Breaking News

ರಾಸಾಯನಿಕ ಮುಕ್ತ ಮಲ್ಲಿಕ ಮಾವು ಅದರಕ್ಕು ಸಿಹಿ ಉದರಕ್ಕು ಸಿಹಿ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ ಯಲ್ಲಾಪುರ – ಹಣ್ಣುಗಳ ರಾಜ ಮಾವು ಸರ್ವರಿಗು ಪ್ರಿಯವಾದ ಹಣ್ಣು. ವರ್ಷಕ್ಕೊಮ್ಮೆ ಮಾವಿನ ರುಚಿ ಸವಿಯದವರಿಲ್ಲ ಮತ್ತು ಆ ವರ್ಷ ಮಾವು ತಿನ್ನದೆ ಹೋದರೆ ಏನನ್ನೋ ಕಳೆದುಕೊಂಡ ಅನುಭವವಾಗುತ್ತದೆ.

ತಾಲೂಕಿನ ಕಮ್ಮಾರಗದ್ದೆ ಕೃಷಿಕ ಯಾವುದೆ ರಾಸಾಯನಿಕ ಬಳಸದೆ ರುಚಿಭರಿತವಾದ ಮಲ್ಲಿಕಾ ಜಾತಿಯ ಮಾವಿನಹಣ್ಣು ಗಳನ್ನು ಮಾರುಕಟ್ಟೆಗೆ ತಂದು ಮಾರಿ ಎಲ್ಲರಿಗು ಮಾವಿನ ರುಚಿಯನ್ನು ಉಣಬಡಿಸುತ್ತಾ ಭಟ್ಟರ ತೋಟದ ಮಾವು ಎಂದೇ ಖ್ಯಾತಿ ಹೊಂದಿದೆ.

ಕಮ್ಮಾರಗದ್ದೆ  ಮಹಾಬಲೇಶ್ವರ ಭಟ್‌ ಅವರು ತಾಲೂಕಿನ ತೆರೆಗಾಳಿ ಎಂಬಲ್ಲಿ  ಸುಮಾರು ಐದು‌ ಎಕರೆ ಪ್ರದೇಶದಲ್ಲಿ ಮಲ್ಲಿಕ ಜಾತಿಯ ಮಾವಿನ ಗಿಡಗಳನ್ನು ಬೆಳೆಸಿ ಕಳೆದ  ಹದಿನೈದು ವರ್ಷಗಳಿಂದ ಮಾವಿನ ಹಣ್ಣಿನ ಪ್ರಿಯರ  ಆಸೆ ತೀರಿಸುತ್ತಿದ್ದಾರೆ. ವಿಶೇಷವೆಂದರೆ ಪಟ್ಟಣಕ್ಕೆ ವಿವಿಧ ಜಾತಿಯ ರುಚಿ ಭರಿತವಾದ ಮಾವಿನ ಹಣ್ಣುಗಳು ರಾಜ್ಯದ ವಿವಿಧ ಭಾಗಗಳಿಂದ ಮತ್ತು ಹೊರ ರಾಜ್ಯಗಳಿಂದ ಮಾರುಕಟ್ಟೆಗೆ ಬಂದು ಮಾವು ಪ್ರಿಯರು ಕೊಂಡು ತಿಂದು ಸೀಸನ್ ಮುಗಿಯುತ್ತ ಬಂದರು ಭಟ್ಟರ ತೋಟದ ಮಲ್ಲಿಕಾ ಮಾವಿನ ಹಣ್ಣು ತಿನ್ನದೆ  ಸೀಸನ್ ಮುಗಿಯದು ತೃಪ್ತಿಯಾಗದು. ಇದಕ್ಕಾಗಿ ಹೊರರಾಜ್ಯದಿಂದಲು ಜನ ಬಂದು ಭಟ್ಟರ ಮನೆಗೆ ಭೇಟಿ ನೀಡಿ ಮಾವಿನ ಹಣ್ಣುಕೊಂಡೊಯ್ಯುತ್ತಾರೆ.

