

ಪ್ರತಿಧ್ವನಿ,ಯಲ್ಲಾಪುರ: ಬಹುತೇಕ ಸರ್ಕಾರಿ ಇಲಾಖೆಗಳು ಅಥವಾ ಖಾಸಗಿ ಸಂಸ್ಥೆಗಳಲ್ಲಿ ದುಡಿದು ನಿವೃತ್ತಿ ಹೊಂದುವ ವೇಳೆಗೆ ಅವರ ಸೇವೆ ಸ್ಮರಿಸಿ ಗೌರವಿಸಿ ಬೀಳ್ಕೊಡುವುದು ವಾಡಿಕೆ. ಅಂತೆಯೆ ಜೀವವಿರುವ ಮನುಜ ಸೇವೆ ಯಷ್ಟೆ ನಿರ್ಜೀವಿ ವಾಹನದ ಸೇವೆಯು ಅಷ್ಟೆ ಪ್ರಾಮುಖ್ಯತೆ ಪಡೆದಿದೆ ಎಂದು ಯಲ್ಲಾಪುರದ ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ವಿಭಾಗದ 22 ವರ್ಷದ ಸೇವೆಗೆ ಗೌರವಿಸಿ ಬೀಳ್ಕೊಟ್ಟ ಭಾವನಾತ್ಮಕ ಸನ್ನಿವೇಶಕ್ಕೆ ಜಿಲ್ಲಾ ಪಂಚಾಯತ ಕಚೇರಿ ಸಾಕ್ಷಿಯಾಯಿತು.
ಸರ್ಕಾರಿ ಆದೇಶದಂತೆ15 ವರ್ಷಗಳ ಹಿಂದಿನ ಯಾವುದೆ ವಾಹನಗಳನ್ನು ಯಾವುದೆ ಇಲಾಖೆಗಳು ಬಳಸದೆ ನಿರಪಯುಕ್ತ ಎಂದು ತೋರಿಸಬೇಕಿದೆ ಅದರನ್ವಯ ಯಲ್ಲಾಪುರದ ಜಿಲ ಪಂಚಾಯತ ಇಂಜನಿಯರಿಂಗ್ ವಿಭಾಗದಲ್ಲಿ ಕಳೆದ 22 ವರ್ಷಗಳಿಂದ ಇಲಾಖೆಯ ಸೇವೆ ಸಲ್ಲಿಸಿದ ಮಹೀಂದ್ರ ಮಾರ್ಷಲ್ ವಾಹನವನ್ನು ನಿರುಪಯುಕ್ತಗೊಳಿಸಬೇಕಿದ್ದು ಇದುವರೆಗು ಸೇವೆ ನೀಡಿದಕ್ಕಾಗಿ ಎ.ಇ.ಇ ಅಶೋಕ್ ಭಂಟ್ ನೇತೃತ್ವದಲ್ಲಿ ಇದೇ ವಾಹನಕ್ಕೆ ಚಾಲಕರಾಗಿ ಸೇವೆನೀಡಿದವರು ಸೇರಿದಂತೆ ಇಲಾಖೆ ಸಿಬ್ಬಂದಿಗಳು ಪೂಜೆ ಸಲ್ಲಿಸಿ ಕೃತಜ್ಞತೆ ತೋರಿದ್ದಾರೆ. ಇದರೊಂದಿಗೆ ಜೀವವಿರುವ ಮನುಷ್ಯನ ಸೇವೆಗೆ ಮಾತ್ರವಲ್ಲ ನಿರ್ಜೀವದ ವಾಹನಗಳ ಸೇವೆಯು ಸಹ ಶ್ಲಾಘನೀಯವಾದುದು ಎಂಬುದನ್ನು ತೋರಿಸಿದಂತಾಗಿದೆ. ಇಂತಹ ಭಾವನಾತ್ಮಕ ನಡೆಗೆ ತಾಲೂಕಿನ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.

Prathidvani Yellapura