Breaking News

ಪಾದಚಾರಿ ಸಂಚಾರಕ್ಕೆ ಫುಟ್ ಪಾಥ್ ಮುಕ್ತವಾಗಿರಲಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಎಲ್ಲೆಂದರಲ್ಲಿ ಪಾದಚಾರಿ ಮಾರ್ಗವನ್ನು ಗೂಡಂಗಡಿಕಾರರು ಅತಿಕ್ರಮಣ ಮಾಡಿದ್ದು ಸಂಚರಿಸಲು ರಸ್ತೆಯನ್ನೇ ಅವಲಂಬಿಸಬೇಕಾದ ಸ್ಥಿತಿ ಒದಗಿ ಬಂದಿದೆ.


ವಯೋವೃದ್ಧರು, ಮಹಿಳೆಯರು, ಮಕ್ಕಳು ವಿಶೆಷವಾಗಿ ಅಂಗವಿಕಲರು ಪಟ್ಟಣದಲ್ಲಿ ಸಂಚರಿಸಲು ಭಯ ಪಡುವ ವಾತಾವರಣವಿದೆ. ಪಟ್ಟಣಕ್ಕೆಂದೇ ಇರುವ ಮೊಳ ಉದ್ದದ ರಸ್ತೆಯಲ್ಲಿ ಗೂಡಂಗಳಿಗಳ ಆರ್ಭಟವೇ ಹೆಚ್ಚಾಗಿದ್ದು ಸಂಚರಿಸಲು ಸ್ಥಳವೇ ಇಲ್ಲದಂತಾಗಿದೆ. ಗಾಂಧಿ ಚೌಕದಿಂದ ಬಸ್ ನಿಲ್ದಾಣದವರೆಗೆ , ಬೆಲ್ ರಸ್ತೆ, ಬಸ್ ನಿಲ್ದಾಣದ ಮುಂಭಾಗ , ಬಸವೇಶ್ವರ ವೃತ್ತ , ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟಿçÃಯ ಹೆದ್ದಾರಿಯ ಅಕ್ಕಪಕ್ಕ ಗೂಡಂಗಳಿಗಳು ಪಾದಚಾರಿಗಳಿಗೆ ಸ್ಥಳವಿಲ್ಲದಂತೆ ಮಾಡಿದೆ.


ಈ ಕುರಿತು ಅನೇಕ ಬಾರಿ ಪತ್ರಿಕೆಗಳು ಜಾಗೃತಿ ಮೂಡಿಸುವ ಸುದ್ದಿಗಳನ್ನು ಭಿತ್ತರಿಸಿದರೂ ಪ್ರಯೋಜನ ಮಾತ್ರ ಶೂನ್ಯವಾಗಿದೆ. ಇದೀಗ ಮಾವಿನ ಹಣ್ಣಿನ ಕಾಲವಾಗಿದ್ದು ಹಣ್ಣಿನ ಮಾರಾಟಕ್ಕಾಗಿ ವ್ಯಾಪಾರಿಗಳು ಅಂಗಡಿಗಳನ್ನು ರಸ್ತೆಗೆ ತಂದಿದ್ದಾರೆ. ಇದರಿಂದ ಒಂದೆಡೆ ಸಂಚಾರಕ್ಕೆ ತೊಂದರೆಯಾಗಿದ್ದಲ್ಲದೇ ದ್ವಿಚಕ್ರ ವಾಹನ ನಿಲುಗಡೆಗೂ ಸ್ಥಳವಿಲ್ಲದಂತಾಗಿದೆ.


ಸಂಬಧಪಟ್ಟ ಇಲಾಖೆಗಳು ಗಂಭಿರವಾಗಿ ಸಮಸ್ಯೆ ಪರಿಹಾರಕ್ಕೆ ಚಿಂತಿಸಬೇಕಿದೆ. ವ್ಯಾಪಾರಿಗಳಲ್ಲಿ ಬಹಳಷ್ಟು ಮಂದಿ ಅದನ್ನೇ ನಂಬಿ ಬದುಕು ನಡೆಸುತ್ತಿರುವುದರಿಂದ ಅವರಿಗೂ ಸಮಸ್ಯೆಯಾಗದಂತೆ ಪಾದಚಾರಿಗಳಿಗೂ ತೊಂದರೆಯಾಗದAತೆ ಪರಿಹಾರ ಮಾರ್ಗೋಪಾಯವನ್ನು ಕಂಡುಕೊಳ್ಳಬೇಕಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

ಈ ಸಮಸ್ಯೆ ನಮ್ಮ ಗಮನದಲ್ಲಿದ್ದು ಪಾದಚಾರಿ ಮಾರ್ಗ ಪಾದಚಾರಿಗಳಿಗೇ ಮೀಸಲಿರಿಸಲು ಎರಡು ಬಾರಿ ಒತ್ತುವರಿ ಮಾಡಿರುವ ಗೂಡಂಗಡಿಕಾರರಿಗೆ ನೋಟೀಸು ನೀಡಿ ಎಚ್ಚರಿಸಲಾಗಿದೆ. ಜಾತ್ರಾ ಸಂದರ್ಭದಲ್ಲಿ ತೆರವುಗೊಳಿಸಲಾಗಿತ್ತು. ನಂತರದಲ್ಲಿ ಮತ್ತೆ ಯಥಾಪ್ರಕಾರ ಮುಂದುವರೆದಿದೆ. ಬೆಲ್ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯ ಮೇಲ್ಭಾಗದಲ್ಲಿ ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ವ್ಯವಸ್ಥೆ ಕಲ್ಪಿಸಲು ಚಿಂತಿಸಿದ್ದು ಶಿಘ್ರದಲ್ಲೇ ಸಮಸ್ಯೆಗೆ ಪರಿಹಾರ ದೊರೆಯಲಿದೆ. – ಸಂಗನಬಸಯ್ಯಾ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ


[ ಪಾದಚಾರಿ ಮಾರ್ಗವನ್ನು ಅಂಗಡಿಗಳಿಗಾಗಿ ಬಳಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಸಂಬಂಧಿಸಿದ ಪಟ್ಟಣ ಪಂಚಾಯತ ಅಧಿಕಾರಿಗಳೊಂದಿಗೆ ಚರ್ಚಿಸಿ ಪುಟ್‌ಪಾತ್ ಅತಿಕ್ರಮಣ ತೆರವು ಮಾಡುವ ಕುರಿತು ಕ್ರಮ ಕೈಗೊಳ್ಳಲಾಗುವುದು. ರಂಗನಾಥ ನೀಲಮ್ಮನವರ್, ಪಿಐ, ಯಲ್ಲಾಪುರ]

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

2025 ನೆ ಸಾಲಿನ ಯಲ್ಲಾಪುರ ಗಣಪತಿಗಳ ದಿವ್ಯ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ …

Leave a Reply

Your email address will not be published. Required fields are marked *