
ಶಿಕ್ಷಣಕ್ಕೆ ವೈಟಿಎಸ್ಎಸ್ ಉತ್ತಮ ಆಯ್ಕೆ ಏಕೆ ??? >> ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ವಿದ್ಯಾ ಸಂಸ್ಥೆ >> ದೀರ್ಘಕಾಲದ ವಿದ್ಯಾದಾನಗೈದ ಸಾತ್ವಿಕ ಇತಿಹಾಸ. >> ಜಾತಿ,ಮತ,ಧರ್ಮ,ಅಂತಸ್ತು ಭೇದವಿರದ ಸರ್ವಜನಾಂಗದ ವಿದ್ಯಾಕಾಶಿ. >> ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಹೊರಗಡೆ ಸಿಗುವ ಉನ್ನತ ಸ್ಥಾಯಿಯ ಗೌರವ. >> ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಯಲ್ಲು ಸಂಸ್ಥೆ ಮುಂಚೂಣಿಯಲ್ಲಿ. >> ಸಂಸ್ಕಾರವಂತ ಶಿಕ್ಷಣ ಕಲಿಕೆ ಮಾತ್ರವಲ್ಲದೆ ಸಾಂಸ್ಕೃತಿಕ ಸೊಬಗು ಪಸರಿಸುವ ಶಾಲೆ. >> ಉತ್ತಮ ಗಾಳಿ ಬೆಳಕು ವ್ಯವಸ್ಥೆ , ಶಬ್ದ ಮಾಲಿನ್ಯ ಆಗದಂತೆ ಮುಂಜಾಗ್ರತೆ, >> ಗುಣಮಟ್ಟದ ಕಂಪ್ಯೂಟರ್ ಕಲಿಕಾ ವ್ಯವಸ್ಥೆ, ಪ್ರಯೋಗಾಲಯ, ಗ್ರಂಥಾಲಯ ಇನ್ನು ಹಲವು ಉತ್ಕೃಷ್ಡ ವ್ಯವಸ್ಥೆ. >> ಪ್ರೀ ಕೆಜಿ, ಎಲ್.ಕೆ.ಜಿ, ಯು,ಕೆ,ಜಿ, ಪ್ರೈಮರಿ , ಪ್ರೌಡಶಾಲೆ, ಕಾಲೇಜು ಎಲ್ಲಾ ಹಂತದಲ್ಲು ಸುಭದ್ರ ವ್ಯವಸ್ಥೆ ಕಲ್ಪಿಸಲು ಪಣತೊಟ್ಟ ಕಟಿಬದ್ದ ಆಡಳಿತ ಮಂಡಳಿ, ಉತ್ತಮ ನಿರ್ವಹಣೆಯ ಕಾಲೇಜು ಪ್ರಾಂಶುಪಾಲರು, ಮುಖ್ಯೋಪಾಧ್ಯರು, ಆಂಗ್ಲ ಮಾಧ್ಯಮ ವಿಭಾಗದ ಹೆಡ್ ಮಿಸ್, ಉತ್ತಮ ಭೋಧಕ, ಭೋಧಕೇತರ ಹಾಗು ಉತ್ತಮ ಪರಿಸರ ವಾತಾವರಣ ಕಾಪಾಡುವ ಸಮರ್ಥವಾದ ಡಿ.ಗ್ರೂಪ್ ಸಿಬ್ಬಂದಿಗಳ ಶ್ರಮ ವೈಟಿಎಸ್ಎಸ್ ಪ್ರತಿಷ್ಟೆಯ ಶಿಖರಕ್ಕೆ ಗರಿ ಮೂಡಿಸಿದ್ದಾರೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ-ಯಲ್ಲಾಪುರ ತಾಲೂಕಿನ ವಿದ್ಯಾಕಾಶಿ ಎಂದೇ ಖ್ಯಾತಿ ಪಡೆದು ಶಿಕ್ಷಣ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿ ಪ್ರೋಷಕ ಸ್ನೇಹಿ ವಿದ್ಯಾಸಂಸ್ಥೆಯಾಗಿ ಜನಮಾನಸದಲ್ಲಿ ಮುಂಚೂಣಿಯಲ್ಲಿರುವ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆ 2023-24 ನೆ ಸಾಲಿನ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.