ಭಟ್ಟರ ವಿಶೇಷವೆಂದರೆ ತಮ್ನ ತೋಟದ ಮಾವಿನ ಹಣ್ಣನ್ನು ಹೋಲ್ ಸೇಲ್ ದರದಲ್ಲಿ ಎಷ್ಟೇ ಪ್ರಮಾಣದಲ್ಲಿ ಮಾರಾಟ ಮಾಡಿದರು ತಮ್ಮ ಕಾರಿನಲ್ಲಿ 8 ರಿಂದ 10 ಟ್ರೇ ಗಳಲ್ಲಿ ತುಂಬಿಕೊಂಡು ಪಟ್ಟಣ ಸಂಕಲ್ಪ ಸಮೀಪ ಬಳ್ಳಾರಿ- ಕಾರವಾರ ರಾಷ್ಟ್ರೀಯ ಹೆದ್ದಾರಿ ಅಂಚಿಗೆ ಗ್ರಾಹಕರಿಗೆ ಕೆಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಅವರೆ ಹೇಳುವಂತೆ ಹೋಲ್ ಸೇಲ್ ದರದಲ್ಲಿ ಎಷ್ಟೇ ಲೋಡ್ ಮಾವು ಮಾರಿದರು ಹಣಗಳಿಸಬಹುದೆ ಹೊರತು ನೇರವಾಗಿ ಗ್ರಾಹಕರ ಅಭಿಪ್ರಾಯ ತಿಳಿಯಲು ಸಾದ್ಯವಾಗುವುದಿಲ್ಲ

ಮತ್ತು ಕೆಮಿಕಲ್ ಮುಕ್ತ ಒಣ ಹುಲ್ಲಿನಲ್ಲಿಟ್ಟು ಹಣ್ಣಾಗಿಸುವುದು ಇವೆಲ್ಲ ಉತ್ತಮ ಅಂಶಗಳನ್ನು ಜನರಿಗೆ ತಿಳಿಸಲು ಆಗುವುದಿಲ್ಲ. ಕಷ್ಟವಾದರು ಇಷ್ಟಪಟ್ಟು ರಸ್ತೆ ಬದಿಯಲ್ಲಿ ನಿಂತು ಮಾವಿನ ಹಣ್ಣನ್ನು ಮಾರಾಟ ಮಾಡುತ್ತೇನೆ ಎನ್ನುತ್ತಾರೆ  ಮಹಾಬಲೇಶ್ಬರ ಭಟ್ಟ ಕಮ್ಮಾರ ಗದ್ದೆ.

ಸದ್ಯ ಮಾವಿನಹಣ್ಣು ಕೆ‌ಜಿಗೆ 80 ರುಪಾಯಿಗೆ ಹೋಲ್ ಸೇಲ್ ನಲ್ಲಿ ಮಾರಾಟ ಮಾಡುತ್ತಿದ್ದು ಮಾರುಕಟ್ಟೆಯಲ್ಲಿ100 ರುಪಾಯಿಗೆ ಬಿಕರಿಯಾಗುತ್ತಿದೆ. ಪಟ್ಟಣದ ಬಾಳೆಕಾಯಿ,ತೆಂಗಿನಕಾಯಿ ಹಾಗು ಪೂಜಾ ಸಾಮಾಗ್ರಿಗಳ ಅಂಗಡಿಗೆ ಹೆಸರಾದ ದೊಡ್ಡಬೇಣ ನಾರಾಯಣ ಅವರ ಅಂಗಡಿಯಲ್ಲಿ ಭಟ್ಟರ ತೋಟದ ರುಚಿಯಾದ ಕೆಮಿಕಲ್ ಮುಕ್ತ ಮಲ್ಲಿಕ ಮಾವಿನ ಹಣ್ಣು ದೊರೆಯುತ್ತದೆ.


