

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ.
ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ಪರಿಸರ ಅರಣ್ಯ ರಕ್ಷಿಸಿ ಕಾಪಾಡಲು ಅರಣ್ಯ ಇಲಾಖೆ ಇದ್ದಂತೆ ಅದರ ಕಟಾವು ಮಾಡಲು ಕೆಲವು ಇಲಾಖೆಗಳು ಇವೆ ರಸ್ತೆಗಾಗಿ,ರೈಲ್ವೆಗಾಗಿ, ಅಭಿವೃದ್ಧಿ ಕಾರ್ಯಗಳಿಗಾಗಿ ಅರಣ್ಯ ನಾಶ ಅನಿವಾರ್ಯವಾಗುತ್ತದೆ ಇದರ ಬದಲಾಗಿ ಎಲ್ಲಾ ಇಲಾಖೆಗಳು ಸಾರ್ವಜನಿಕರು ಸಹ ತಮ್ಮ ಕೈಲಾದಷ್ಟು ಅರಣ್ಯ ರಕ್ಷಣೆಯಲ್ಲಿ ಸಹಕರಿಸಿ ಅರಣ್ಯ ಇಲಾಖೆಯ ಕಾರ್ಯದಲ್ಲಿ ಕೈ ಜೋಡಿಸಿ ಭವಿಷ್ಯದ ಪೀಳಿಗೆಗೆ ಅರಣ್ಯ ಉಳಿಸಿ ವರ್ಗಾಯಿಸಬೇಕಿದೆ. ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಟ್ರೀಪಾಕ್೯ ನಲ್ಲಿ ಅರಣ್ಯ ಇಲಾಖೆ ಯಲ್ಲಾಪುರ ವಿಭಾಗದಿಂದ ಆಯೋಜಿಸಿದ್ದ ವನಮಹೋತ್ಸವದಲ್ಲಿ ಗಿಡನೆಟ್ಟು ನೀರೆರೆದು ಉದ್ಘಾಟಿಸಿ ಸಸಿ ವಿತರಿಸಿ ಮಾತನಾಡಿದರು.

ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಾ ಅರಣ್ಯಕ್ಕೆ ಬೆಂಕಿ ಬಿದ್ದಿದ್ದನ್ನು ನಂದಿಸಲು ಹೋಗಿ ವಿದ್ಯುತ್ ಅವಘಡಕ್ಕೆ ಬಲಿಯಾದ ಜೂಜೆ ಸಿದ್ದಿ ಕುಟುಂಬಕ್ಕೆ ಅಂದು ನಾನು ನೀಡಿದ ಅಭಯದಂತೆ ಅರಣ್ಯ ಇಲಾಖೆಯ ನೌಕರರು ಸಂಗ್ರಹಿಸಿ ವತಿಯಿಂದ ಉ6 ಲಕ್ಷ ಮಾನವೀಯ ನೆರವು ನೀಡಿದ್ದು ಸಾರ್ಥಕ ಕಾರ್ಯವಾಗಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಸಸಿಗಳನ್ನು ಕೇವಲ ನೆಡುವುದು ಮಾತ್ರ ಆಗದೆ ಅವುಗಳನ್ನು ಕಾಪಾಡಿ ರಕ್ಷಿಸುವ ಕಾರ್ಯವು ಆಗಬೇಕಿದೆ ಇಲ್ಲವಾದಲ್ಲಿ ಗಿಡ ನೆಟ್ಟಿದ್ದಕ್ಕೆ ಅರ್ಥವಿರುವುದಿಲ್ಲ ಅರಣ್ಯ ಇಲಾಖೆಯ ಸಮಾಜಮುಖಿ ಕಾರ್ಯದಲ್ಲಿ ಎಲ್ಲರು ಸಹಕರಿಸಬೇಕಿದೆ ಎಂದು ಎಂ.ಎಲ್.ಸಿ ಶಾಂತರಾಮ ಸಿದ್ದಿ ಹೇಳಿದರು.ಅವರು ಸಹ ಗಿಡನೆಟ್ಟು ನೀರೆರೆದು ಸಸಿ ವಿತರಿಸಿದರು.