ಜಿಲ್ಲೆಯ ಅತ್ಯಂತ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಸಾಲಿಗೆ ವೈಟಿಎಸ್ಎಸ್ ಸಂಸ್ಥೆ ಸೇರುತ್ತದೆ. ವಿಶೇಷವಾಗಿ ಯಲ್ಲಾಪುರ ತಾಲೂಕಿನಾದ್ಯಂತ ಪ್ರತಿ ಮನೆಯಲ್ಲು ಸಹ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯೆ ಪಡೆದವರಿದ್ದಾರೆ. ನಡೆ ನುಡಿ ಸಂಸ್ಕಾರಗಳನ್ನು ಗಮನಿಸಿದರೆ ಸಾಕು ಆತ ಅಥವ ಆಕೆ ವೈಟಿಎಸ್ಎಸ್ ನಲ್ಲಿ ಶಿಕ್ಷಣ ಪಡೆದಿದ್ದಾರೆಂದು ತಿಳಿಯ ಬಹುದಾಗಿದೆ.


68 ಸುದೀರ್ಘ ವರ್ಷಗಳಿಂದ ವಿದ್ಯಾದಾನ ನೀಡುತ್ತಿರುವ ಸಂಸ್ಥೆ ಪ್ರಾರಂಭಿಸಿದ್ದು ಹಣ ಗಳಿಸುವುದಕ್ಕಾಗಿ ಅಲ್ಲ ಬದಲಾಗಿ ಸಮಾಜಕ್ಕೆ ವಿದ್ಯಾವಂತರನ್ನು ಮತ್ತು ಸಂಸ್ಕಾರವಂತ ಪ್ರಜೆಗಳನ್ನು ನೀಡುವ ಸಲುವಾಗಿಯೆ ಆಗಿತ್ತು ಆ ಪರಂಪರೆ ಇಂದಿಗು ಮುಂದುವರೆದು ಸಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ ಕೆಲವು ಹಣಗಳಿಕೆಗೆ ನಿಂತರೆ ಇನ್ನು ಕೆಲವು ಜಾತಿ.,ಧರ್ಮದ ವೈಭವಕ್ಕೆಇಂಬು ನೀಡುತ್ತವೆ ಆದರೆ ಜ್ಞಾನ ದಾಹ ನೀಗಲೆಂದೇ ಸ್ಥಾಪಿತವಾದ ವೈಟಿಎಸ್ಎಸ್ ಎಂದು ಹಣ,ಅಂತಸ್ತು, ಜಾತಿ,ಧರ್ಮ ದ ಹೆಸರಿನಲ್ಲಿ ಲಾಭಿ ಮಾಡದೆ ಮುನ್ನಡೆಯುತ್ತಿದೆ. ಅದಕ್ಕಗಿಯೆ ಜಿಲ್ಲೆಯಲ್ಲಿಯೆ ಅಚ್ಚುನೆಚ್ಚು ಯಲ್ಲಾಪುರ ತಾಲೂಕಿನವರಿಗೆ ಪ್ರೀತಿ ಹೆಚ್ಚು.



