
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ –ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಮುಗಿದು ಪಲಿತಾಂಶ ಪ್ರಕಟವಾಗಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಗೆಲುವು ಸಾಧಿಸಿದ್ದಾಗಿದೆ ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಗೆಲುವಿನ ಅಂತರ ಹೆಚ್ಚಾಗದಿರುವುದರ ಕುರಿತು ಲೆಕ್ಕಚಾರ ನಡೆದಿದೆ.
ಕ್ಷೇತ್ರದ ಶಾಸಕ ಗದ್ದುಗೆ ಅರಬೈಲ್ ಶಿವರಾಮ ಹೆಬ್ಬಾರ್ ಪಾಲಾಗಿದೆ. ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿದರೆ ಹೆಬ್ಬಾರ್ ಗೆಲುವಿನ ಅಂತರ ಕನಿಷ್ಟಪಕ್ಷ ಎಂದರು 20,000 ಗಡಿ ದಾಟಬೇಕಿತ್ತು. ಹೆಬ್ಬಾರ್ ಅವರು ಪ್ರತಿ ಸಭೆಯಲ್ಲಿ ಯಲ್ಲಾಪುರ ಮುಂಡಗೋಡು ನನ್ನ ಎರಡು ಕಣ್ಣುಗಳಂತೆ ಎನ್ನುತ್ತಿದ್ದರು ಮತ್ತು ಮಾತಿನಂತೆ ನಡೆದು ಒಂದು ತೂಕ ಹೆಚ್ಚು ಮುಂಡಗೋಡು ತಾಲೂಕಿಗೆ ಅಭಿವೃದ್ಧಿ ಅನುದಾನ ನೀಡುತ್ತಿದ್ದರು ಆದರೆ ಅತಿ ಪ್ರೀತಿ ತೋರಿದ ಮುಂಡಗೋಡು ಹಿನ್ನಡೆ ಅನುಭವಿಸುವಂತೆ ಮಾಡಿತು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗಿನಿಂದ ಹೆಬ್ಬಾರ್ ಅವರನ್ನು ಒಪ್ಪಿಕೊಳ್ಳದ ಒಂದು ವರ್ಗ ನಿದಾನವಾಗಿ ಅವರ ಸುತ್ತಲಿನವರ ಮೇಲೆ ಮುನಿಸು ಹೆಚ್ಚಿಸಿಕೊಂಡು ಹೇಗಾದರು ಸೋಲುಣಿಸಲೇಬೇಕೆಂದು ಪಣತೊಟ್ಟು ಒಳಗೊಳಗೆ ಪಿತೂರಿ ಮಾಡುವ ಕೆಲವರು ಮತ್ತು ಬಹಿರಂಗವಾಗಿ ವಿರೋದಿಸುವವರು ಪ್ರಸಕ್ತ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರಯತ್ನಿಸಿದರು ಆದರು ಅವರೆಲ್ಲರ ಪ್ರಯತ್ನ ಗೆಲುವನ್ನು ತಡೆಯಲು ಸಾದ್ಯವಾಗಲಿಲ್ಲ ಬದಲಾಗಿ ಗೆಲುವಿನ ಅಂತರ ಕಡಿಮೆಯಾಗಿಸುವಲ್ಲಿ ಮಾತ್ರ ಯಶಸ್ವಿಯಾದರೆನ್ನಲಾಗಿದೆ.

ಒಂದು ಹಂತದಲ್ಲಿ ಹೆಬ್ಬಾರ್ ಗೆಲುವು ಅವರ ವೈಯಕ್ತಿಕ ವರ್ಚಸ್ಸಿನ ಗೆಲುವಾಗಿದೆ. ಪ್ರತಿನಿತ್ಯ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕಟ್ಟಕಡೆಯ ವ್ಯಕ್ತಿಯನ್ನು ಕಡೆಗಣಿಸದೆ ಹೆಗಲ ಮೇಲೆ ಕೈ ಹಾಕಿ ಅವರ ಕಷ್ಟ ನಷ್ಟಗಳನ್ನು ಆಲಿಸಿ ಕೈಲಾದ ಸಹಾಯ ಮಾಡಿದ ಅವರ ಬಡವರ ಸೇವೆಯೆ ಮತಗಳಾಗಿ ಗೆಲುವಿನ ದಡ ತಲುಪಿಸಿದೆ ಎನ್ನುತ್ತಾರೆ ಹೆಬ್ಬಾರ್ ಅವರನ್ನು ಹತ್ತಿರದಿಂದ ಬಲ್ಲವರು. ಹೆಬ್ಬಾರ್ ಅವರ ಸೋಲನ್ನು ಬಯಸುತ್ತಿದ್ದವರ ಪ್ರಯತ್ನ ಅವರ ಮಟ್ಟದಲ್ಲಿ ಉಳಿಯಿತೆ ಹೊರತು ಮತದಾರ ತಾನು ಮೊದಲೆ ನಿರ್ಧರಿಸಿದ.ತೆ ಹೆಬ್ಬಾರ್ ಬೆನ್ನಿಗೆ ನಿಂತುಬಿಟ್ಟಿದ್ದ ಅದಕ್ಕೆ ನಿದರ್ಶನ ಯಲ್ಲಾಪುರ ತಾಲೂಕಿನ ಗ್ರಾಮೀಣ ಭಾಗದ ಮತ ಚಲಾವಣೆಯ ಕಡೆಗೆ ಗಮನ ಹರಿಸಿದರೆ ತಿಳಿಯಲಿದೆ ಪಕ್ಷದೊಳಗಿನ ಕುತಂತ್ರಿಗಳ ತಂತ್ರ ಫಲಿಸದೆ ಹೆಬ್ಬಾರ್ ಗೆಲುವು ದಾಖಲಿಸಲಾಗಿದೆ ಎನ್ನುತ್ತಾರೆ ಹೆಬ್ಬಾರ್ ಆಪ್ತರು.





Prathidvani Yellapura