Breaking News

ಯಲ್ಲಾಪುರ ತಾಲೂಕಿನ ನಿಸರ್ಗ ಸ್ವರ್ಗ ಸೂರ್ಯಕಲ್ಯಾಣಿ ಗುಡ್ಡದಲ್ಲಿ ಸಾಹಿತ್ಯ ಸಂಭ್ರಮ – ಇತಿಹಾಸ ಸೃಷ್ಟಿ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಸೂರ್ಯಕಲ್ಯಾಣಿ ಗುಡ್ಡದ ಮೇಲೆ ನಿಸರ್ಗ ಮಡಿಲಲ್ಲಿ ಚಾರಣ , ಉಪನ್ಯಾಸ ,ಕವಿಗೋಷ್ಟಿ , ಕವನವಾಚನ
ಪ್ರತಿಧ್ವನಿ ಯಲ್ಲಾಪುರ – ಯಲ್ಲಾಪುರ ತಾಲೂಕಿನ ಮಲವಳ್ಳಿ ಪಂಚಾಯತ ವ್ಯಾಪ್ತಿಯ ಸುಂದರ ನಿಸರ್ಗ ರಮಣೀಯ ಸೂರ್ಯಕಲ್ಯಾಣಿ ಗುಡ್ಡದ ತುದಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮತ್ತು ಮಾತೃ ಸೇವಾ ಪ್ರತಿಷ್ಟಾನ ವತಿಯಿಂದ ವಿಶೇಷವಾದ ಚಾರಣ ಉಪನ್ಯಾಸ ಕವಿಗೋಷ್ಟಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ತಾಲೂಕಿನ ಸಾಹಿತ್ಯ ಕಾರ್ಯಕ್ರಮಗಳ ಇತಿಹಾಸದ ಪುಟದಲ್ಲಿ ಅಚ್ಚಳಿಯದ ನೂತನ ದಾಖಲೆ ಬರೆದಿದ್ದಾರೆ.


ದಾಸ ಸಾಹಿತ್ಯ ಮತ್ತು ವ್ಯಾಸ ಸಾಹಿತ್ಯ ಮತ್ತು ಶರಣ ಸಾಹಿತ್ಯ ಎಲ್ಲವು ಆದ್ಯಾತ್ಮ ಲೋಕದ ಶ್ರೇಷ್ಠ ಸಂಪತ್ತಾಗಿದೆ. ಕನಕದಾಸರ ಜೀವನ ವೃತ್ತಾಂತವೆ ಒಂದು ಆದ್ಯಾತ್ಮ ಅಧ್ಯಯನ ಗ್ರಂಥವಾಗಿದೆ. ಅವರ ಸಾಹಿತ್ಯದಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತ ಶ್ರೀಕೃಷ್ಣನ ಮೇಲಿನ ಭಕ್ತಿಯನ್ನು ಸಾಕ್ಷಾತ್ಕಾರಗೊಳೊಸಿದ ಪರಿ ಅದ್ಬುತ ಎಂದು ಕನಕದಾಸರ ಬಗ್ಗೆ ಉಪನ್ಯಾಸ ನೀಡಿದ ಹರಿಕಥಾ ದಾಸರಾದ ಈಶ್ವರ ದಾಸ್ ಕೊಪ್ಪೇಸರ ಹೇಳಿದರು.

ಪ್ರತಿಧ್ವನಿ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ನಂತರ ಕವಿಗೋಷ್ಟಿ ನಡೆದು ಕವಿಗಳು ಕವನ ವಾಚನ ಮಾಡಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಬರಹಗಾರ ಡಿ.ಜಿ.ಭಟ್ ದುಂಡಿ ಮಾತನಾಡಿ ನಿಸರ್ಗದ ಮಡಿಲಲ್ಲಿ ಸಾಹಿತ್ಯ ಕಾರ್ಯಕ್ರಮದ ಆಯೋಜನೆ ಮಾಡಿರುವುದು ಅತ್ಯಂತ ಸಂತಸದ ವಿಚಾರ ಮತ್ತು ಕವಿಗಳಿಗೆ ಕವನ ವಾಚನಕ್ಕೆ ನಿಸರ್ಗ ಅತ್ಯಾಪ್ತವಾಗಿ ಪ್ರೇರಣೆ ನೀಡಲಿದೆ. ಕವನವಚನ ಮಾಡಿದ ಎಲ್ಲರ ಕವನಗಳು ಸುಂದರವಾಗಿ ಮೂಡಿಬಂದಿದೆ ಎಂದರು.


ಹಿರಿಯ ಬರಹಗಾರ ವಿಶ್ರಾಂತ ಪ್ರಾಂಶುಪಾಲ ಶ್ರೀರಂಗ ,ಕಟ್ಟಿ, ಸ್ಥಳೀಯ ಪ್ರಮುಖ ಸುಬ್ಬಣ್ಣ ಬೋಳ್ಮನೆ‌ ಮಾತನಾಡಿದರು. ನಾರಾಯಣ ಗೋಡೆ ಪಾಲ್, ಸುದರ್ಶನ್ ನಿವೃತ್ತ ತಹಶಿಲ್ದಾರ ಡಿ.ಜಿ.ಹೆಗಡೆ, ಶಿಕ್ಷಕ ರಾಜಶೇಖರ್, ಡಾ,ನವೀನ್ ಕುಮಾರ್ , ಜಿ.ಕೆ. ಭಟ್ , ರೇಖಾ ಭಟ್ ಮುಂತಾದವರಿದ್ದರು.

ಪತ್ರಕರ್ತರಾದ ನಾಗರಾಜ್ ಮದ್ಗುಣಿ, ವಿ.ಜಿ.ಗಾಂವ್ಕರ್ ಅಚ್ಚುತಕುಮಾರ ಮತ್ತು ಕೇಬಲ್ ನಾಗೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು


ರಮಾ ಗಾಂವ್ಕರ್ ಪ್ರಾರ್ಥಿಸಿದರು. ಶ್ರೀರಾಮ ಲಾಲಗುಳಿ ಸ್ವಾಗತಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಜಿ‌ಎಸ್.ಗಾಂವ್ಕರ್ ಪ್ರಾಸ್ತಾವಿಕ ನುಡಿದರು. ಶಿಕ್ಷಕ ಚಂದ್ರಶೇಖರ್ ನಿರೂಪಿಸಿದರು

ವಿಶೇಷ ಎಂದರೆ ಕಾಲೇಜ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದರು.ಸಂಜೆಯವರೆಗು ಕಾರ್ಯಕ್ರಮ ನಡೆಸಿ ಕೊನೆಯಲ್ಲಿ ಸೂರ್ಯಾಸ್ತ ಸೊಬಗನ್ನು ಕಣ್ತುಂಬಿಕೊಂಡರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *