Breaking News

ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಸಾರಥ್ಯ ಬದಲಾವಣೆ ಕಾರ್ಯಕರ್ತರಲ್ಲಿ ಬುಗಿಲೆದ್ದ ಅಸಮಧಾನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾದಿ ಬದಲಾದ ಸುದ್ದಿ ತಿಳಿಯುತ್ತಲೆ ಯಲ್ಲಾಪುರ ತಾಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಅಸಮದಾನ ಸ್ಪೋಟಗೊಂಡಿದೆ.
     ಅಸಮದಾನಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ ಕಳೆದ 17 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಟಾವಂತರಾಗಿ ಸೇವೆ ಸಲ್ಲಿಸುತ್ತಾ ಬಂದ ಡಿ.ಎನ್.ಗಾಂವ್ಕರ್ ಅವರನ್ನು ಕಳೆದ ಬಾರಿಯು ಪದಚ್ಯುತಗೊಳಿಸಿ ಏಕಾಏಕಿ ವಿ.ಎಸ್.ಭಟ್ ಅವರನ್ನು ನೇಮಕ ಮಾಡಲಾಗಿತ್ತು ಆಗಲು ಡಿ.ಎನ್.ಜಿ ಅವರನ್ನು ನೆಪಮಾತ್ರಕ್ಕು ಕೇಳಿರಲಿಲ್ಲ ಅಥವ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿರಲಿಲ್ಲ. ಜಿಲ್ಲಾಧ್ಯಕ್ಷ ಬೀಮಣ್ಣ ನಾಯ್ಕ್ ಗಮನಕ್ಕು ತಂದಿರಲಿಲ್ಲ. ಈಗಲೂ ಅದೇರಿತಿಯ ನಡೆ ಕಂಡು ಬಂದಿದ್ದು ಡಿ.ಎನ್.ಜಿ ಅವರಿಗೆ ಈ ವಿಚಾರದ ಮಾಹಿತಿ ಇಲ್ಲ ಕನಿಷ್ಟಪಕ್ಷ ಜಿಲ್ಲಾಧ್ಯಕ್ಷ ಸಾಯಿನಾಥ್ ಗಾಂವ್ಕರ್ ಅವರಿಗು ಮಾಹಿತಿ ಇಲ್ಲ ಸ್ಥಳೀಯ ಪದಾಧಿಕಾರಿಗಳಿಗು ಮಾಹಿತಿ ಇಲ್ಲದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಾಳಯದ ಎಲ್ಲಾ ಆಗು ಹೋಗುಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಆರ್.ವಿ.ದೇಶಪಾಂಡೆ ಅವರ ಗಮನಕ್ಕು ಬಾರದಂತೆ ಅವರಿಲ್ಲದ ವೇಳೆಯಲ್ಲಿ ಕೆಲವರ ಕುತಂತ್ರದಿಂದ ಈ ರೀತಿ ನಿರ್ಧಾರ ಮಾಡಲಾಗಿದೆ ಎಂಬುದು ಹಲವು ಕಾರ್ಯಕರ್ತರ ಅಪಾದನೆಯಾಗಿದೆ.
     ಬಲ್ಲ ಮೂಲಗಳ ಪ್ರಕಾರ ತಾಲೂಕಿನ ಶೇಕಡಾ 80 ರಷ್ಟು ಕಾರ್ಯಕರ್ತರಿಗೆ ಇದು ಅಸಮದಾನತಂದಿದ್ದು ಶೀಘ್ರದಲ್ಲಿ ಸುದ್ದಿಗೋಷ್ಟಿ ಮೂಲಕ ಅಸಮದಾನ ಹೊರಹಾಕುವ ಸಂಭವ ಇರುವುದಾಗಿ ತಿಳಿದು ಬಂದಿದೆ. ಅಧ್ಯಕ್ಷರನ್ನು ಬದಲಿಸುವುದೇ ಆದಲ್ಲಿ 17 ವರ್ಷಗಳಿಂದ ನಿಷ್ಕಲ್ಮಷರಾಗಿ ಸೇವೆ ಸಲ್ಲಿಸುತ್ತಾ ಬಂದ ಡಿ.ಎನ್.ಗಾಂವ್ಕರ್ ಅವರನ್ನು ಗೌರವದಿಂದ ಬೀಳ್ಕೊಡಬೇಕೆ ವಿನಃ ಈ ರೀತಿ ಹಿಂಬಾಗಿಲ ರಾಜಕಾರಣ ಸಲ್ಲದು ಎಂಬುದು ಹಲವರ ಅಭಿಪ್ರಾಯ ಆಗಿದೆ.
     ಎರಡನೆಯದಾಗಿ ಪಕ್ಷದ ಬ್ಲಾಕ್ ಅಧ್ಯಕ್ಷರ ಆಯ್ಕೆ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಪಡೆದು ಮಾಡಬೇಕಿದೆ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಳಸಿ ಬದಿಗೆ ಸರಿಸುವ ಸಂಪ್ರದಾಯ ಒಳ್ಳೆಯದಲ್ಲ ಅನೇಕ ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಯಾವುದೆ ಸ್ಥಾನ ಮಾನ ಅಪೇಕ್ಷಿಸದೆ ದುಡಿಯುತ್ತಿದ್ದು ಕನಿಷ್ಟ ನಮ್ಮ ಅಭಿಪ್ರಾಯಕ್ಕು ಬೆಲೆ ನೀಡದಿದ್ದರೆ ಹೇಗೆ ಎಂಬುದು ಅನೇಕ ಹಿರಿಯ ಕಾರ್ಯಕರ್ತರ ಅಭಿಪ್ರಾಯ ಆಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *