Breaking News

ಕಳಚಿಕೊಂಡ ಯಲ್ಲಾಪುರದ ಪಾಂಡಿತ್ಯದ ಹಿರಿಯ ಕೊಂಡಿ – ಅನಂತ ವೈದ್ಯ..

ಪ್ರತಿಧ್ವನಿ,ಯಲ್ಲಾಪುರ : ಅಂಕಣಕಾರರು, ಯಕ್ಷಗಾನ ಅರ್ಥಧಾರಿಗಳೂ ಆದ ಅನಂತ ಮಹಾಬಲೇಶ್ವರ ವೈದ್ಯ (70) ಜುಲೈ.24 ರಂದು ಇಹಲೋಕ ತ್ಯಜಿಸಿದರು. ಇದರೊಂದಿಗೆ ಯಲ್ಲಾಪುರ ಪಾಂಡಿತ್ಯದ ಹಿರಿಯ ಕೊಂಡಿಯೊಂದು ಕಳಚಿಕೊಂಡಾಂತಾಗಿ ಸರಸ್ವತ ಲೋಕಕ್ಕೆ ತಬಲಾರದ ನಷ್ಟವಾದಂತಾಗಿದೆ..

ಅವರು ಕೆಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು.
ದಿವಂಗತರು ಕನ್ನಡ ಮತ್ತು ಸಂಸ್ಕೃತ ಅಧ್ಯಯನಶೀಲರಾಗಿದ್ದು, ರಾಮಾಯಣ, ಭಾರತದ ಕುರಿತು ಸಾಕಷ್ಟು ಪ್ರಭುತ್ವ ಸಾಧಿಸಿದ್ದರು. ದಕ್ಷಿಣೋತ್ತರ ಕನ್ನಡದ ಯಕ್ಷಗಾನ ಆರ್ಥಧಾರಿಯಾಗಿ, ಸಾಹಿತ್ಯ ರತ್ನ ಬಿರುದು ಪಡೆದು ಯಕ್ಷಗಾನ' ಎಂಬ ಮಾಸಪತ್ರಿಕೆಯ ಸಂಪಾದಕರಾಗಿ ಪ್ರಕಟಿಸಿದ್ದರು.ಜ್ಞಾನಯಜ್ಞ, ಪಾದುಕಾ ಪ್ರಧಾನ’ , ಮುಂತಾದ ಯಕ್ಷಗಾನ ಕೃತಿಗಳನ್ನು ರಚಿಸಿದ್ದರು. ಶ್ರೀಕೃಷ್ಣ ಸಂಧಾನವನ್ನು ಮರು ಮುದ್ರಣ ಮಾಡಿ ವಿಮರ್ಶಕರಾಗಿ ಗುರುತಿಸಿಕೊಂಡ ಅವರು, ಶೇಣಿ ಗೋಪಾಲಕೃಷ್ಣ ಭಟ್ಟರ ಚಿಂತನೆಗಳನ್ನು ಸಂಗ್ರಹಿಸಿ ಜ್ಞಾನಯಜ್ಞ' ಎಂಬ ಪುಸ್ತಕವನ್ನು ಪ್ರಕಟಿಸಿದ್ದರು. ಕೆಲವು ವರ್ಷಗಳ ಕಾಲ ಯಲ್ಲಾಪುರ ಸ.ಪ್ರ.ದ ಕಾಲೇಜಿನ ಉಪನ್ಯಾಸಕರಾಗಿ, ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ ಹಲವು ದಿನಪತ್ರಿಕೆಗಳಲ್ಲಿ ಅಂಕಣ ಬರಹಗಳು ಪ್ರಕಟವಾಗುತ್ತಿದ್ದವು. ಮೂಲತಹ ಅಂಕೋಲಾ ತಾಲೂಕಿನ ವೈದ್ಯ ಹೆಗ್ಗಾರಿನ ಅವರು ಯಲ್ಲಾಪುರಕ್ಕೆ ಬಂದು ಪ್ರಕಾಶ ಮುದ್ರಣಾಲಯ ಸ್ಥಾಪಿಸಿದ್ದರು. ಅವರು ಮಡದಿ, ಓರ್ವ ಮಗ, ಈರ್ವರು ಪುತ್ರಿಯರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಹೊನ್ನಾವರದ ಕೆರೆಮನೆ ಯಕ್ಷಗಾನ ಮಂಡಳಿಯಿಂದ ಶಂಭು ಹೆಗಡೆ ರಾಷ್ರೀಯ ನಾಟ್ಯೋತ್ಸವದ ಸಂದರ್ಭದಲ್ಲಿ ಗೌರವ ಸನ್ಮಾನ ದೊರೆತಿದೆ, ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಅವರಿಂದ ಹವ್ಯಕ ಸಾಧಕರೆಂದು, ಕ.ಸಾ.ಪ. ಯಲ್ಲಾಪುರದಿಂದ ಗೌರವ ಸನ್ಮಾನ, ಸಾವಣ್ಣ ಪ್ರಕಾಶನ ಬೆಂಗಳೂರು ಮತ್ತು ಉಡುಪಿ ಮತ್ತು ಭ್ರಹ್ಮಾವರ ಕ.ಸಾ.ಪ ದಿಂದನಿಷ್ಕಾಮ’ ಪ್ರಶಸ್ತಿ ನೀಡಿ ಸನ್ಮಾನ ಪಡೆದಿದ್ದರು.


ನಿಧನ ಹೊಂದಿದ ಸುದ್ದಿ ತಿಳಿದ ತಕ್ಷಣ ಶಾಸಕ ಶಿವರಾಮ ಹೆಬ್ಬಾರ, ಹಿರಿಯ ಚಿಂತಕ ಪ್ರಮೋದ ಹೆಗಡೆ, ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ, ಕರ್ನಾಟಕ ಬ್ರಾಹ್ಮಣ ಮಹಾಸಭಾ ತಾಲೂಕಾ ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮುಕ್ತಾ ಶಂಕರ, ಮಲೆನಾಡು ಕೃಷಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಹಿರಿಯ ಯಕ್ಷಗಾನ ಅರ್ಥಧಾರಿ ಎಂ.ಎನ್.ಹೆಗಡೆ ಹಳವಳ್ಳಿ, ನಿವೃತ್ತ ಪ್ರಾಚಾರ್ಯ ಬೀರಣ್ಣ ನಾಯಕ ಮೋಗಟಾ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ಮತ್ತಿತರರು ಅಂತಿಮ ದರ್ಶನ ಪಡೆದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *