
ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪ ಒಂಟ್ಮನೆ ಎಂಬಲ್ಲಿ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ಮೇಲೆ ಬೈಕ್ ಅಪಘಾತವಾಗಿದ್ದು ಬೈಕಿನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಂಬೂರು ಮೂಲದ ಸೂರಜ್ ಪಾಲನಕರ್ ಮತ್ತು ಕಿರವತ್ತಿ ಮೂಲದ ಮಂಜುನಾಥ ವೀರಭದ್ರ ಬಡಿಗೇರ ಮೃತ ದುರ್ದೈವಿಗಳಾಗಿದ್ದು ಫೋಟೋ ಶೂಟ್ಗಾಗಿ ಯಲ್ಲಾಪುರಕ್ಕೆ ಬಂದವರು ಮುಗಿಸಿ ವಾಪಸ್ ತೆರಳುವ ವೇಳೆ ಕಿರವತ್ತಿ ಸಮೀಪದ ಒಂಟ್ಮನೆ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದಿದ್ದಾರೆ.

ಅದೇ ಸಮಯಕ್ಕೆ ಲಾರಿಯೊಂದು ಹರಿದ ಪರಿಣಾಮ ಗಂಭೀರ ಗಾಯಗಳಾಗಿ ತಲೆಯ ಮೆದುಳೆಲ್ಲಾ ಹೊರಬಂದು ಸ್ಥಳದಲ್ಲೇ ಇಬ್ಬರೂ ಯುವಕರು ಮೃತಪಟ್ಟಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಇನ್ನೂ ಹೆಚ್ಚಿನ ಮಾಹಿತಿ ಪೊಲೀಸರಿಂದ ತಿಳಿಯಬೇಕಿದೆ.
ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು ಮುಂದಿನ ತನಿಖೆ ಕೈಗೊಂಡಿರುತ್ತಾರೆ.
Prathidvani Yellapura