ವನಮಹೋತ್ಸವದ ಸಾರ್ಥಕ ಕಾರ್ಯಕ್ಕೆ ಸಾಕ್ಷಿಯಾಗಿ ಅರಣ್ಯ ಬೆಂಕಿ ನಂದಿಸುವ ಪ್ರುತ್ನದಲ್ಲಿ ವಿದ್ಯುತ್ ಅವಘಡಕ್ಕೆ ತುತ್ತಾದ ಜೂಜೆ ಸಿದ್ದಿ ಕುಟುಂಬಕ್ಕೆ ಇಲಾಖೆಯ ವತಿಯಿಂದ ಮಾನವೀಯ ನೆರವಾಗಿ 6 ಲಕ್ಷ ಮೊತ್ತವನ್ನು ಬಾಂಡ್ ರೂಪದಲ್ಲಿ ಕುಟುಂಬದ ಸದಸ್ಯರಿಗೆ ನೀಡಲಾಯಿತು.

ಸಸಿಗಳನ್ನು ನೆಡಲು ರೈತರು ಮತ್ತು ಸಾರ್ವಜನಿಕರಿಗೆ ಕೆಲವು ಸಸಿಗಳನ್ನು ವಿತರಿಸಲಾಯಿತು. ಅರಣ್ಯ ರಕ್ಷಣೆಯ ಪಣತೊಡುವ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಸಿ.ಸಿ.ಎಫ್ ವಸಂತ ರೆಡ್ಡಿ ಮತ್ತು ಡಿ.ಎಫ್.ಒ ಎಸ್.ಜಿ.ಹೆಗಡೆ ಯವರು ವನಮಹೋತ್ಸವ ಅಂಗವಾಗಿ ಗಿಡನೆಟ್ಟು ಜಂಟಿಯಾಗಿ ನೀರೆರೆದರು


ಇದಕ್ಕು ಮುನ್ನ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸ್ಯೋಧ್ಯಾನಕ್ಕೆ ಭೇಟಿ ಕೊಟ್ಟ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಎಂ.ಎಲ್.ಸಿ ಶಾಂತಾರಾಮ್ ಸಿದ್ದಿ ಅವರಿಗೆ ಸಿಸಿಎಫ್ ಮತ್ತು ಡಿ ಎಫ್ ಒ ಹೂಗುಚ್ಚ ನೀಡಿ ಸ್ವಾಗತಿಸಿದರು.

ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಗೌರವ ವಂದನೆ ಸಲ್ಲಿಸಿದರು. ಶಾಸಕ ಹೆಬ್ಬಾರ್ ಹಾಗು ಎಂ ಎಲ್ ಸಿ ಶಾಂತಾರಾಮ್ ಸಿದ್ದಿ ಗೌರವರಕ್ಷೆ ಸ್ವೀಕರಿಸಿ ಸೆಲ್ಯೂಟ್ ಹೊಡೆದು ಕೃತಜ್ಞತೆ ಸಲ್ಲಿಸಿದರು.

ಎಸಿಎಫ್ ಹಿಮವತಿ ಭಟ್, ಆರ್.ಎಫ್.ಓ ಗಳಾದ ಎಲ್.ಮಠ , ಶಿಲ್ಪಾ ನಾಯ್ಕ್ ಮಿರ್ಜಾನಕರ್, ಅಮಿತ್ ಚೌಹಾಣ್ ಹಾಗು ಡಿ.ಆರ್.ಎಫ್.ಒ ಗಳು ಅರಣ್ಯ ಇಲಾಖೆ ಕಚೇರಿ ಸಿಬ್ಬಂದಿಗಳು ಅರಣ್ಯ ಸಿಬ್ಬಂದಿಗಳು ಸಾರ್ವಜನಿಕರು ಗ್ರಾಮಾರಣ್ಯ ಸಮಿತಿಗಳು ಉಪಸ್ಥಿತರಿದ್ದರು.



ಶಿಕ್ಷಕ ಸುಧಾಕರ ನಾಯ್ಕ್ ನಿರೂಪಿಸಿ ಪ್ರತಿಜ್ಞಾ ವಿಧಿ ಬೋದಿಸಿದರು. ಎಸಿಎಫ್ ಹಿಮವತಿ ಭಟ್ಟ ವಂದಿಸಿದರು.
Prathidvani Yellapura