ಸಂಸ್ಥೆಯ ಕನ್ನಡ ಮತ್ತು ಇಂಗ್ಲಿಷ್ ಮಾದ್ಯಮ ಪ್ರೌಡಶಾಲೆ ಹಾಗು ಕಾಲೇಜಿನಲ್ಲು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ, ಉತ್ತಮವಾದ ಗಾಳಿ,ಬೆಳಕು ಶಬ್ದ ಮಾಲಿನ್ಯವಾಗದಂತಹ ವಾತಾವರಣದಲ್ಲಿ ವಿದ್ಯಾರ್ಜನೆ, ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ ವ್ಯವಸ್ಥೆ ಇದೆ. ಸುಂದರ ಮತ್ತು ಮಕ್ಕಳ ಮನಮೆಚ್ಚುವ ಆಟಿಕೆಗಳದಿಗೆ ಗುಣಮಟ್ಟದ ಪ್ರೀಕೆಜಿ ಕ್ಲಾಸ್ ಹತ್ತು ಹಲವು ವೈಷಿಷ್ಟತೆಗಳು ಒಳಗೊಂಡ ಒಂದು ಪರಿಪೂರ್ಣ ಶಿಕ್ಷಣ ಸಂಸ್ಥೆ ವೈಟಿಎಸ್ಎಸ್. ಉತ್ತಮ ಗುಣಮಟ್ಟದ ಭೋದನೆಗೆ ನುರಿತ ಶಿಕ್ಷಕರ ಉಪನ್ಯಾಸಕರ ತಂಡ ಕಚೇರಿ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಭೋಧಕೇತರ ಸಿಬ್ಬಂದಿಗಳು, ಸದಾ ಸ್ವಚ್ಚತಾ ಕಾರ್ಯ ಕೈಗೊಂಡು ಶಿಕ್ಷಣ ಸಂಸ್ಥೆಯ ಪರಿಸರವನ್ನು ಸ್ವಚ್ಚವಾಗಿಡುವ ಶಿಸ್ತು ಬದ್ದ ಡಿ ಗ್ರೂಪ್ ನೌಕರರ ಬಳಗ ಸಂಸ್ಥೆಯ ಗೌರವವನ್ನು ದುಪ್ಪಟ್ಟು ಮಾಡಿದೆ.

ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಕ್ರೀಡಾ ಚಟುವಟಿಕೆಯಲ್ಲು ಸಂಸ್ಥೆಯ ವಿದ್ಯಾರ್ಥಿಗಳು ಹೆಸರು ಗಳಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾಗಿದ್ದಾರೆ ಅದಕ್ಕಾಗಿ ವಿಶಾಲವಾದ ಶಾಲಾ ಮೈದಾನವು ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸದ ಹೊರೆ ಪೋಷಕರಿಗೆ ಹೆಚ್ಚಾಗದಂತೆ ರಿಯಾಯಿತಿ ಶುಲ್ಕವನ್ನು ಭರಣ ಮಾಡಿಕೊಳ್ಳಲಾಗುತ್ತಿದೆ ಇದನ್ನು ಇತರೆ ಶಾಲಾ ಕಾಲೇಜುಗಳಿಗೆ ಹೋಲಿಕೆ ಮಾಡಿದರೆ ಅತಿ ಕಡಿಮೆ ಶುಲ್ಕ ನಿಗದಿಪಡಿಸಲಾಗಿದೆ.

ವೈಟಿಎಸ್ಎಸ್ ನಲ್ಲಿ ವಿದ್ಯಾಬ್ಯಾಸ ಪಡೆದ ಸಹಸ್ರಾರು ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್, ಲಾಯರ್, ಸೈಂಟಿಸ್ಟ್, ರಕ್ಷಣಾ ವ್ಯವಸ್ಥೆ, ಆಡಳಿತ ವ್ಯವಸ್ಥೆ ಮುಂತಾದ ಪ್ರಮುಖ ಸ್ಥರಗಳಲ್ಲಿ ಗೌರವಾನ್ವಿತ ಹುದ್ದೆಗಳಲ್ಲಿದ್ದಾರೆ.

ಒಂದು ಹಂತದಲ್ಲಿ ಹೊರ ಊರು ಅಥವ ಹೊರ ಜಿಲ್ಲೆಗಳಲ್ಲಿ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಗೆ ಹೆಚ್ಚಿನ ಗೌರವವಿದ್ದು ಅಲ್ಲಿನ ವಿದ್ಯಾರ್ಥಿಗಳು ಎಂದು ಕರೆಸಿಕೊಳ್ಳುವುದೆ ಒಂದು ಹೆಮ್ಮೆಯ ಸಂಗತಿಯಾಗಿದೆ.