     ಕಳೆದ ಹಲವು ವರ್ಷಗಳಿಂದ ಮಾವಿನಹಣ್ಣು ವ್ಯಾಪಾರ ಮಾಡುತ್ತೇನೆ. ಹದಿನೈದು ವರ್ಷಗಳ ಬೆಳೆದ ಮರಗಳಲ್ಲಿ ಹಣ್ಣಾದ ಮಾವುಗಳನ್ನು ಮತ್ತಷ್ಟು ಹಣ್ಣಾಗಿಸಲು ಕೊಯ್ದು ಒಣ ಹುಲ್ಲಿನಲ್ಲಿ ಹಣ್ಣಾಗಿಸಲಾಗುತ್ತದೆ.ಆರೋಗ್ಯಕ್ಕೆ ಮಾರಕವಾದ ರಾಸಾಯನಿಕ ಬಳಸದೆ  ಹಣ್ಣಾಗಿಸುವುದರಿಂದ ರುಚಿಯು ಹೆಚ್ಚು ಮತ್ತು ಬಾಳಿಕೆಯು ಹೆಚ್ಚಿರುತ್ತದೆ.ಪಟ್ಟಣದಾದ್ಯಂತ ಮಾವಿನ ವ್ಯಾಪಾರ ಕಡಿಮೆಯಾಗುತ್ತಲೆ ನಮ್ಮ ತೋಟದ ಮಲ್ಲಿಕಾ ಮಾವಿನಹಣ್ಣು ವ್ಯಾಪಾರ ಪ್ರಾರಂಭವಾಗುತ್ತದೆ. ಗ್ರಾಹಕರು ಬಯಸಿ ಬಂದು ನಮ್ಮ ಬಳಿ ಮಾವು ಖರೀದಿಸುತ್ತಾರೆ ಅದೇ ನನಗೆ ಸಂತೋಷ ನೀಡಿದೆ.
ಮಹಾಬಲೇಶ್ವರ ಭಟ್ಟ, ಕಮ್ಮಾರ ಗದ್ದೆ, ಯಲ್ಲಾಪುರ


  ಪ್ರತಿ ವರ್ಷ ಭಟ್ಟರ ತೋಟದ ಮಾವು ಬಂತೆ ಎಂದು ಪ್ರತಿಯೊಬ್ಬ ಮಾವಿನ ಪ್ರಿಯ ಗ್ರಾಹಕರು ನಮ್ಮ ಅಂಗಡಿಗೆ ಬಂದು ಕೇಳುತ್ತಾರೆ. ಬೇರೆ ಮಾವುಗಳನ್ನು ಒಂದು ಎರಡು ತಿನ್ನಬಹುದು ಆದರೆ ಭಟ್ಟರ ತೋಟದ ಮಾವು ಒಂದರ ನಂತರ ಒಂದು ತಿನ್ನತ್ತಲೆ ಇರಬೇಕು ಎನ್ನಿಸುತ್ತದೆ ಎನ್ನುತ್ತಾರೆ. ನಾನು ಅವರ ಬಳಿ ಹೋಲ್ ಸೇಲ್ ದರದಲ್ಲಿ ತಂದು ಗ್ರಾಹಕರಿಗೆ ತಂದು ಮಾರಾಟ ಮಾಡುತ್ತೇನೆ‌ ಹೆಚ್ಚು ವೇಸ್ಟ್ ಆಗುವುದಿಲ್ಲ ಮತ್ತು ಗ್ರಾಹಕರ ಬೇಡಿಕೆ ಹೆಚ್ಚು ಬೇಗನೆ ಮಾರಾಟವಾಗಿಬಿಡತ್ತೆ. ಭಟ್ಟರ ತೋಟದ ಮಾವಿನಿಂದ ಎಂದು ಲುಕ್ಸಾನ ಆಗಿಲ್ಲ.
ನಾರಾಯಣ ದೊಡ್ಡಬೇಣ, ಹಣ್ಣಿನ ವ್ಯಾಪಾರಿ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *