Breaking News

ಲೇಟಾಗಿ ಬಂದು ರೇಟಾದ ಮಾವು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಹಣ್ಣುಗಳ ರಾಜ ಮಾವು, ವರ್ಷಕ್ಕೊಮ್ಮೆ ಮಾರುಕಟ್ಟೆ ಪ್ರವೇಶಿಸಿ ಮಾವಿನ ಹಣ್ಣಿ ಪ್ರಿಯರಿಗೆ ನಾಲಿಗೆಗೆ ರುಚಿ ಹತ್ತಿಸುತ್ತದೆ. ಈ ಬಾರಿ ಅದೇಕೋ ಮಾರುಕಟ್ಟೆಗೆ ಮಾವು ತಡವಾಗಿ ಬಂದಿದ್ದು ಹೆಚ್ಚಿನ ದರಕ್ಕೆ ಬಿಕರಿಯಾಗುತ್ತಿದೆ.
ಘಟ್ಟದ ಕೆಳಗಿನ ಕರೆ ಈಶಾಡ ಮಾವು , ಘಟ್ಟದ ಮೇಲಿನವರಿಗೆ ಅತ್ಯಂತ ಪ್ರಿಯವಾದುದು. ಸದ್ಯ ಮಾವಿನ ಮಾರುಕಟ್ಟೆಯಲ್ಲಿ ಆಪೂಸ್, ಮಲ್ಲಿಕಾ, ಸೆಂದೂಲಾ, ಕಸಿ ಮುಂತಾದ ಜಾತಿಯ ಮಾವು ಮಾರಾಟವಾಗುತ್ತಿದ್ದು ದರ ಹೆಚ್ಚಿದೆ.

ಉತ್ತಮ ಗಾತ್ರ, ಗುಣಮಟ್ಟದ ಕರೆ ಈಶಾಡ ಡಜನ್‌ಗೆ 500 ರಿಂದ 800 ರವರೆಗೂ , ಮಲ್ಲಿಕಾ ಕೆಜಿಗೆ 150 ರಿಂದ 200 ಕ್ಕೆ ಮಾರಾಟವಾಗುತ್ತಿದೆ. ಮಾವಿನಪ್ರಿಯರಿಗೆ ದರದ ಚಿಂತೆಯಿಲ್ಲ, ವರ್ಷಕ್ಕೊಮ್ಮೆ ಮಾವು ಸವಿಯಲೇಬೇಕೆಂದು ಕೊಂಡುಕೊಳ್ಳುತ್ತಿದ್ದಾರೆ.


ಈ ವರ್ಷ ಎಲ್ಲೆಡೆ ಮಾವಿನ ಫಸಲು ಕಡಿಮೆಯಾಗಿದ್ದು ದರ ಹೆಚ್ಚಳಕ್ಕೆ ಕಾರಣವಾಗಿದೆ. ಹಾಗೂ ಹೂ ಬರುವ ಸಮಯದಲ್ಲಿ ಅನೇಕ ಕಡೆ ಅಕಾಲಿಕ ಮಳೆ, ಆಲಿಕಲ್ಲಿನ ಮಳೆ ಬಿದ್ದ ಕಾರಣವೂ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ವರ್ಷಕ್ಕೊಮ್ಮೆ ಮಾವಿನ ಸಿಹಿ ಸವಿಯಲೇ ಬೇಕು, ಅದರಲ್ಲೂ ಕರೆ ಈಶಾಡಿನ ಸವಿ ನಾಲಿಗೆ ಮೇಲೆ ತೇಲಲೇಬೆಕೆಂಬುದು ಮಾವಿನಪ್ರಿಯರ ಮಾತಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪಟ್ಟಣ ಸಮೀಪದ ಅರಣ್ಯದಲ್ಲಿ ಶ್ರೀಗಂಧ ಚೋರರ ಕರಾಮತ್ತು ಗಂಧದ ಮರ ಕಡಿದ ಕಳ್ಳರು.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸಮೀಪದಲ್ಲಿರುವ ನಾರಾಯಣಪುರ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಕಳ್ಳರು ತಮ್ಮ ಕೈಚಳಕ ತೋರಿದ್ದು ಗುಣಮಟ್ಟದ ಮತ್ತು …

Leave a Reply

Your email address will not be published. Required fields are marked *