿ ಜೋಳ ಬೆಳೆಯಲಾಗಿದೆ. ಕಳೆದ ಹಂಗಾಮಿನಲ್ಲಿ ದೊರೆತ ಬೆಲೆ ಈ ಬಾರಿ ಏನೇನು ಸಾಲುವುದಿಲ್ಲ ಕನಿಷ್ಟ 11 ರಿಂದ 12 ಸಾವಿರ ಪ್ರತಿ ಕ್ವಿಂಟಾಲ್ ಗೆ ಲಭಿಸಿದರೆ ರೈತರಿಗೆ ಅನುಕೂಲವಾಗಲಿದೆ.
ರಾಜರಾಮ ನಿವೃತ್ತಿ ಯಾದವ್
ಬೈಲಂದೂರು ರೈತ
Prathidvani Yellapura