ಸಂಸ್ಥೆಯ ಆಡಳಿತ ಮಂಡಳಿಯು ಸಹ ತಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಎಲ್ಲದರಲ್ಲು ಮುಂಚೂಣಿಯಲಿದ್ದು ರಾಜ್ಯದಲ್ಲಿಯೆ ಸಂಸ್ಕಾರವಂತ ಶಾಲೆಯಿಂದ ಕಲಿತು ಬಂದವರೆನಿಸಿಕೊಳ್ಳಬೇಕೆಂದು ಬಯಸುವವರಾಗಿದ್ದಾರೆ.
ಸಂಸ್ಥೆಯ ಏಳಿಗೆಯಲ್ಲಿ ಸರ್ಕಾರ ಮಟ್ಟದಿಂದ ಹಿಡಿದು ಮಠ ಮಂದಿರ ಸಂಘಸಂಸ್ಥೆಗಳ ವಿವಿಧ ಸಮೂದಾಯಗಳ ಪ್ರಮುಖರ ರಾಜಕೀಯ ನೇತಾರರ ಅಭಯವಿದ್ದು ಸಂಸ್ಥೆಯ ಗೌರವವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಸಂಸ್ಕಾರವಂತರಲ್ಲದೆ ಸಾಂಸ್ಕೃತಿಕವಾಗಿಯು ಸಂಸ್ಥೆಯ ವಿದ್ಯಾರ್ಥಿಗಳು ಸಂಗೀತ, ಸಾಹಿತ್ಯ, ನಾಟ್ಯ,ಭಾಷಣ,ನಾಟಕ, ಚಿತ್ರಕಲೆ ವಿವಿಧ ಪ್ರಾಕಾರಗಳಲ್ಲಿ ಕರಗತರಾಗಿದ್ದಾರೆ.
ಒಂದು ಹಂತದಲ್ಲಿ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆ ಕೇವಲ ವಿದ್ಯೆ ಎನ್ನುವುದಕ್ಕಿಂತ ಮಿಗಿಲಾಗಿ ಸಂಸ್ಕಾರವಂತ ಭಾರತೀಯ ಸಂಸ್ಕೃತಿ ಕಲಿಸುವ ವಿಶ್ವವಿದ್ಯಾಲಯ ಎಂದರೆ ಅದು ಸಮಂಜಸ ಎನ್ನಬಹುದು.

ಇಂತಹ ಶೈಕ್ಷಣಿಕ ಪುಣ್ಯ ಸ್ಥಳ ಜ್ಞಾನದಾಹ ನೀಗುವ ಯಲ್ಲಾಪುರ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆ ನೂರಾರು ವರ್ಷ ಲಕ್ಷೋಪ ಲಕ್ಷ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಲಿ ಭಾರತೀಯ ಸಂಸ್ಕೃತಿ, ಈ ನೆಲದ ಸ್ವಾಭಿಮಾನ ಮತ್ತು ಸಂಸ್ಕಾರ ಉಳಿಸಿ ಬೆಳೆಸುವಂತಾಗಲಿ. ಆ ನಿಟ್ಟಿನಲ್ಲಿ ಪೋಷಕರು ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಲಾಗಿ ಸಂಸ್ಕಾರವಂತ ವಿದ್ಯೆಗಾಗಿ ನಿಮ್ಮದೆ ಸಂಸ್ಥೆ ಎಂಬ ಅಭಿಮಾನಕ್ಕಾಗಿ ನಿಮ್ಮ ಮಕ್ಕಳನ್ನು ಹಾಗು ಅಕ್ಕಪಕ್ಕದ ಮನೆಯ ಮಕ್ಕಳನ್ನು ಇದೇ ಶಿಕ್ಷಣ ಸಂಸ್ಥೆಗೆ ಸೇರಿಸುವಂತೆ ಸಹಕರಿಸಿ.
” ಜ್ನಾನಕ್ಕಿಂತ ಮಿಗಿಲು ಯಾವುದು ಇಲ್ಲ
ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಂತೆ ಮತ್ತೊಂದಿಲ್ಲ”

Prathidvani Yellapura